Video: ಟೀವಿಯಲ್ಲಿಯ ದುಃಖದ ಸೀನ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಮಗು: ‘ನಿಜವಾದ ಫೀಲಿಂಗ್ ಅಂದರೆ ಇದು’ ಎಂದ ನೆಟ್ಟಿಗರು!!
ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾವ ವಿಡಿಯೋ ವೈರಲ್ ಆಗುತ್ತವೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಹುಟ್ಟಿದ ಮಗುವಿನ ಹಿಡಿದು ಮುಪ್ಪಿಗೆ ಬಂದ ವೃದ್ಧರ ವರೆಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ರೀಲ್ಸ್ ಮಾಡೋದರಲ್ಲಿ ಇಂದು ಪುರುಷರಿಗಿಂತ ಸ್ತ್ರೀಯರದೇ ಮೇಲುಗೈ. ಇಂದಿನ ಒಂದು ವರುಷದ ಹುಡಗಿ ಸಹ ಉತ್ತಮವಾದ ರೀಲ್ಸ್ ಮಾಡುತ್ತಾಳೆ ಅಲ್ಲದೆ ನೂರು ವಯಸ್ಸಿನ ಅಜ್ಜಿಯು ಸಹ ಪಡ್ಡೆ ಹುಡುಗರ ನಿದ್ದೆ ಕೆಡಿಸುವೆ ಹಾಗೆ ರೀಲ್ಸ್ ಮಾಡುವದನ್ನು ನಾವು ಎಷ್ಟೋ ನೋಡಿದ್ದೇವೆ.
ಇಂದಿನ ಯುವಪೀಳಿಗೆ ಏನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಬುದ್ಧಿ ತುಂಬಾನೇ ಸ್ಪೀಡ್ ಆಗಿ ಬೆಳೆಯುತ್ತಿದೆ. ಅಲ್ಲದೆ ಮೊಬೈಲ್ ಹಾಗೂ ಅಂತರಜಾಲದ ಸಹಾಯದಿಂದ ಪ್ರತಿಯೊಬ್ಬರೂ ತಮಗೆ ಗೊತ್ತಿರದ ವಿಷಯದ ಬಗ್ಗೆ ಕೆಲ ಸೆಕೆಂಡಗಳಲ್ಲೇ ಮಾಹಿತಿ ಪಡೆದುಕೊಳ್ಳುವರು. ಮೊಬೈಲ್ ಹೊಂದಿದ ಪ್ರತಿ ವ್ಯಕ್ತಿ ತಾನು ಸಹ ಏನಾದರೂ ಮಾಡಿ ಎಲ್ಲೆಡೆಗೆ ಹೆಸರು ಗಳಿಸಬೇಕು ಅನ್ನೋ ಉದ್ದೇಶದಿಂದ ವಿವಿಧ ಪ್ರಕಾರದ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಡುತ್ತಾರೆ. ಯಾರ ಅದೃಷ್ಟ ಮತ್ತು ವಿಡಿಯೋದಲ್ಲಿಯ ಕಂಟೆಂಟ್ ಸೂಪರ್ ಆಗಿರುತ್ತದೆಯೋ ಅವರು ರಾತ್ರೋ ರಾತ್ರಿ ಫೇಮಸ್ ಆಗಿ ಬಿಡುತ್ತಾರೆ.
