ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ‘ಈ’ ಇಬ್ಬರು ಸಹೋದರಿಯರಿಗೆ ಗಲ್ಲು ಶಿಕ್ಷೆಯಾಗಲಿದೆ; ಅವರು ಮಾಡಿರುವ ಕೃತ್ಯ ಕೇಳಿದರೆ ರಕ್ತ ಕುದಿಯುತ್ತೆ!
ತುಂಬಾ ಗಂಭೀರವಾದ ಶಿಕ್ಷೆಗಳಿಗೆ ಮಾತ್ರ ಗಲ್ಲುಶಿಕ್ಷೆ ವಿಧಿಸುತ್ತಾರೆ. ಇದರಲ್ಲಿ ತುಂಬಾ ಚರ್ಚೆಗೆ ಒಳಗಾಗಿದ್ದು ದೆಹಲಿಯ ನಿರ್ಭಯಾ ಪ್ರಕರಣ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲು 7 ವರ್ಷದ ಕಾಲಾವಧಿ ಬೇಕಾಯಿತು.
ನಿರ್ಭಯ ಪ್ರಕರಣದ ನಂತರ ದೇಶದ ದೃಷ್ಟಿ ಈಗ ಮುಗ್ಧ ಮಕ್ಕಳಿಗೆ ಕೊಲೆ ಮಾಡಿದ ಇಬ್ಬರು ಸಹೋದರಿಯರ ಕಡೆಗೆ ನೆಟ್ಟಿದೆ. ನೆರೆಯ ಮಹಾರಾಷ್ಟ್ರದ ನಾಶಿಕ್ ನಲ್ಲಿ ವಾಸಿಸುವ ನಂತರ ಪುಣೆಯಲ್ಲಯೇ ಇರುತ್ತಿದ್ದ ಇಬ್ಬರು ಸಹೋದರಿಯರು ಆರು ಮಕ್ಕಳನ್ನು ಕೊಲೆಮಾಡಿದ್ದು ಸಾಬೀತಾಗಿದೆ. ಒಬ್ಬಳು ಸೀಮಾ ಗಾವಿತ್ ಇನ್ನೊಬ್ಬಳು ರೇಣುಕಾ ಗಾವಿತ್.
ಇದರ ನಂತರ ಇಬ್ಬರು ಈ ನಿರ್ಣಯದ ವಿರುದ್ಧ ಹೈಕೋರ್ಟಿನಲ್ಲಿ ಅಪೀಲ್ ಮಾಡಿದರು. 2004 ರಲ್ಲಿ ಹೈಕೋರ್ಟ್ ಸಹ ಕೆಳಗಿನ ಕೊಟ್ಟು ನೀಡಿದ ಗಲ್ಲು ಶಿಕ್ಷೆಯ ತೀರ್ಪು ಎತ್ತಿ ಹಿಡಿಯಿತು. ಮುಂದೆ ಪ್ರಕರಣ ಸುಪ್ರೀಂ ಕೋರ್ಟಿನವರೆಗೆ ಹೋಯಿತು. ಸುಪ್ರೀಂಕೋರ್ಟ್ ಸಹ ಗಲ್ಲು ಶಿಕ್ಷೆ ಯಲ್ಲಿ ಬದಲಾವಣೆ ಮಾಡಲಿಲ್ಲ. ಇಷ್ಟೆಲ್ಲಾ ಆದ ಮೇಲೆ ಇಬ್ಬರು ಸಹೋದರಿಯರು ಕೊನೆಗೆ ರಾಷ್ಟ್ರಪತಿ ಅವರ ಕಡೆಗೆ ಕ್ಷಮೆಯಾಚನೆ ಮಾಡಿದರು. ಆದರೆ 2014 ರಲ್ಲಿ ರಾಷ್ಟ್ರಪತಿಯವರಾದ ಪ್ರಣವ್ ಮುಖರ್ಜಿಯವರು ಈ ಇಬ್ಬರು ಸಹೋದರಿಯರಿಗೆ ಕ್ಷಮಿಸಲು ನಿರಾಕರಿಸಿದರು.
ಈಗ ಸಂಪೂರ್ಣ ದೇಶವೇ ಈ ಇಬ್ಬರು ಸಹೋದರಿಯರಿಗೆ ಗಲ್ಲು ಶಿಕ್ಷೆ ನೀಡುವ ದಾರಿ ಕಾಯುತ್ತಿದೆ. ಇಬ್ಬರು ಸಹೋದರಿಯರು ಅನೇಕ ದಿನಗಳಿಂದ ಪುಣೆಯ ಕಾರಾಗೃಹದಲ್ಲಿ ಇದ್ದಾರೆ. ತಮ್ಮ ಬಿಕ್ಷಾಟನೆಗೆ ಉಪಯೋಗವಾಗಲೆಂದು ಇವರು ಇಲ್ಲಿಯವರೆಗೆ ಒಟ್ಟು 42 ಮಕ್ಕಳನ್ನು ಕೊಲೆಗೈದಿದ್ದು ನಂತರ ತಿಳಿದುಬಂತು. ವಿಶೇಷವೆಂದರೆ ಈ ಕುಕೃತ್ಯದಲ್ಲಿ ಇವರಿಬ್ಬರ ತಾಯಿ ಅಂಜನ ಗಾವಿತ್ ಳು ಸಹ ಶಾಮೀಲಾಗಿದ್ದಳು. ಮುಂದೆ ಆಕೆ ಅನಾರೋಗ್ಯದಿಂದ ಕಾರಾಗೃಹದಲ್ಲಿಯೇ ತೀರಿಕೊಂಡಳು.