Unlock 1.0: ಮಾಲ್ ಮಂದಿರ ಹಾಗೂ ಆಫೀಸ್ ಗಳಿಗೆ ಹೋಗಿ ಮರಳಿದಾಗ ಬಟ್ಟೆಗಳಿಗೆ ಈ ರೀತಿ ಮಾಡಿ ಸ್ಯಾನಿಟೈಜರ್.
ಲಾಕ್ ಡೌನ್ ನಂತರ ಮೊದಲ ಸಲ ಮಂದಿರಗಳು, ಮಾಲ್ ಮತ್ತು ಹೋಟೆಲ್ ಗಳನ್ನು ಓಪನ್ ಮಾಡುತ್ತಿದ್ದಾರೆ. ಜನರ ಮೇಲಿನ ಬರು-ಹೋಗುವ ನಿರ್ಬಂಧವನ್ನು ಸಹಿತ ತೆಗೆಯಲಾಗಿದೆ. ಇವೆಲ್ಲದರ ನಡುವೆ ಪ್ರತಿಯೊಬ್ಬರು ಕಾಳಜಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವದು ಅವಶ್ಯಕವಾಗಿದೆ
ಅನ್ ಲಾಕ್ 1 ರಲ್ಲಿ ಸರಕಾರ ಜನರಿಗೆ ಮಾಲ್, ಮಂದಿರ ಮತ್ತು ರೆಸ್ಟೋರೆಂಟ್ ಗಳಿಗೆ ಹೋಗಲು ಅವಕಾಶ ಮಾಡಿ ಕೊಟ್ಟಿದೆ. ಜನ ಈಗ ಮನೆಯಿಂದ ಹೊರಗೆ ಬರುವುದು ಹಾಗೂ ಈ ಸ್ಥಳಗಳಿಗೆ ಹೋಗುವದು ಶುರು ಮಾಡಿದ್ದಾರೆ. ಕೋವಿಡ್-19 ದಿಂದ ಸುರಕ್ಷಿತವಾಗಿರಲು ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಬಟ್ಟೆಗಳಿಂದ ಈ ವೈರಸ್ ಹರಡುತ್ತದೆಯೋ ಇಲ್ಲವೋ ಇನ್ನು ಖಚಿತವಾಗಿಲ್ಲ. ಆದರೆ ಮೊದಲಿನ ರಿಸರ್ಚ್ ಪ್ರಕಾರ ಬಟ್ಟೆಗಳು ವೈರಸ್ ಗಳ ಸುಂದರವಾದ ಮನೆಯಾಗಿದೆ. ಆದ್ದರಿಂದ ಇದೇ ಕಾರಣಕ್ಕೆ ಬಟ್ಟೆಗಳನ್ನು ವೈರಸ್ ಗಳಿಂದ ಮುಕ್ತವಾಗಿಡುವ ಸರಳ ಉಪಾಯಗಳು ಹಾಗೂ ಸ್ಯಾನಿಟೈಜರ್ ಮಾಡುವ ಬಗೆ ಹೇಗೆಂದು ತಿಳಿಯುವಾ.
ಬಟ್ಟೆಗಳನ್ನು ಬೇರೆಯಾದ ಬಾಸ್ಕೆಟ್ ನಲ್ಲಿಡುವದು.

ಹೊರಗಿನಿಂದ ಮನೆಯೊಳಗೆ ಬಂದಾಗ ತೊಟ್ಟ ಬಟ್ಟೆಗಳನ್ನು ಒಂದು ಪ್ರತ್ಯೇಕವಾದ ಬಾಸ್ಕೆಟ್ ಅಥವಾ ಬಕೆಟ್ ನಲ್ಲಿ ಇಡುವದು. ಇವುಗಳನ್ನು ಬೇರೆ ತೊಳೆಯುವ ಬಟ್ಟೆಗಳ ಜೊತೆಗೆ ಕೂಡಿಸಿ ಇಡಬೇಡಿ. ಬಕೆಟ್ ನಲ್ಲಿ ನೀರು ಹಾಕಿ ಅದರಲ್ಲಿ ಎಂಟಿಸೆಪ್ಟಿಕ್ ಲಿಕ್ವಿಡ್ ಸೇರಿಸಿಯೂ ಇಡಬಹುದು. ಇದರಿಂದ ಬಟ್ಟೆಗಳಲ್ಲಿಯ ವೈರಸ್ ನಷ್ಟವಾಗುವದಲ್ಲದೆ, ಬೇರೆ ಬಟ್ಟೆಗಳ ಸಂಪರ್ಕದಲ್ಲಿಯೂ ಬರುವದಿಲ್ಲ.
ಬಿಸಿನೀರಿನ ಉಪಯೋಗ.

ಬಟ್ಟೆಗಳನ್ನು ತೊಳೆಯಲು ಬಿಸಿನೀರಿನ ಉಪಯೋಗವನ್ನು ಮಾಡಿರಿ. ಇದಕ್ಕಾಗಿ ನೀರಿನ ಟೆಂಪ್ರೇಚರ್ 55-60 ಡಿಗ್ರಿ ಇರಲಿ. ಇದರಿಂದ ಬಟ್ಟೆಯಲ್ಲಿಯ ಬ್ಯಾಕ್ಟೀರಿಯಾ ಸಾಯಲು ನೆರವಾಗುತ್ತದೆ. ಬಟ್ಟೆಗಳೂ ಸಹಿತ ಹೆಚ್ಚು ಸ್ವಚ್ಛವಾಗುತ್ತವೆ. ವಾಷಿಂಗ್ ಮಷಿನ್ ಯೂಜ್ ಮಾಡುವಿರಾದರೆ ಆದರಲ್ಲಿ ಮೊದಲೇ ಟೆಂಪ್ರೇಚರ್ ಸೆಟ್ ಮಾಡಲು ಬರುವ ಸಿಸ್ಟಮ್ ಇರುತ್ತದೆ.
ಕೆಮಿಕಲ್ ಡಿಸ್ ಇನ್ಫೇಕ್ಟ್ ದ ಉಪಯೋಗ.

