UFO ಗಳು ವಾಸ್ತವವಾಗಿ ಏಲಿಯನ್ ಗಳ ವಾಹನಗಳಲ್ಲ, ಅವು ಅವರ ಡ್ರೋನ್ ಗಳು: ತಜ್ಞರು ನೀಡಿದ ಸಂಚಲನಾತ್ಮಕ ಹೇಳಿಕೆ

ಪೆಂಟಗನ್ ನ UFO ರಿಪೋರ್ಟ್ ಇದೀಗ ಇಡೀ ವಿಶ್ವದಲ್ಲಿ ಒಂದು ಸಂಚಲವನ್ನು ಸೃಷ್ಟಿಸಿದೆ. ಇದರ ನಡುವೆಯೇ ಹಾರ್ವರ್ಡ್ ನ ಪ್ರೊಫೆಸಲ್ ಅವಿ ಲೋಬ್ ಅವರು ಮಾತನಾಡುತ್ತಾ ಅನ್ಯ ಗ್ರಹಗಳಲ್ಲಿ ವಾಸಿಸುತ್ತಿರುವ ಜೀವಿಗಳ ನಾಗರಿಕತೆ, ಸಂಸ್ಕೃತಿ ನಮಗಿಂತ ಹಳೆಯದಾಗಿದ್ದು, ಅವರು ನನಗಿಂತ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದಾರೆ. ಆದ್ದರಿಂದಲೇ ಅವರು ಭೂಮಿಯ ಮೇಲೆ‌ ಒಂದು ಕಣ್ಣಿಡಲು ಡ್ರೋನ್ ಗಳನ್ನು ಬಳಸುತ್ತಾರೆ. ಆ ಡ್ರೋನ್ ಗಳನ್ನೇ ನಾವು ಯುಎಫ್ಓ ಗಳೆಂದು ತಿಳಿದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಹಾರ್ವರ್ಡ್ ನ ಪ್ರೊಫೆಸೆರ್ ಅವಿ ಲೋಬ್ ಅವರು ಯುಎಫ್ಓ ತಜ್ಞರು ಕೂಡಾ ಆಗಿದ್ದು ಅವರು ಹೇಳಿರುವ ವಿಚಾರ ಬಹಳ ಆಸಕ್ತಿಕರವಾಗಿದೆ‌.

ಪ್ರೊ.ಅವಿ ಲೋಬ್ ಅವರು ಏಲಿಯನ್ ಗಳ ನಾಗರಿಕತೆ ಬಹಳ ಹಳೆಯದು ಎಂದು ನಂಬಿದ್ದು ಅವರ ಬಳಿ ನಮಗಿಂತ ಅತ್ಯಾಧುನಿಕ ತಂತ್ರಜ್ಞಾನ ಇದ್ದು ಯುಎಫ್ಓ ಗಳು ಏಲಿಯನ್ ಗಳು ತಮ್ಮ ಕೃತಕ ಬುದ್ಧಿಮತ್ತೆಯಿಂದ ತಯಾರಿಸಿದ ಡ್ರೋನ್ ಗಳಾಗಿರಬಹುದು ಎಂದು ನಂಬಿದ್ದು, ಅವುಗಳ ಸಹಾಯದಿಂದ ಏಲಿಯನ್ ಗಳು ಭೂಮಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದಿದ್ದಾರೆ. ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅವರ ಮಾತನ್ನು, ಹೇಳಿಕೆಯನ್ನು ಸರಿಸಾಗಾಟಾಗಿ ನಿರಾಕರಣೆ ಮಾಡುವುದಕ್ಕೆ ಸಹಾ ಸಾಧ್ಯವಿಲ್ಲ.

