Video; TV ರಿಪೇರಿಗಾಗಿ ಶಾಪ್ ನೊಳಗೆ ಹೋಗುವ ಮುನ್ನವೇ ನಾಯಿ ಮಾಡಿತು ಚೆನ್ನಾಗಿ “ಫ್ರೀ” ರಿಪೇರ್…

ಇಂಟರ್ನೆಟ್ ತುಂಬಾ ಇಂಟರೆಸ್ಟ್ ಘಟಕವಾಗಿದೆ. ಇದು ಎಲ್ಲರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಇಲ್ಲಿ ಎಲ್ಲವೂ ಅಂಗೈಯಲ್ಲಿಯೇ ಸಿಗುತ್ತದೆ. ಜ್ಞಾನ, ಉದ್ಯೋಗ, ಮನರಂಜನೆ ಹೀಗೆ ಹಲವಾರು ವಿವಿಧ ವಿಷಯಗಳು ಇದು ಮನುಷ್ಯನಿಗೆ ಕ್ಷಣದಲ್ಲಿ ತಂದು ನೀಡುತ್ತದೆ. ಇಲ್ಲಿಂದ ಯಾರು ಏನು ತೆಗೆದುಕೊಳ್ಳುತ್ತಾರೆ ಅದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಆದರ ಮೇಲೆ ಎಲ್ಲವೂ ಡಿಪೆಂಡ್ ಆಗಿದೆ.

ಆದರೆ ಹೆಚ್ಚುವರಿ ಜನ ಇಲ್ಲಿ ತಮ್ಮ ಮೂಡ್ ಫ್ರೆಶ್ ಮಾಡಿಕೊಳ್ಳಲು ಬರುತ್ತಾರೆ, ಇದು ನಿಜ ಅಲ್ವಾ? ಇಲ್ಲಿ ಮನರಂಜನೆಯ ವಿಡಿಯೋಗಳಿಗೆ ಏನೂ ಕಮ್ಮಿ ಇಲ್ಲ. ಎಷ್ಟು ಬೇಡಿದಷ್ಟು ಕಂಟೆಂಟ್ ಗಳು ಇಲ್ಲಿ ಲಭ್ಯವಿವೆ.

ಸದ್ಯ ಇಲ್ಲಿ ನೋಡಲಿರುವ ಒಂದು ವಿಡಿಯೋ ತುಂಬಾ ನ್ಯಾಚುರಲ್ ಆಗಿದೆ. ಪ್ರಸ್ತುತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದದ್ದು ಇದೆ. ವ್ಯಕ್ತಿಯೊಬ್ಬ ತನ್ನ ಕರಾಬ್ ಆದ ಟಿವಿಯನ್ನು ರಿಪೇರಿಗಾಗಿ ಶಾಪ್ ಗೆ ತೆಗೆದುಕೊಂಡು ಹೋಗುತ್ತಿದ್ದಾನೆ. ಪಾಪ ಅದು ಆಸ್ಪತ್ರೆಗೆ ಒಯ್ದು ಅಡ್ಮಿಟ್ ಮಾಡುವ ಮುನ್ನವೇ ಮಾರ್ಗ ಮಧ್ಯದಲ್ಲಿ ತನ್ನ ಕೊನೆಯುಸಿರು ಎಳೆದಿದೆ.

ಏನಾಗಿದೆ ನೋಡೋಣ ಬನ್ನಿ.

ವ್ಯಕ್ತಿ ತನ್ನ ಟಿವಿಯನ್ನು ರಿಪೇರ್ ಗಾಗಿ ಶಾಪ್ ಗೆ ತೆಗೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯದಲ್ಲಿ ನಾಯಿಯೊಂದು ಚಳಿಗೆ ಮುದ್ದಿಯಾಗಿ ಕುಳಿತಿದೆ. ವ್ಯಕ್ತಿ ಕೈಯಲ್ಲಿ ಟಿವಿ ಹಿಡಿದಿದ್ದರಿಂದ ಆತನಿಗೆ ಮುಂದಿನ ದೃಶ್ಯ ಕಂಡರೂ ಕೆಳಗಿನ ದೃಶ್ಯ ಮಾತ್ರ ಕಾಣುತ್ತಿಲ್ಲ. ಹೀಗಾಗಿ ಆತ ನೇರ ನಾಯಿಯ ಮೇಲೆಯೇ ತನ್ನ ಕಾಲು ಕೊಟ್ಟಿದ್ದಾನೆ. ಆಕಸ್ಮಿಕವಾಗಿ ತನ್ನನ್ನು ಯಾರೂ ತುಳಿದರು ಎಂದು ನಾಯಿ ಹಡಬಡಿಸಿ ಏಳಲು ಹೋದಾಗ ವ್ಯಕ್ತಿಯ ಬ್ಯಾಲನ್ಸ್ ತಪ್ಪಿ ಬಿಟ್ಟು ಆ ನಾಯಿಯ ಮೇಲೆಯೇ ಬಿಳಬೇಕೆ? ದೊಡ್ಡದಾದ ಟಿವಿ ಮಾತ್ರ ರಸ್ತೆ ಮೇಲೆ ಬೀಳುತ್ತಲೇ ಕ್ಷಣದಲ್ಲಿ ಡಮಾರ್ ಎಂದು ನುಚ್ಚು ನೂರು ಆಗಿ ಹೋಯಿತು.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿ ಮಜಾ ತೆಗೆದುಕೊಂಡಿದ್ದು ಲಕ್ಷಾವಧಿ ಜನರು ಲೈಕ್ ಮಾಡಿದ್ದಾರೆ.

ಕಾಮೆಂಟ್ ಸೆಕ್ಷನ್ ನಲ್ಲಿ ಯೂಸರ್ಸ್ ಗಳು ತುಂಬಾ ವಿಶೇಷ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬನು ನಾಯಿಯ ಪರವಾಗಿ, ‘ಅಯ್ಯೋ ನನ್ನಷ್ಟಕ್ಕೆ ನನಗೆ ಮಲಗಲು ಬಿಡುವದಿಲ್ಲವಲ್ಲ’ ಎಂದರೆ, ಇನ್ನೊಬ್ಬ ‘ನಾಯಿಯು ಕಚ್ಚಲಿಲ್ಲ ಒಳ್ಳೆಯದಾಯಿತು, ಉಳಿದೆಲ್ಲ ಸೀನ್ ತುಂಬಾ ಚೆನ್ನಾಗಿದೆ’ ಎಂದಿದ್ದಾನೆ.