Vairal Video; ಈ ಅಜ್ಜನು ಹೊಡೆದ ಫೇಮಸ್ ಕೊ, ಕ್ಕೊ, ಕೋಳಿ ಡ್ಯಾನ್ಸ್ ಗೆ ಅಲುಗಾಡಿತು ತುಂಬಿದ ಸ್ಟೇಜ್!

ಡಾನ್ಸ್ ನಲ್ಲಿ ಒಂದು ವಿಚಿತ್ರವಾದ ಶಕ್ತಿ ಇದೆ. ಇದು ಮೈಯಲ್ಲಿ ಸಂಚಾರವಾದರೆ ಸಾಕು ವಯಸ್ಸು ನೋಡುವುದಿಲ್ಲ. ಜೀವನದ ಯಾವುದೇ ಘಟ್ಟದಲ್ಲೂ ಮನುಷ್ಯ ಝೆಂಕರಿಸಲು ತಯಾರಾಗುತ್ತಾನೆ. ಸದ್ಯ ಇದೇ ರೀತಿ ಒಂದು ವಿಡಿಯೋವನ್ನು ನಿಮ್ಮ ಮುಂದೆ ತಂದಿದ್ದೇವೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತುಂಬಾ ಜೋಷ್ ನಲ್ಲಿ ಡಾನ್ಸ್ ಹೊಡೆಯುತ್ತಿದ್ದಾನೆ. ಈ ವ್ಯಕ್ತಿಯ ವಯಸ್ಸು ಕಡಿಮೆಯೆಂದರೂ 60 ಇದೆ. ಆದರೆ ವಯಸ್ಸಿನ ಜೊತೆಗೆ ಶಕ್ತಿ ಕಡಿಮೆಯಾಗಿಲ್ಲ, ಸ್ಪೂರ್ತಿ ಕಡಿಮೆಯಾಗಿಲ್ಲ, ಜೋಶ್ ಕಡಿಮೆಯಾಗಿಲ್ಲ. ಬದಲಾಗಿ ಇವೆಲ್ಲವೂ ಹೆಚ್ಚುತ್ತಾ ಬಂದಿವೆ. ಸುಮಾರು 60 ರ ಪ್ರಾಯದ ವ್ಯಕ್ತಿ ಇಡೀ ಸ್ಟೇಜ್ ನ್ನೇ ತನ್ನ ಖತರ್ನಾಕ್ ಡಾನ್ಸ್ ನಿಂದ ಅಲುಗಾಡಿಸಿದ್ದಾನೆ. ಆತನ ಡ್ಯಾನ್ಸಿಗೆ ಪ್ರೇಕ್ಷಕರು ಸಹ ಒಂದೇ ಸವನೆ ಚಿಯರ್ಸ್ ಮಾಡುತ್ತಿದ್ದಾರೆ. ಇವರ ಹೊಡಿಯುತ್ತಿರುವ ಡ್ಯಾನ್ಸಿಗೆ ಹಿಂದಿನಿಂದ ಕೊ ಕ್ಕೊ ಕೋಳಿಯ ಮ್ಯೂಸಿಕ್ ನೀಡಲಾಗುತ್ತಿದೆ. ಮ್ಯೂಸಿಕ್ ಕೇಳುತ್ತಲೇ ವ್ಯಕ್ತಿಯು ಒಮ್ಮೆಲೆ ಹುಚ್ಚೆದ್ದು ಕುಣಿಯುತ್ತಿದ್ದಾನೆ.

ಈ ಡ್ಯಾನ್ಸ್ ಮಾಡುವಾಗ ಅಜ್ಜನ ಮುಖದ ಮೇಲಿನ ಎಕ್ಸ್ಪ್ರೆಶನ್ ನೋಡುವಂತಿದೆ. ಡಾನ್ಸ್ ಹೊಡೆಯುತ್ತ ಹೊಡೆಯುತ್ತಾ ಅಜ್ಜ ಮತ್ತಷ್ಟು ಜೋಶ್ ನಲ್ಲಿ ಬರುತ್ತಾನೆ, ಹಾಗೂ ಸಿಗರೆಟ್ ಹೊತ್ತಿಸಿ ಡಾನ್ಸ್ ಹೊಡೆಯಲು ಶುರು ಮಾಡುತ್ತಾನೆ. ಒಟ್ಟಿನಲ್ಲಿ ಅಜ್ಜ ಕೆಲವೇ ನಿಮಿಷಗಳಲ್ಲಿ ಈ ಡ್ಯಾನ್ಸ್ ನಲ್ಲಿ ಧೂಳೆಬ್ಬಿಸಿದ್ದಾರೆ ಎಂದರೆ ತಪ್ಪಲ್ಲ.

ನೋಡಿ ಈ ವಿಡಿಯೋ…

ಈ ವೀಡಿಯೊವನ್ನು ಯುಟ್ಯೂಬ್ ನಲ್ಲಿ Wisdom Productions ಹೆಸರಿನ ಚಾನೆಲ್ ಮುಖಾಂತರ ಅಪ್ಲೋಡ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 66 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.