ವೇಗದಲ್ಲಿ ಬರುತ್ತಿರುವ ಟ್ರೈನ್ ಮುಂದೆ ರೀಲ್ ಮಾಡುತ್ತಿದ್ದ ಹೀರೋ! ಟ್ರೈನ್ ಢಿಕ್ಕಿ ಹೊಡೆದ ದೃಶ್ಯದ Video ವೈರಲ್!
ತೆಲಂಗಾಣದಲ್ಲಿ ರೇಲ್ವೆ ಟ್ರ್ಯಾಕ್ ಮೇಲೆ ಇನ್ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದ ಹುಡುಗನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಪ್ರಸ್ತುತ ಘಟನೆ ಸೆಪ್ಟೆಂಬರ್ 4 ರಂದು ಹನುಮಕೊಂಡ ಜಿಲ್ಲೆಯಲ್ಲಿ ನಡೆದಿದೆ.
17 ವರ್ಷದ ಹುಡುಗ ಅಕ್ಷಯ್ ರಾಜ ವಿಡಿಯೋ ಮಾಡಲು ಕಾಜಿಪೇಟ್ ರೇಲ್ವೆ ಸ್ಟೇಷನ್ ಬಳಿಗೆ ಹೋಗಿದ್ದ. ವಿಡಿಯೋದ ಮೇಲಿಂದ ಗೊತ್ತಾಗುತ್ತದೆ ಹುಡುಗ ಟ್ರ್ಯಾಕ್ ಸಮೀಪದಿಂದ ತುಂಬಾ ಸ್ಟೈಲ್ ನಲ್ಲಿ ಹೋಗುತ್ತಿದ್ದಾನೆ. ಹಿಂದಿನಿಂದ ವೇಗದಲ್ಲಿ ಬರುತ್ತಿರುವ ಟ್ರೈನ್ ಗೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾನೆ. ಅದರ ಪರಿಣಾಮವಾಗಿ ಟ್ರೈನ್ ಹುಡುಗನಿಗೆ ಜೋರಾಗಿ ಢಿಕ್ಕಿ ಹೊಡೆದಿದೆ. ರೈಲಿನ ವೇಗದ ಹೊಡೆತಕ್ಕೆ ಹುಡುಗ ಜೋರಾಗಿ ನೆಲಕ್ಕೆ ಅಪ್ಪಳಿಸುತ್ತಾನೆ. ಈ ಅಪಘಾತದಲ್ಲಿ ಹುಡುಗ ತೀವ್ರವಾಗಿ
ಗಾಯಗೊಂಡಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ಈ ಇನ್ಸಿಡೆಂಟ್ ನ ವಿಡಿಯೋ ಸದ್ಯಕ್ಕೆ ಜೋರಾಗಿ ವೈರಲ್ ಆಗುತ್ತಿದೆ. ಈ ಘಟನೆಯ ನಂತರ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಂದಿದೆ. ಆ ವಿಡಿಯೋದಲ್ಲಿ ಹುಡುಗ ತೊಟ್ಟುಕೊಂಡ ಬಟ್ಟೆಯ ಮೇಲೆ ಸಾಕಷ್ಟು ರಕ್ತದ ಕಲೆಗಳು ಬಿದ್ದಿವೆ. ತಲೆಗೆ ಬ್ಯಾಂಡೇಜ್ ಮಾಡಲಾಗಿದೆ ಮತ್ತು ವ್ಯಕ್ತಿಯೊಬ್ಬ ಆತನ ಹತ್ತಿರ ಕುಳಿತಿದ್ದಾನೆ. ನಂತರ ಆತನಿಗೆ ಅಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಗಿದೆ. ಪ್ರಸ್ತುತ ಹುಡುಗ ಕಳೆದ ವರ್ಷ ಎಸ್ ಎಸ್ ಎಲ್ ಸಿ ಮುಗಿಸಿ ಕಾಲೇಜ್ ಜೀವನ ಪ್ರಾರಂಭಿಸಿದ್ದಾನೆ.
ಮೀಡಿಯಾ ರಿಪೋರ್ಟ್ ಪ್ರಕಾರ, ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಅಕ್ಷಯ್ ಗೆ ತಲೆಯಲ್ಲಿ ಗಂಭೀರವಾದ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಾರೆ. ಹಾಗೂ ಇಂಟರ್ನಲ್ ಬ್ಲಡ್ಡಿಂಗ್ ಸಹ ಆಗಿದೆ ಎಂದು ತಿಳಿದು ಬಂದಿದೆ. ಆತನ ಸದ್ಯದ ಆರೋಗ್ಯ ತುಂಬಾ ಗಂಭೀರವಾಗಿದ್ದರಿಂದ ಹೈದರಾಬಾದ್ ಆಸ್ಪತ್ರೆಗೆ ಟ್ರಾನ್ಸ್ಫರ್ ಮಾಡುವ ಸಲಹೆಯನ್ನು ಅಲ್ಲಿಯ ಡಾಕ್ಟರ್ ಗಳು ನೀಡಿದ್ದಾರೆ.
ವೀಡಿಯೋ ನೋಡಿ
17-year-old grievously injured while making Instagram reel at railway track near Kazipet in #Telangana. pic.twitter.com/2iuisZdVCj
— Ashish (@KP_Aashish) September 5, 2022
ಟೈಮ್ಸ್ ಆಫ್ ಇಂಡಿಯಾ ನೀಡಿದ ರಿಪೋರ್ಟ್ ಪ್ರಕಾರ, ಈ ಹುಡುಗನ ವಿರುದ್ಧ ಕಾಜಿಪೆಟ್ನಲ್ಲಿ ಒಂದು ಕೇಸ್ ಸಹ ದಾಖಲಾಗಿದೆ. ಅಕ್ಷಯ್ ಮತ್ತು ಆತನ ಮಿತ್ರ ದಯಾಸಾಗರ್ ಇಬ್ಬರೂ ರೈಲ್ವೆ ಟ್ರ್ಯಾಕ್ ಹತ್ತಿರ ಇನ್ಸ್ಟಾಗ್ರಾಮ್ ರೀಲ್ ಮಾಡಲು ಹೋಗಿದ್ದರು. ಅಕ್ಷಯನ ತಾಯಿ ಮತ್ತು ಸಹೋದರ ಇಬ್ಬರು ದಿನಂಪ್ರತಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಕೆಲವೇ ದಿವಸಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಅಕ್ಷಯ್ ನ ತಂದೆಯು ಮರಣಿಸಿದ್ದಾನೆ. ಪ್ರಸ್ತುತ ವಿಡಿಯೋ ಟ್ವೀಟರ್ ನಲ್ಲಿ ತುಂಬಾನೇ ವೈರಲ್ ಆಗಿದ್ದು ಈ ವಿಡಿಯೋ ಇಲ್ಲಿಯವರೆಗೆ 7.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.