ಬಟ್ಟೆಗಳನ್ನು ತೊಳೆಯುವ ಸಮಯದಲ್ಲಿ ಕೆಮಿಕಲ್ ಡಿಸ್ ಇನ್ಫೆಕ್ಟ್ ದ ಉಪಯೋಗ ಮಾಡಬೇಕು. ಕ್ಲೋರಿನ ಅಂಶ ಹೆಚ್ಚಿಗಿರುವ ಬ್ಲೀಚ್ ನ್ನು ಉಪಯೋಗಿಸಬೇಕು. ಒಂದು ವಿಷಯ ನೆನಪಿನಲ್ಲಿಡಬೇಕಾದದ್ದು ಎಂದರೆ ಬ್ಲೀಚನ್ನು ಬಟ್ಟೆಗಳ ಮೇಲೆ ನೇರವಾಗಿ ಉಪಯೋಗಿಸದೆ ಸೋಪಿನ ಜೊತೆಗೆ ಮಿಶ್ರಣ ಮಾಡಿ ಹಾಕಬೇಕು. ಬಕೆಟ್ ನಲ್ಲಿ ಹಾಕುವದಾದರೆ ಮೊದಲು ಮಗ್ ನಲ್ಲಿ ಹಾಕಿ ನಂತರ ನೀರಿನಲ್ಲಿ ಕೂಡಿಸಿ ಬಟ್ಟೆಗಳನ್ನು ಅದರಲ್ಲಿ ಹಾಕಬೇಕು.
ಮಷಿನ್ ಮಾಡಿ ಡಿಸ್ ಇನ್ಫೆಕ್ಟ್.

ಬಟ್ಟೆಗಳನ್ನು ತೊಳೆದಾದ ಮೇಲೆ ಮಷಿನ್ ಡಿಸ್ ಇನ್ಫೆಕ್ಟ್ ಮಾಡಿಬಿಡಿ. ಇದಕ್ಕಾಗಿ ಒಂದು ಬಟ್ಟೆಗೆ ಎಂಟಿಸೆಪ್ಟಿಕ್ ಲಿಕ್ವಿಡ್ ಹಾಕಿ ಅದನ್ನು ಮಷಿನ್ ನಲ್ಲಿ ಹಾಕಿ ತೊಳೆಯಲಾಗಿ ಮಷಿನ್ ಡಿಸ್ ಇನ್ಫೆಕ್ಟ್ ಆಗುವದು. ನಂತರ ಉಪಯೋಗಿಸುವ ಸಾದಾ ನೀರನ್ನು ಹಾಕಿ ಮತ್ತೆ ತೊಳೆಯಿರಿ. ಇದೆ ರೀತಿ ಬಕೆಟ್ ಮತ್ತು ಬಾಸ್ಕೆಟ್ ಗಳನ್ನು ಸಹಿತ ಸ್ವಚ್ಚ ಮಾಡಲು ಬರುವದು. ಆನಂತರ ಮಗ್ ಹಾಗೂ ಬ್ರಶ್ ಸಹಿತ ಶುಚಿ ಮಾಡಬಹುದಾಗಿದೆ.
ಬಟ್ಟೆಗಳನ್ನು ಸರಿಯಾಗಿ ಒಣಗಿಸಿ.

ಬಟ್ಟೆಗಳಲ್ಲಿ ತೇವಾಂಶವಿರದ ಹಾಗೆ ಒಣಗಿಸಬೇಕು. ಇದರ ಸಲುವಾಗಿ ಮಷಿನ್ ಡ್ರಾಯರ್ ದ ಉಪಯೋಗ ಮಾಡಿಕೊಳ್ಳಿ. ಕಡಿಮೆ ಎಂದರೆ ಎರಡು ನಿಮಿಷದವರೆಗೆ ಸ್ಪಿನ್ ಆಗಲು ಬಿಡಿ. ಈ ಬಟ್ಟೆಗಳನ್ನು ಬಿಸಿಲಲ್ಲಿ ಒಣಗಿಸಿರಿ. ಡ್ರಾಯರ್ ಇಲ್ಲವಾದಲ್ಲಿ ಕೈಗಳಿಂದ ಚೆನ್ನಾಗಿ ಹಿಂಡಿ ಬಿಸಿಲಲ್ಲಿ ಒಣಗಿಸಿ. ಎಲ್ಲಿಯವರೆಗೆ ಅವು ಸರಿಯಾಗಿ ಒಣಗುವದಿಲ್ಲವೋ ಅಲ್ಲಿಯವರೆಗೆ ಅವುಗಳನ್ನು ಬಿರುವಿನಲ್ಲಿ ಇಡಬೇಡಿ. ಯಾಕೆಂದರೆ ಸ್ವಲ್ಪ ತೇವಾಂಶವಿದ್ದರೂ ಸಾಕು ಜರ್ಮ್ಸ್ ಗಳು ತಮ್ಮ ಬಿಡಾರ ಬಿಡುತ್ತವೆ.