ಟರ್ಕಿ ಭೂಕಂಪ; ಅವಶೇಷಗಳ ಅಡಿ ಸಿಕ್ಕಿ ಬಿದ್ದಿರುವವರ ಪಾಲಿಗೆ ದೇವರಾದರು ಭಾರತೀಯ ಜೂಲಿ ಮತ್ತು ರೋಮಿಯೋ! ಹೇಗೆ ನೋಡಿ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಇಲ್ಲಿಯವರೆಗೆ ತೀರಿಕೊಂಡವರ ಸಂಖ್ಯೆ 22,000 ಗಡಿ ದಾಟಿದೆ. ಅವಶೇಷಗಳ ಅಡಿಯಲ್ಲಿ ಸಿಕ್ಕವರ ಉಳಿವಿಗಾಗಿ ಇಡೀ ಜಗತ್ತೇ ಸಹಾಯ ಹಸ್ತವನ್ನು ಚಾಚಿದೆ.
ಇದೇ ಸಂದರ್ಭದಲ್ಲಿ ಆಪರೇಷನ್ ದೋಸ್ತ್ ಅಡಿಯಲ್ಲಿ ಭಾರತದಿಂದಲೂ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳ ಸಾಮಾನುಗಳನ್ನು ತೆಗೆದುಕೊಂಡು ಎನ್ ಡಿ ಆರ್ ಎಫ್ ತಂಡ ಟರ್ಕಿಯಲ್ಲಿ ದಾಖಲಾಗಿದೆ.
ಭಾರತದ ಸ್ನಿಫರ್ ನಾಯಿಗಳು ಅವಶೇಷಗಳ ಅಡಿಯಲ್ಲಿಯ ವಾಸನೆ ಹಾಗೂ ಸೌಮ್ಯ ಚಲನವಲನೆಯನ್ನು ತಕ್ಷಣವೇ ಗುರುತಿಸುತ್ತಿವೆ.
ಎನ್ ಡಿ ಆರ್ ಎಫ್ ಸಮೂಹಗಳ ಜೊತೆಗೆ ಕೆಲವು ಸ್ಪಿನ್ನರ್ ನಾಯಿಗಳನ್ನು ಸಹಿತ ಕಳುಹಿಸಲಾಗಿದೆ. ಈ ನಾಯಿಗಳ ಕೆಲಸ ತುಂಬಾ ಸಹಾಯಕ್ಕೆ ಬರುತ್ತಿದೆ. ಈ ನಾಯಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದವರ ತುಂಬಾ ಸಾಮಾನ್ಯ ಚಲನವಲನೆಯನ್ನೂ ಸಹ ಕಂಡುಹಿಡಿಯುತ್ತಿವೆ. ಈ ಗುರುತಿಸುವ ಕೆಲಸವನ್ನು ನಮ್ಮ ನಾಯಿಗಳು ತುಂಬಾ ವೇಗವಾಗಿ ಮಾಡುತ್ತಿವೆ. ಇದರಿಂದಾಗಿ ಅವಶೇಷಗಳ ಅಡಿಯಲ್ಲಿ ಜೀವಂತವಾಗಿರುವವರ ಹಿಂಟ್ ಬೇಗನೇ ಸಿಗುತ್ತಿದೆ.
ಜೂಲಿ ಅವಶೇಷಗಳ ಅಡಿಯಿಂದ ಹುಡುಕಿ ತೆಗೆದಿದೆ ಆರು ವರ್ಷದ ಹುಡುಗಿಯನ್ನು.
ಈ ಸ್ಪಿನ್ನರ್ ನಾಯಿಗಳಲ್ಲಿ ಜೂಲಿ ಮತ್ತು ರೋಮಿಯೋ ಹೆಸರಿನ ನಾಯಿಗಳು ಸದ್ಯ ತುಂಬಾ ಚರ್ಚೆಯಲ್ಲಿವೆ. ಕಳೆದ ದಿನಗಳಲ್ಲಿ ಎನ್ ಡಿ ಆರ್ ಎಫ್ ಪರಿಹಾರ ಕೆಲಸ ವೇಗವಾಗಿ ಮಾಡುತ್ತಿದೆ. ಇಲ್ಲಿಯ ಗಂಜಿಯತೆಪ್ ಪಟ್ಟಣದಲ್ಲಿ ಕಟ್ಟಡಗಳ ಅವಶೇಷಗಳ ಅಡಿಯಿಂದ 6 ವರ್ಷದ ಹುಡುಗಿಯನ್ನು ಯಶಸ್ವಿಯಾಗಿ ಹೊರಗೆ ತೆಗೆದಿದ್ದಾರೆ. ಈ ಹುಡುಗಿಯ ವರೆಗೆ ತಲುಪಲು ಸ್ಪಿನ್ನರ್ ಡಾಗ್ ಜೂಲಿಯ ಮಹತ್ವದ ಪಾತ್ರವಾಗಿತ್ತು. ಕಾರಣ ಜೂಲಿಯೆ ಈ ಹುಡುಗಿಯನ್ನು ಶೋಧಿಸಿತ್ತು. ಸ್ವಲ್ಪ ಸಮಯ ಹೆಚ್ಚು ಕಡಿಮೆಯಾದರೂ ಹುಡುಗಿಯೂ ಜೀವಂತವಾಗಿ ಉಳಿಯುತ್ತಿರಲಿಲ್ಲ.
ಸಂಕಟದ ಈ ಸಮಯದಲ್ಲಿ ಟರ್ಕಿ ಮತ್ತು ಸಿರಿಯ ದೇಶಗಳಿಗೆ ಭಾರತ ಚಾಚಿತು ಸಹಾಯ ಹಸ್ತ.
ಭಾರತ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಹಾಯ ಮಾಡಿದೆ. ತನ್ನ ಸಹಾಯದಲ್ಲಿ ಭಾರತ ಪರಿಹಾರ ಸಾಮಗ್ರಿಗಳನ್ನು, ಮೊಬೈಲ್ ಆಸ್ಪತ್ರೆ ಜೊತೆಗೆ ವಿಶೇಷ ಶೋಧ ಹಾಗೂ ಪರಿಹಾರ ತಂಡಗಳನ್ನು ಕಳುಹಿಸಿದೆ. ಸದ್ಯ ಜಗತ್ತಿನ ಅನೇಕ ದೇಶಗಳು ಟರ್ಕಿಗೆ ಸಹಾಯ ಹಸ್ತ ಚಾಚಿವೆ. ಭಾರತ ಕಳುಹಿಸಿದ ಪರಿಹಾರ ತಂಡದಲ್ಲಿ ಸ್ತ್ರೀಯರು ಸಹ ಇದ್ದಾರೆ.