VIDEO : ಉಪೇಂದ್ರರವರ ಕನಸಿನ ತೋಟ ಹಾಗೂ ತೋಟದ ಭವ್ಯ ಭಂಗಲೆ ಇಲ್ಲಿದೆ ನೋಡಿ
ಉಪೇಂದ್ರ : ವಿಭಿನ್ನತೆಗೆ ಮತ್ತೊಂದು ಹೆಸರೇ ಉಪೇಂದ್ರ. ನಿಂತ ನೀರಾಗಿದ್ದ ಕನ್ನಡ ಚಿತ್ರರಂಗಕ್ಕೆ ವಿಶಿಷ್ಟ ಆಯಾಮದ ಚಿತ್ರಗಳನ್ನು ನೀಡಿ ಪ್ರೇಕ್ಷಕರನ್ನು ಸೆಳೆದವರು ಈ ಉಪೇಂದ್ರ. ಅದರಲ್ಲೂ ಓಂ ಚಿತ್ರ ಸಂಪೂರ್ಣ ಪರಸ್ಥಿತಿಯನ್ನೇ ಉಲ್ಟಾ ಮಾಡಿಬಿಟ್ಟಿತು. ಜೊತೆಗೆ ಶಿವರಾಜ್ ಕುಮಾರ್ ರವರಿಗೆ ಕೂಡ ಅದುವರೆಗೆ ಇಲ್ಲದ ವಿಶೇಷ ಇಮೇಜ್ ಕೊಟ್ಟಿತು. ಅಂಥ ಉಪೇಂದ್ರ ಸಿನೆಮಾರಂಗದ ಬಹುತೇಕ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದವರು, ಜೊತೆಗೆ ತಕ್ಕಮಟ್ಟಿಗೆ ಯಶಸ್ಸು ಕೂಡ ಕಂಡವರು.
ಇವರು ರಾಜಕೀಯ ಸೇರುವ ಸೂಚನರ ಕೊಟ್ಟ ಮೊದಮೊದಲಲ್ಲಿ ಭಾರು ಸುದ್ದಿ ಮಾಡಿದ್ದು ನಿಜ. ಅನೇಕರು ಅವರು ಬಿಜೆಪಿ ಸೇರುತ್ತಾರೆ ಎಂದುಕೊಂಡಿದ್ದರು. ಅಷ್ಟರಲ್ಲಿ ಆಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಂಗಳೂರು ಬರುವವರಿದ್ದರು. ಆಗ ಇನ್ನೇನು ಉಪೇಂದ್ರ ಬಿಜೆಪಿ ಸೇರಿಯೇ ಬಿಟ್ಟರು ಎಂಬ ಮಟ್ಟಿಗೆ ಮಾತಾಡಲಾಯಿತು. ಆದರೆ ಆಗಿದ್ದೇ ಬೇರೆ.
ಉಪೇಂದ್ರ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ತಮ್ಮದೇ ಪಕ್ಷ ಘೋಷಿಸಿದರು. ಅವರ ರಾಜಕೀಯದ ಬಗ್ಗೆ ಇಲ್ಲಿ ಬರೆಯದಿರುವುದೇ ಲೇಸು. ತುಂಬಾ ಜನ ಅವರ ಪ್ರಜಾಕೀಯವನ್ನು ಮೆಚ್ಚಿ ಅವರ ಅನುಯಾಯಿಗಳಾದರಾದರೂ, ವಾಸ್ತವಕ್ಕೆ ತೀರ ದೂರವಿರುವ ಅವರ ಆಲೋಚನೆಗಳು ಸಾಕಷ್ಟು ಜನರಲ್ಲಿ ನಗು ತರಿಸಿದವು.
ಉದಾಹರಣೆಗೆ : ದುಡ್ಡು ಖರ್ಚೇ ಮಾಡದೇ, ಒಂದೇ ಒಂದು ಪಾಂಪ್ಲೆಟ್ ಹಂಚದೇ, ಬ್ಯಾನರ್ ಹಾಕದೇ ಚುನಾವಣೆಯಲ್ಲಿ ಗೆದ್ದು ಬರುವುದು! ಇದು ಯಾವತ್ತಿಗಾದರೂ ಸಾಧ್ಯಾನಾ? ಇಂಥವೇ ಕೆಲವು ಅವರ ಆಲೋಚನೆಗಳು ಸಾಕಷ್ಟು ಜನರಿಗೆ ಹಿಡಿಸಲಿಲ್ಲ, ಅಥವಾ ಅವೆಲ್ಲ ತಮಾಷೆಗೀಡಾದವು. ಪರಿಣಾಮ ಅವರ ಪ್ರಜಾಕೀಯ ಎಲ್ಲಿ ಹುಟ್ಟಿತ್ತೋ ಅಲ್ಲೇ ಇದೆ.