ರೀಲ್ಸ್ ಮಾಡುವದು ಇದೊಂದು ಪ್ರಕಾರದ ಹವ್ಯಾಸವೇ ಆಗಿದೆ. ಇಂದು ಪ್ರತಿಯೊಬ್ಬರೂ ಮೊಬೈಲ್ ಹೊಂದಿದ್ದಾರೆ, ಮೊಬೈಲ್ ಇದ್ದ ಮೇಲೆ ರೀಲ್ಸ್ ಮಾಡಲೇ ಬೇಕು ಅನ್ನೋ ವಿಚಾರ ಸದ್ಯದಲ್ಲಿ ಚಾಲ್ತಿಯಲ್ಲಿದೆ. ಇಂದು ಒಬ್ಬ ಸಾಧಾರಣ ವ್ಯಕ್ತಿ ಹಿಡಿದು ಪ್ರಸಿದ್ಧ ವ್ಯಕ್ತಿಗಳು ಸಹ ರೀಲ್ಸ್ ಮಾಡುವಲ್ಲಿ ಬ್ಯುಸಿ ಯಾಗಿದ್ದಾರೆ. ರೀಲ್ಸ್ ಇದೊಂದು ವೀಡಿಯೋದ ತುಣುಕಾಗಿರುತ್ತದೆ. ಯಾವುದೇ ಒಂದು ಸನ್ನಿವೇಶ ಅಥವಾ ಹಾಡು, ಡೈಲಾಗ್ ಗಳಿಗೆ ಆಕ್ಟ್ ಮಾಡಿ ಅದನ್ನು ಪೋಸ್ಟ್ ಮಾಡುವದು. ಹೀಗಾಗಿ ಕಂಟೆಂಟ್ ಸೂಪರ್ ಹೊಂದಿರುವ ವಿಡಿಯೋ ಮತ್ತು ಉತ್ತಮವಾಗಿ ಆಕ್ಟ್ ಮಾಡಿರುವ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತವೆ.
ಸದ್ಯಕ್ಕೆ ಅಂತಹದ್ದೇ ಒಂದು ಭಾವನೆ ತುಂಬಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಪುಟ್ಟ ಮಗು ಟಿ ವಿ ನೋಡುತ್ತಿರುತ್ತದೆ. ಟಿ ವಿಯಲ್ಲಿ ಒಂದು ಸಿನಿಮಾ ಹತ್ತಿರುತ್ತದೆ ಅದು ಯಾವುದೆಂದರೆ ಜಗಮಲ್ಲ ಚಿತ್ರ ನಡೆದಿರುತ್ತದೆ. ಈ ಚಿತ್ರದಲ್ಲಿಯ ಕೊನೆಯ ಸನ್ನಿವೇಶ ಅಂದರೆ ಹುಡುಗಿ ರನ್ನಿಂಗ್ ನಲ್ಲಿ ಗೆದ್ದು ಅಪ್ಪಾ ಅಪ್ಪಾ ಅನ್ನೋ ಅತೀ ಎಮೋಷನಲ್ ಸೀನ್ ನಡೆದಿರುತ್ತದೆ ಆಗ ಈ ಮಗು ಅದನ್ನು ಕೆಲವು ಸಮಯದ ವರೆಗೆ ಹಾಗೆ ನೋಡುತ್ತದೆ. ನಂತರ ಆ ಮಗುವಿಗೆ ಸಿನಿಮಾದಲ್ಲಿಯ ಸೀನ್ ಅರ್ಥಾವಾಗಿ ಜೋರಾಗಿ ಅಳಲು ಶುರು ಮಾಡುತ್ತದೆ. ಅಲ್ಲಿದ್ದ ತಂದೆ ತಾಯಿ ಸಹ ಎಷ್ಟೇ ಹೇಳಿದರು ಸಹ ಅದು ತನ್ನ ಅಳುವದನ್ನು ನಿಲ್ಲಿಸುವುದೇ ಇಲ್ಲ. ಈ ಅದ್ಭುತವಾದ ವೀಡಿಯೋ ನೋಡಿ ನೆಟ್ಟಗರು ಸಹ ಭಾವನೆ ಭರಿತವಾದ ಕಾಮೆಂಟ್ ಮಾಡುತ್ತಿದ್ದಾರೆ.
ವೀಡಿಯೋ ನೋಡಿ.
View this post on Instagram
ಈ ಪುಟ್ಟ ಮಗುವಿನ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ Chennai_ak_fans_club ಎಂಬ ಹೆಸರಿನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಎರಡು ಮಿಲಿಯನ್ ರಷ್ಟು ನೆಟ್ಟಿಗರು ವೀಕ್ಷಣೆ ಮಾಡಿದ್ದಲ್ಲದೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.