ಅಯ್ಯೋ! ಉರ್ಫಿ ಜಾವೇದ್ ಗೆ ಟಕ್ಕರ್ ಕೊಡಲು ಮೈದಾನಕ್ಕಿಳಿದ ಮೋನು, ನೋಡಿ ಆ ಅದ್ಭುತ ವಿಡಿಯೋ☺️☺️!!
ಸದ್ಯಕ್ಕೆ ಯಾರು ಏನು ಮಾಡಿ ಜನರ ಗಮನವನ್ನು ಸೆಳೆಯುತ್ತಾರೆ ಅಂತ ಹೇಳೋಕೆ ಸಾಧ್ಯವಿಲ್ಲ. ಏಕೆಂದರೆ ಇಂದು ಪ್ರತಿಯೊಬ್ಬರಿಗೂ ಸೋಷಿಯಲ್ ಮಿಡಿಯಾದಲ್ಲಿ ಹಿಟ್ ಆಗಬೇಕು ಹಾಗೂ ಪ್ರತಿಯೊಬ್ಬರ ಲಕ್ಷ ತನ್ನ ಕಡೆಗೆ ಮಾಡಿಕೊಳ್ಳಬೇಕು ಎಂಬ ಹುಚ್ಚು ಹಿಡಿದಿದೆ ಹೀಗಾಗಿ ತಮಗೆ ಅರಿವೇ ಇಲ್ಲದೆ ಏನೇನೋ ವಿಚಿತ್ರವಾದ ವೀಡಿಯೋ ಅಥವಾ ರೀಲ್ಸ್ ಮಾಡಿ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡುತ್ತಾರೆ. ಇಂದಿನ ಯಾಂತ್ರಿಕ ಯುಗದಿಂದಾಗಿ ಪ್ರತಿಯೊಬ್ಬರ ಹತ್ತಿರ ಅಂದರೆ ಹತ್ತು ವರ್ಷದ ಮಕ್ಕಳಿಂದ ತೊಂಬತ್ತು ವಯಸ್ಸಿನ ವೃದ್ಧರವರೆಗೆ ಮೊಬೈಲ್ ಇದೆ.
ಒಂದು ಹೊತ್ತಿನ ಊಟ ಇರದಿದ್ದರೂ ಪರವಾಗಿಲ್ಲ ಆದರೆ ಮೊದಲು ಮೊಬೈಲ್ ಬೇಕೇ ಬೇಕು. ಈ ಮೊಬೈಲ್ ನಿಂದಾಗಿ ನಮಗೆ ಕೆಲವು ಲಾಭದ ಜೊತೆಗೆ ಕೆಲವು ಹಾನಿಗಳು ಸಹ ಇವೆ. ಎನಿವೇ ಎಂಬುದು ಹೇಳೋ ಅವಶ್ಯಕತೆ ಇಲ್ಲ ಏಕೆಂದರೆ ನೀವೆಲ್ಲ ತುಂಬಾ ಬುದ್ಧಿವಂತರು ಹಾಗಾಗಿ ಇದರ ಕುರಿತು ಮೊದಲೇ ನಿಮಗೆ ಗೊತ್ತೇ ಇರುತ್ತೆ. ಸೋಶಿಯಲ್ ಮೀಡಿಯಾದಿಂದ ಇಂದು ಏನೆಲ್ಲ ಮಾಡುತ್ತಾರೆ ಎಂಬುದು ನಾವು ನೋಡುತ್ತಾ ಇದ್ದೇವೆ. ಆದರೆ ಇಂದಿನ ಹೊಸ ಟ್ರೆಂಡ್ ಎಂದರೆ ರೀಲ್ಸ್ ಮಾಡುವದು ಅಂದರೆ ಕೇವಲ ಸೆಕೆಂಡ್ ಗಳ ಸಮಯದ ವರೆಗೆ ಮಾತ್ರ ವಿಡಿಯೋ ಮಾಡುವದು. ತದನಂತರ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶೇರ್ ಮಾಡುವದು.
ಹಲವಾರು ತಿಂಗಳಿಂದ ತಮ್ಮ ವಿಚಿತ್ರ ಉಡುಪುಗಳನ್ನು ಧರಿಸುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಸದಾ ಚರ್ಚೆಯಲ್ಲಿರುವ ಉರ್ಫಿ ಜಾವೇದ ಸದ್ಯಕ್ಕೆ ಮತ್ತೊಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ.
