Vairal Video; ಗ್ರ್ಯಾಂಡ್ ಮದುವೆಯಲ್ಲಿ ವಧು-ವರರು ಕುಳಿತಿದ್ದರು ಆಕಾಶದಲ್ಲಿ; ನೇರ ಅಲ್ಲಿಂದಲೇ ಅವರಿಳಿದ ಬಗೆ ಒಮ್ಮೆ ತಪ್ಪದೇ ನೋಡಿ…
ಮದುವೆಯ ವಿಡಿಯೋಗಳಲ್ಲಿ ಏನಾದರೂ ಒಂದು ವಿಶೇಷ ಘಟನೆಗಳು ನಡೆದೇ ನಡೆಯುತ್ತವೆ. ಸೋಶಿಯಲ್ ಮೀಡಿಯಾದಿಂದಾಗಿ ವಿಶೇಷ ಘಟನೆಗಳ ಈ ದೃಶ್ಯಗಳು ಕೆಲವೇ ಗಂಟೆಗಳಲ್ಲಿ ಎಲ್ಲ ಕಡೆಗೆ ವೈರಲ್ ಆಗಿಬಿಡುತ್ತವೆ. ಮದುವೆಯಲ್ಲಿ ಅದ್ದೂರಿ ಸೆಟ್ ತಯಾರು ಮಾಡುವ ಫ್ಯಾಷನ್ ಸದ್ಯ ಜೋರಾಗಿದೆ. ಇದಕ್ಕಾಗಿ ಮದುವೆ ಮಾಡುವವರು ಎಷ್ಟು ಹಣ ಖರ್ಚಾದರೂ ಹಿಂದೆ ಮುಂದೆ ನೋಡುವುದಿಲ್ಲ.
ಮದುವೆಯಲ್ಲಿ ಮುಖ್ಯ ಆಕರ್ಷಣೆ ವಧು-ವರರಾಗಿರುತ್ತಾರೆ. ಆದ್ದರಿಂದ ಇವರಿಗಾಗಿ ವಿಶೇಷವಾದ ಸ್ಟೇಜ್ ತಯಾರು ಮಾಡಲಾಗಿರುತ್ತದೆ. ಇಷ್ಟಾದರೂ ಕೆಲವು ಜೋಡಿಗಳಿಗೆ ಈ ಸ್ಟೇಜ್ ಬಿಟ್ಟು ಬೇರೆ ಏನಾದರೂ ಹೊಸದಾದ ವ್ಯವಸ್ಥೆ ಕಲ್ಪಿಸಿಕೊಳ್ಳುವ ಐಡಿಯಾ ತಲೆಯಲ್ಲಿ ಬರುತ್ತದೆ. ಅದು ಒಂದು ವೇಳೆ ಚೆನ್ನಾಗಿ ವರ್ಕ್ಔಟ್ ಆದರೆ ಒಳ್ಳೆಯದು. ಇಲ್ಲವಾದರೆ ಮುಗಿದೇ ಹೋಯಿತು, ಮದುವೆಯ ಮುಖ್ಯ ಕೇಂದ್ರ ಬಿಂದುಗಳೇ (ವಧು ವರ) ಎಲ್ಲರ ಮುಂದೆ ಮುಜುಗರಕ್ಕೆ ಒಳಗಾಗಿ ಬಿಡುವುದು ಖಂಡಿತ. ಸದ್ಯ ಈ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯ ನೋಡಲು ಸಿಗುತ್ತಿದೆ. ಈ ಮದುವೆಯಲ್ಲಿಯ ವಧು-ವರರಿಗೆ JCB ಯ ಮುಂದೆ ಇರುವ ಲೋಡರ್ ಬಕೆಟ್ ನಲ್ಲಿ ಕುಳ್ಳಿರಿಸಿ ಆ ಬಕೆಟ್ ಮೇಲಕ್ಕೆ ಎತ್ತಿ ನಿಲ್ಲಿಸಿದ್ದಾರೆ. ಅದರಲ್ಲಿ ವಧು-ವರರು ತುಂಬಾ ರಿಲ್ಯಾಕ್ಸ್ ಆಗಿ ಸಂಬಂಧಿಕರ ಮುಂದೆ ಕುಳಿತು ತಮ್ಮ ಮದುವೆಯ ಆಸ್ವಾದವನ್ನು ತೆಗೆದುಕೊಳ್ಳುತ್ತಿದ್ದಾರೆ. ಅಷ್ಟರಲ್ಲಿಯೇ ಏನಾಗುತ್ತದೆ ಗೊತ್ತಿಲ್ಲ ಲೋಡರ್ ಬಕೆಟ್ ಹಠಾತ್ ಕೆಳಗಿನ ಬದಿಗೆ ವಾಲುತ್ತದೆ. ಇಬ್ಬರೂ ಮದುಮಕ್ಕಳು ತುಂಬಾ ರಿಲ್ಯಾಕ್ಸ್ ಆಗಿ ಕುಳಿತಿರುವ ಕಾರಣ ಅವರಿಗೆ ಯಾವುದೇ ರೀತಿಯ ಬ್ಯಾಲೆನ್ಸ್ ಮಾಡಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಇಬ್ಬರೂ ಕೂಡಿ ಮೇಲಿನಿಂದ ಒಮ್ಮೆಲೆ ಕೆಳಗೆ ಬೀಳುತ್ತಾರೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ gelinarabasi34 ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 3.3 ಮಿಲಿಯನ್ ಜನರಿಗೆ ರಂಜಿಸಿದೆ.