ಇದೇ ವೇಳೆ ಪ್ರೊಫೆಸರ್ ಅವಿ ಲೋಬ್ ಅವರ ಮಾತನ್ನು ಒಪ್ಪುವುದೇ ಆದರೆ ನಾವು ವಿಶ್ವದಲ್ಲಿ ಮಾನವ ನಾಗರೀಕತೆಗಳ ಹೊರತಾಗಿ ಅನ್ಯ ನಾಗರಿಕತೆಗಳು ಸಹಾ ಶತಮಾನಗಳ ಕಾಲದಿಂದಲೂ ಇವೆ ಎಂದು ಒಪ್ಪಲೇಬೇಕಾಗುತ್ತದೆ. ಪ್ರೊ.ಅವಿ ಲೋಬ್ ಅವರು ಹೇಳುವಂತೆ ಭೂಮಿಯ ಮೇಲಿನ ನಾಗರಿಕತೆಗಿಂತ ಹಳೆಯದಾದ ನಾಗರಿಕತೆಗಳು ಇವೆ ಎನ್ನಲಾಗಿದೆ. ಇಂತಹ ಏಲಿಯನ್ ಗಳು ಯಾವಾಗ, ಎಲ್ಲಿ ಹುಟ್ಟಿಕೊಂಡರು ಎನ್ನುವುದನ್ನು ತಿಳಿಯುವ ಸಂಶೋಧನೆಯನ್ನು ಅವಿ ಲೋಬ್ ಅವರು ಮಾಡುತ್ತಿದ್ದಾರೆ. 2018 ರಲ್ಲಿ ಪ್ರೊಫೆಸರ್ ಲೊಬೊ ಅವರು ಭೂಮಿಯ ಮೂಲಕ ಹಾದು ಹೋಗುವ ಒಮುವಾಮುವಾ ವಾಸ್ತವವಾಗಿ ಏಲಿಯನ್ ಗಳ ಕಸ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾದ್ಯಮವೊಂದರ ಮುಂದೆ‌ ಮಾತನಾಡಿರುವ ಪ್ರೊ ಲೊಬೊ ಅವರು ಸೂರ್ಯನ ಉದ್ಭವಕ್ಕಿಂತ ಮೊದಲಿನಿಂದಲೂ ಸಹಾ ಅಂದರೆ ಶತಕೋಟಿ ವರ್ಷಗಳಿಗೂ ಮೊದಲೇ ಬ್ರಹ್ಮಾಂಡದಲ್ಲಿ ನಕ್ಷತ್ರಗಳು ಇದ್ದವು. ಅದೇ ರೀತಿಯಲ್ಲಿ ಮಾನವನ ನಾಗರೀಕತೆಯ ಹಾಗೆಯೇ ಬೇರೊಂದು ಕಡೆ ಕೂಡ ಬಹಳಷ್ಟು ಹಿಂದೆಯೇ ನಾಗರಿಕತೆಯು ರೂಪುಗೊಂಡಿರಬಹುದು ಎಂದು ಹೇಳಿದ್ದಾರೆ. ಪ್ರೊಫೆಸರ್ ಲೊಬೊ ಅವರು ಕೃತಕ ಬುದ್ಧಿಮತ್ತೆ ಯಿಂದ ರಾಸಾಯನಿಕವಾಗಿ ಒಂದು ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸಲು ಶತಮಾನಗಳ ಕಾಲಾವಧಿ ಸಾಕು. ನಕ್ಷತ್ರಗಳ ನಡುವಿನ ಅಂತರವು ಹೆಚ್ಚಾಗಿದೆ. ನಮಗಿಂತಲೂ ಶತಮಾನಗಳಷ್ಟು ಹಳೆಯದಾದ ನಾಗರಿಕತೆಗಳು ಎಂತಹ ಸಾಧನಗಳನ್ನು ಬಳಸಿರಬಹುದು ಎಂಬುದನ್ನು ನಾವು ಊಹೆ ಮಾಡಬಹುದು.

ಅಂತಹ ನಾಗರಿಕತೆಗಳಿಗೆ ಯುಎಫ್ಓ ಗಳೆಂದು ನಾವು ಕರೆಯುವ ಆ ಬಾಹ್ಯಾಕಾಶ ನೌಕೆಗಳಂತಹ ಡ್ರೋನ್ ಗಳನ್ನು ತಯಾರು ಮಾಡುವುದು ಬಹಳ ಸುಲಭ ಎಂದು ಹೇಳಿದ್ದಾರೆ. ಪ್ರೊಫೆಸರ್ ಲೋಬೋ ಅವರು ಈ ಹೇಳಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಅವರ ಹೇಳಿಕೆಗಳು ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ. ಇನ್ನು ಕೆಲವೇ ದಿನಗಳ ಹಿಂದೆ ಮತ್ತೊಬ್ಬ ಯು ಎಫ್ ಓ ತಜ್ಞರು ಏಲಿಯನ್ ಗಳ ತಂತ್ರಜ್ಞಾನ ಯಾವ ಮಟ್ಟಕ್ಕೆ ಅಭಿವೃದ್ಧಿ ಹೊಂದಿದೆ ಎಂದರೆ ಅವು ಭೂಮಿಯನ್ನು ಕೆಲವೇ ಕ್ಷಣಗಳಲ್ಲಿ ಅಕ್ರೋಟ್ ಹಣ್ಣನ್ನು ಒಡೆದು ಹಾಕುವಂತೆ ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ ವಿಷಯ ಕೂಡಾ ನಾವಿಲ್ಲಿ ಸ್ಮರಿಸಬಹುದಾಗಿದೆ.