Trending Video : ಕೆರೆಯಲ್ಲಿ 2 ಜಿಂಕೆ ಮತ್ತು 1 ಚಿರತೆ ಒಟ್ಟಿಗೆ ನೀರು ಕುಡಿಯುತ್ತಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ…

ವಿಶೇಷವಾದ, ರೋಚಕ ಹಾಗೂ ಅಪರೂಪದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಬಹಳ ಸಮಯ ಬೇಕಾಗುವುದಿಲ್ಲ. ಇಂಥ ದೃಶ್ಯಗಳನ್ನು ನೋಡುವಾಗ ನಮ್ಮ ಕಣ್ಣುಗಳಿಗೆ ವಿಶ್ವಾಸವೇ ಮೂಡುವುದಿಲ್ಲ. ಸದ್ಯ ಇದೇ ರೀತಿಯ ವಿಶ್ವಾಸಕ್ಕೆ ದೂರವಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತುಂಬಾ ವೇಗದ ಬೇಟೆಯಾಡುವುದರಲ್ಲಿ ನಿಸ್ಸೀಮವಾಗಿರತಕ್ಕಂತಹ ಪ್ರಾಣಿಯೆಂದರೆ ಚಿರತೆ. ಈ ಪ್ರಾಣಿಯು ತನ್ನ ಆಹಾರಕ್ಕಾಗಿ ಇತರ ಪ್ರಾಣಿಗಳ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಚಿರತೆ ಹೆಚ್ಚಾಗಿ ಜಿಂಕೆಗಳ ಬೇಟೆಯಾಡುವದನ್ನು ನೋಡುತ್ತೇವೆ. ಜಿಂಕೆಯಂಥ ಸಾಧು ಪ್ರಾಣಿಗಳು ತಮಗಿಂತ ಬಲಶಾಲಿಯಾದ ಚಿರತೆ, ಹುಲಿ, ಸಿಂಹ ಈ ಪ್ರಾಣಿಗಳಿಂದ ಆದಷ್ಟು ದೂರವಿರಲು ಯತ್ನಿಸುತ್ತವೆ. ಕಾಡಿನಲ್ಲಿ ಹೀಸ್ರ ಪ್ರಜಾತಿಯ ಪ್ರಾಣಿಗಳೊಡನೆ ಶಾಂತವಾದ ಸಾಧು ಪ್ರಾಣಿಗಳು ಒಟ್ಟಿಗೆ ಕಾಣಿಸುವ ದೃಶ್ಯ ತುಂಬಾ ಅಪರೂಪವೇ ಎನ್ನಬಹುದು. ಆದರೆ ಪ್ರಸ್ತುತ ವಿಡಿಯೋದಲ್ಲಿ ಕೆರೆಯ ದಂಡೆಗೆ ಚಿರತೆಯ ಹತ್ತಿರಯಲ್ಲಿಯೇ 2 ಜಿಂಕೆಗಳು ನಿಂತು ನೀರು ಕುಡಿಯುತ್ತಿರುವ ಅಪರೂಪದ ದೃಶ್ಯದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿದೆ. ಆ ಸಂದರ್ಭದಲ್ಲಿ ಚಿರತೆ ಎದುರಿಗೆ ಕಾಣುತ್ತಿರುವ 2 ಜಿಂಕೆಗಳ ಬೇಟೆಯಾಡುವ ಸಹಜ ಪ್ರಯತ್ನವನ್ನೂ ಸಹ ಮಾಡುವುದಿಲ್ಲ. ಮತ್ತು ಜಿಂಕೆಗಳು ಸಹ ಚಿರತೆಗೆ ಹೆದರಿ ಅಲ್ಲಿಂದ ಓಡಿ ಹೋಗುವ ಯತ್ನ ಮಾಡಿಲ್ಲ. ಇದೇ ದೃಶ್ಯವು ನೇಟಿಜನ್ಸ್ ಗಳಿಗೆ ತುಂಬಾ ಆಶ್ಚರ್ಯವನ್ನುಂಟುಮಾಡುತ್ತಿದೆ.

ವಿಡಿಯೋ ನೋಡಿ

ಈ ಅಪರೂಪದ ಮತ್ತು ವಿಶ್ವಾಸಕ್ಕೆ ದೂರವಾದ ವಿಡಿಯೋವನ್ನು ಐಎಫ್ಎಸ್ ಆಫೀಸರ್ ಆದ ಸುರೇಂದ್ರ ಮೆಹರಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ವಿಡಿಯೋದ ಕ್ಯಾಪ್ಶನ್ ನಲ್ಲಿ ‘ಕಾಡು ಪ್ರಾಣಿಗಳು ಎಂದಿಗೂ ತಮಾಷೆಗಾಗಿ ಬೇಟೆಯಾಡುವುದಿಲ್ಲ’, ಎಂದಿದ್ದಾರೆ. ಈ ಕಾಡುಪ್ರಾಣಿಗಳು ತಮಗೆ ಹಸಿವೆಯಾದಾಗ ಮಾತ್ರ ಬೇರೆ ಪ್ರಾಣಿಗಳ ಬೇಟೆಯಾಡುತ್ತವೆ. ಈ ಕಾಡು ಪ್ರಾಣಿಗಳು ಹೊಟ್ಟೆ ಹಸಿವಾದಾಗಲಷ್ಟೇ ಬೇಟೆಯಾಡುತ್ತವೆ ವಿನಹ ಆಟವೆಂದು ತಿಳಿದು ಬೇಟೆಯಾಡುವುದಿಲ್ಲ.