ಉರ್ಫಿ ಜಾವೇದ್ ಎಲ್ಲರ ಗಮನ ಸೆಳೆಯುವ ವಿಷಯ ವೆಂದರೆ ಅದು ಅವರ ಡ್ರೆಸ್ಸಿಂಗ್ ಸ್ಟೈಲ್. ತನ್ನ ವಿಚಿತ್ರ ಡ್ರೆಸ್ಸಿಂಗ್ ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಉರ್ಫಿಯವರು ಯಾವುದೇ ವಸ್ತುವಿನಿಂದ ಮಾಡಿದ ಉಡುಪನ್ನು ಧರಿಸುತ್ತಾರೆ. ಉರ್ಫಿಯವರು ಬ್ಲೇಡ್‌ಗಳು, ಸಿಮ್ ಕಾರ್ಡ್‌ಗಳು, ಪಾಲಿಥಿನ್ ಎಲ್ಲದರಿಂದ ಮಾಡಿದ ಬಟ್ಟೆಗಳನ್ನು ಧರಿಸುತ್ತಾರೆ. ಈಗ ಅವರಿಗೆ ಪೈಪೋಟಿ ನೀಡಲು ಬೇರೊಬ್ಬರು ಬಂದಿದ್ದಾರೆ. ಆದರೆ ಇದು ಹುಡುಗಿ ಅಲ್ಲ, ಡ್ಯಾನ್ಸರ್ ಮತ್ತು ವ್ಲಾಗರ್ ಮೋನು ಡಿಯೋರಿ. ಮೋನು ಇತ್ತೀಚೆಗೆ ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಎಲೆಗಳಿಂದ ಮಾಡಿದ ವಿಚಿತ್ರವಾದ ಉಡುಪನ್ನು ಧರಿಸಿ ಉರ್ಫಿಯನ್ನು ಅನುಕರಿಸುತ್ತಾರೆ. ಮೋನು ಅವರ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಜನರನ್ನು ನಗುವಂತೆ ಮಾಡುತ್ತಿದೆ.
ಮೋನು ಡಿಯೋರಿ ಡ್ಯಾನ್ಸರ್, ವ್ಲಾಗರ್ ಮತ್ತು ಟಿಕ್‌ಟೋಕರ್ ಕೂಡಾ ಆಗಿದ್ದಾರೆ. ಮೋನು ಆಗಾಗ್ಗೆ ತಮ್ಮ ತಮಾಷೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಮೋನು ಉರ್ಫಿಯನ್ನು ನಕಲು ಮಾಡುವ ಈ ತಮಾಷೆಯ ವೀಡಿಯೊವನ್ನು ಹಂಚಿಕೊಂಡ ತಕ್ಷಣ, ಈ ವೀಡಿಯೋವನ್ನು ನೋಡಿ ಜನರು ತುಂಬಾನೇ ನಗುತ್ತಿದ್ದಾರೆ. ಈ ವಿಡಿಯೋದಲ್ಲಿ ಮೋನು ಎಲೆಗಳನ್ನು ತನ್ನ ಡ್ರೆಸ್ ಆಗಿ ಧರಿಸಿದ್ದಾನೆ. ಮೋನು ತನ್ನ ಎದೆ, ಕಿವಿ, ಹೊಕ್ಕುಳ ಮತ್ತು ತಲೆಯ ಮೇಲೆ ಎಲೆಗಳನ್ನು ಲೇಪಿಸಿದ್ದಾನೆ. ಅವರು ಉರ್ಫಿಯವರ ಹಾಗೆ ಪೋಸ್ ನೀಡುತ್ತಿರುವದು ನೀವು ನೋಡಬಹುದು. ಸ್ವಲ್ಪ ಕೋಪ ಪಡುತ್ತಿರುವದನ್ನು ಸಹ ನೀವು ಕಾಣಬಹುದು. ಮೋನು ಅವರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
ಉರ್ಫಿ ಕೂಡ ವಿಡಿಯೋ ನೋಡಿ ಮುಗುಳ್ನಕ್ಕರು..
ವೀಡಿಯೋದಲ್ಲಿ ಮೋನು ಅವರ ಸ್ಟೈಲ್ ತುಂಬಾ ತಮಾಷೆಯಾಗಿದ್ದು ಬಳಕೆದಾರರಷ್ಟೇ ಅಲ್ಲ ಉರ್ಫಿ ಕೂಡ ನಕ್ಕಿದ್ದಾರೆ. ಮೋನುವಿನ ಸ್ಟೈಲ್ ನೋಡಿ ಮೊದಲು ಆಶ್ಚರ್ಯಗೊಂಡ ಉರ್ಫಿ ನಂತರ ಈ ಸೃಜನಶೀಲತೆಗೆ ನಕ್ಕರು. ಮೋನು ಅವರ ವೀಡಿಯೊ ಕುರಿತು ಪ್ರತಿಕ್ರಿಯಿಸುತ್ತಾ, “ಕೇವಲ ನಾನು ಮಾತ್ರ ಮಾಡಲು ಸಾಧ್ಯವಿಲ್ಲ…” ಎಂದು ಬರೆದಿದ್ದಾರೆ. ಇದರೊಂದಿಗೆ ಉರ್ಫಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಗುತ್ತಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೀಡಿಯೋ ನೋಡಿ
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ಮೋನು 2 ಲಕ್ಷ ಫಾಲೋರ್ಸ್
ಹೊಂದಿದ್ದಾರೆ. ಮೋನು ಅವರ ಈ ತಮಾಷೆಯ ವಿಡಿಯೋ ನೋಡಿ ಬಳಕೆದಾರರು ನಗುತ್ತಿದ್ದಾರೆ. ಮೋನು ಡಿಯೋರಿ ಈ ರೀತಿಯ ಅನೇಕ ತಮಾಷೆಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಜನರು ಉರ್ಫಿ ಮತ್ತು ಮೋನು ಇಬ್ಬರ ವೀಡಿಯೊವನ್ನು ತಮಾಷೆ ಎಂದು ಕರೆಯುತ್ತಿದ್ದಾರೆ.