ಆ ರಾಜಕೀಯವನ್ನು ಹೊರತುಪಡಿಸಿ ನೋಡುವುದಾದರೆ ಉಪೇಂದ್ರ ಒಬ್ಬ ಜನಪರ ಕಾಳಜಿಯುಳ್ಳ ವ್ಯಕ್ತಿ. ಉತ್ತಮ ನಾಯಕನಾಗುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ಉತ್ತಮ ವ್ಯಕ್ತಿ ಅಂತೂ ಹೌದು. ಸಾಧ್ಯವಾದಾಗಲೆಲ್ಲ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಅವರ ಗುಣ.
ಎಲ್ಲೂ ಹೇಳಿಕೊಳ್ಳುವುದಿಲ್ಲವಾದರೂ ಅವರಿಂದ ಸಹಾಯ ಪಡೆದವರು ಅನೇಕ ಜನರಿದ್ದಾರೆ. ಇನ್ನು ಮೊನ್ನೆ ಕೊರೋನ ಕಾರಣಕ್ಕೆ ಲಾಕ್ ಡೌನ್ ಆಗಿ ಸಂಕಷ್ಟಕ್ಕೀಡಾಗಿರುವ ಬಡವರಿಗೆ, ಕಾರ್ಮಿಕರಿಗೆ ಇವರು ಆಹಾರ ಕಿಟ್ ಸಮೇತ ಹಲವು ಸಹಾಯ ಮಾಡಿರುವುದು ತಮಗೆಲ್ಲ ಗೊತ್ತಿದೆ. ಈ ಲಿಸ್ಟಲ್ಲಿ ಅರ್ಚಕರಿಗೂ ಅವರು ಸಹಾಯ ಮಾಡಿದರು.
ಆದರೆ ಉಪೇಂದ್ರ ಒಬ್ಬ ಬ್ರಾಹ್ಮಣ, ಹೀಗಾಗಿ ಅವರು ಬ್ರಾಹ್ಮಣ ಅರ್ಚಕರಿಗೆ ಸಹಾಯ ಮಾಡಿದ್ದಾರೆ ಅಂತ ಅವರದೇ ಚಿತ್ರರಂಗದ ಮಾಜಿ ಹೀರೊ ಚೇತನ್ ಆರೋಪಿಸಿದ. ಉಪೇಂದ್ರ ಸುಮಾರು ಒಂದು ತಿಂಗಳಿಂದ ಸಾವಿರಾರು ಬಡ ಜನರಿಗೆ, ರೈತರಿಗೆ, ಸಿನೆಮಾ ಕಲಾವಿದರಿಗೆ, ಕಾರ್ಮಿಕರಿಗೆ ಸಹಾಯ ಮಾಡಿದ್ದು ಚೇತನ್ ಕಣ್ಣಿಗೆ ಕಾಣಲೇ ಇಲ್ಲ.
ಅರ್ಚಕರಿಗೆ ಕೊಟ್ಟಿದ್ದೇ ತಪ್ಪಾಯಿತು. ಹಲವು ಕಡೆಯಿಂದ ಟೀಕೆಗಳ ಸುರಿಮಳೆಯಾಯಿತು. ಇಷ್ಟಕ್ಕೂ ಅವರ ದುಡ್ಡು ಅವರು ಯಾರಿಗಾದೂ ದಾನ ಮಾಡುತ್ತಾರೆ, ಇನ್ನೊಬ್ಬರಿಗೆ ಟೀಕಿಸುವ ಮೊದಲು ತಾವು ಯಾರಿಗೆ ಏನು ಸಹಾಯ ಮಾಡಿದ್ದೀವಿ ಎಂದು ನೋಡಿಕೊಳ್ಳಬೇಕು. ಉಪೇಂದ್ರ ಅವರ ಬುದ್ದಿಮಟ್ಟವೇ ಅಷ್ಟು ಎಂದು ಹೇಳಿಕೆ ಕೊಟ್ಟು ಸುಮ್ಮನಾಗಿಬಿಟ್ಟರು.
ಅದೆಲ್ಲ ಬಿಟ್ಟಾಕಿ, ಉಪೇಂದ್ರರವರ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ, ಅವರ ಕನಸಿನ ತೋಟ ಹಾಗೂ ತೋಟದ ಮನೆ ಈಗ ಸಿದ್ದವಾಗಿದ್ದು, ಕಣ್ಮನ ಸೆಳೆಯುವಂತೆ ಇದೆ. ತೋಟದ ಮನೆಯ ಸಂಪೂರ್ಣ ವಿಡಿಯೊ ಇಲ್ಲಿದೆ. ಅವರ ತೋಟ ಹಾಗೂ ಉಪೇಂದ್ರವರ ಕೃಷಿ ಕೆಲಸವನ್ನು ಕೂಡ ನೀವಿಲ್ಲಿ ನೋಡಬಹುದು. ವಿಡಿಯೊ ಮೇಲಿದೆ ನೋಡಿ.
-Team Infotrend