ಅಬ್ಬಾ! ನೋಡು ನೋಡುವಷ್ಟರಲ್ಲೇ ಹೆಮ್ಮರವನ್ನು ಉರುಳಿಸಿಬಿಟ್ಟ ಆನೆ! ‘ಆನೆ ಬಲ’ ನೋಡಬೇಕೆಂದರೆ ಈ ವಿಡಿಯೋ ನೋಡಿ!
ಆನೆಯನ್ನು ಗಜರಾಜ, ಸಲಗ ಎಂತೆಲ್ಲಾ ಬೇರೆ ಬೇರೆ ಹೆಸರುಗಳಿಂದ ನಾವು ಕರೆಯುತ್ತೇವೆ. ದೊಡ್ಡ ಗಾತ್ರದ ದೇಹವನ್ನು ಹೊಂದಿರುವ, ಅಗಲವಾದ ಕಿವಿಗಳನ್ನು ಹೊಂದಿ, ಸಣ್ಣ ಕಣ್ಣುಗಳ ಈ ಪ್ರಾಣಿಯ ವಿಶೇಷತೆ ಎಂದರೆ ಅದರ ಸೊಂಡಿಲು ಹಾಗೂ ದಂತಗಳು. ಆನೆ ದಂತಕ್ಕೆ ಯಾವ ಮಟ್ಟದಲ್ಲಿ ಬೆಲೆ ಇದೆ ಎಂಬುದು ನಮಗೆ ತಿಳಿದೇ ಇದೆ. ಆನೆ ತನ್ನ ಬಲ ಅಥವಾ ಶಕ್ತಿಗೆ ಕೂಡಾ ಹೆಸರಾಗಿದೆ. ಸಾಮಾನ್ಯವಾಗಿ ಬಲದ ವಿಚಾರವಾಗಿ ಹೇಳುವಾಗ ಆನೆ ಬಲ ಎನ್ನುವ ಪದವನ್ನು ಕೂಡಾ ಬಳಸುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆನೆ ತನ್ನ ಈ ಬಲದಿಂದಾಗಿಯೇ ಭಾರೀ ತೂಕವನ್ನು ಹೊರುವ ಹಾಗೂ ತಳ್ಳುವ ಸಾಮರ್ಥ್ಯ ಹೊಂದಿರುತ್ತದೆ.
ನಮ್ಮ ಮೈಸೂರು ದಸರಾ ಸಂದರ್ಭದಲ್ಲಿ ನೂರಾರು ಕೆಜಿ ಭಾರೀ ಗಾತ್ರದ ಅಂಬಾರಿಯನ್ನು ಬೆನ್ನ ಮೇಲೆ ಹೊತ್ತು ಜಂಬೂ ಸವಾರಿ ಹೊರಟ ಆನೆಯನ್ನು ನೋಡಿದರೆ ಸಾಕು ಅದರ ಬಲ, ಶಕ್ತಿಯ ಪರಿಚಯವಾಗಿ ಬಿಡುತ್ತದೆ. ಆನೆಗಳು ಬಲದಲ್ಲಿ ಮಾತ್ರವೇ ಅಲ್ಲ ಬುದ್ಧಿ ಶಕ್ತಿಯಲ್ಲಿ ಕೂಡಾ ಚುರುಕು ಎನ್ನಲಾಗಿದೆ. ಕೋಪ ಗೊಂಡ ಆನೆ ಅಥವಾ ಮದವೇರಿದ ಆನೆಯ ಮುಂದೆ ಏನಾದರೂ ಯಾರಾದರೂ ಹೋದರೆ ಅಥವಾ ಯಾವುದಾದರೂ ವಸ್ತು ಇದ್ದರೆ ಅದು ಖಂಡಿತ ನಜ್ಜು ಗುಜ್ಜಾಗುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ಇಂತಹ ಭಾರೀ ಶಕ್ತಿಯ ಆನೆಯನ್ನು ಕೂಡಾ ಮಾನವ ಪಳಗಿಸುವುದು ಒಂದು ಅದ್ಭುತವೇ ಸರಿ ಅಲ್ಲವೇ?
ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ನೋಡುಗರ ಗಮನವನ್ನು ಸೆಳೆಯುತ್ತಿದ್ದು, ಈ ವೀಡಿಯೋ ಕೂಡಾ ಆನೆಯ ಬಲ ಎಂತದ್ದು ಎಂಬುದನ್ನು ಅಕ್ಷರಶಃ ನಮಗೆ ದರ್ಶನ ಮಾಡಿಸುತ್ತದೆ ಎಂದರೆ ತಪ್ಪಾಗಲಾರದು. ಮರವೊಂದನ್ನು ಉರುಳಿಸಬೇಕಾದರೆ ಮನುಷ್ಯರು ಸಾಕಷ್ಟು ಪರಿಶ್ರಮವನ್ನು ಪಡಲೇಬೇಕು. ಆದರೆ ಇಲ್ಲೊಂದು ಆನೆ ತಾನು ಮರಕ್ಕೆ ಗುದ್ದಿ ಗುದ್ದಿ ಅದನ್ನು ನೆಲಕ್ಕೆ ಉರುಳುವಂತೆ ಮಾಡಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಇಂತಹ ಒಂದು ರೋಚಕ ವೀಡಿಯೋವನ್ನು ಹಂಚಿಕೊಂಡವರು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು.
ಸೆಪ್ಟೆಂಬರ್ ಆರರಂದು ಅವರು ಈ ವೀಡಿಯೋ ಶೇರ್ ಮಾಡಿದ್ದು, ಶೀರ್ಷಿಕೆಯಲ್ಲಿ ಆನೆಯ ಬಲವನ್ನು ಕಂಡು ಆಶ್ಚರ್ಯ ಪಡಬೇಡಿ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ 18 ಸಾವಿರಕ್ಕೂ ಅಧಿಕ ಜನರಿಂದ ಈ ವೀಡಿಯೋ ವೀಕ್ಷಿಸಲ್ಪಟ್ಟಿದ್ದರೆ, ಎರಡೂವರೆ ಸಾವಿರ ದಾಟಿದ ಲೈಕ್ ಗಳನ್ನು ಪಡೆದುಕೊಂಡಿದೆ. ಇದನ್ನು ನೋಡಿದ ನೆಟ್ಟಿಗರು ಕೂಡಾ ಬಹಳ ಆಕರ್ಷಕವಾದ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೂ ಕೂಡಾ ಆನೆಯ ಬಲವನ್ನು ನೋಡಿ ಮೆಚ್ಚಿಕೊಂಡಿರುವುದು ಮಾತ್ರ ಸತ್ಯ.
ವಿಡಿಯೋ ನೋಡಿ….
Don’t be surprised by the strength of the elephant💪 pic.twitter.com/DtoectDCNA
— Susanta Nanda IFS (@susantananda3) September 6, 2020
ಟ್ವಿಟರ್ ಬಳಕೆದಾರರೊಬ್ಬರು ಅದ್ಭುತ!!! ಆದರೆ ಆನೆ ಹೀಗೆ ಏಕೆ ಮಾಡಿತು? ಎಂದು ಪ್ರಶ್ನೆ ಮಾಡಿದರೆ, ಮತ್ತೊಬ್ಬ ಬಳಕೆದಾರರು ಬಹುಶಃ ಯಾವುದೋ ಕಾರಣದಿಂದಲೇ ಹೀಗೆ ಮಾಡಿರಬೇಕು ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಬಹುಶಃ ಸಂಸಾರ ಜೀವನದಿಂದ ರೋಸಿ ಹೋಗಿರಬೇಕು, ಮಕ್ಕಳು ಕಾಟ ನೀಡುತ್ತಿರಬಹುದು, ಅದಕ್ಕೆ ಈ ರೀತಿ ಮಾಡಿರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು ಆನೆಯ ಬಲವನ್ನು ಅಂದಾಜಿಸಲು ಸಾಧ್ಯವಿಲ್ಲ ಎನ್ನುವುದು ಇದಕ್ಕೆ ಎಂದು ಕೂಡಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.