Vairal Video; ಡಾನ್ಸ್ ಬರೀ ತೆಳ್ಳಗಿದ್ದವರ ಸ್ವತ್ತೇನು? ದಪ್ಪನೆಯ ಯುವತಿ ಸಾದರ ಪಡಿಸಿದ ಈ ಅದ್ಭುತ ಡಾನ್ಸ್ ಒಮ್ಮೆ ನೋಡಿ!
ಸೋಷಿಯಲ್ ಮೀಡಿಯಾದಲ್ಲಿ ಡಾನ್ಸ್ ಇಷ್ಟಪಡುವ ವರ್ಗ ತುಂಬಾ ದೊಡ್ಡದಿದೆ. ಅದರಲ್ಲೂ ಯೂನಿಕ್ ಡಾನ್ಸ್ ಗಳೆಂದರೆ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಬಿಡುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ಸಮಯದಲ್ಲಿ ವೈರಲ್ ಆದ ವಿಶೇಷ ಡಾನ್ಸ್ ಒಂದು ನಿಮಗಾಗಿ ತಂದಿದ್ದೇವೆ.
ಪ್ರಸ್ತುತ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ಮಹಿಳೆ ದೇಹದಿಂದ ತುಂಬಾ ಹೇವಿ ಆಗಿದ್ದಾಳೆ. ಆದರೂ ಕುಣಿತವೇನು ಬರೀ ತೆಳ್ಳಗಿನವರ ಸ್ವತ್ತಲ್ಲ ಎಂಬಂತೆ ತುಂಬಾ ಸೂಪರ್ ಆಗಿ ಹಾಡಿಗೆ ತಕ್ಕಂತೆ ತನ್ನಲ್ಲಿರುವ ಕಲೆಯನ್ನು ಈ ಯುವತಿ ಸಾದರ ಪಡಿಸಿದ್ದಾಳೆ. ಕೆಂಪು ಸೀರೆಯಲ್ಲಿ ಯುವತಿ ತುಂಬಾ ಎದ್ದು ಕಾಣುತ್ತಿದ್ದಾಳೆ. ವಿಶೇಷವೆಂದರೆ ಈ ಹಾಡಿಗೆ ಮತ್ತು ಸಂಗೀತಕ್ಕೆ ತಕ್ಕಂತೆ ಒಂಚೂರು ತಪ್ಪದೇ ಲೀಲಾಜಾಲವಾಗಿ ತನ್ನ ಕಲೆಯನ್ನು ಸಾದರ ಪಡಿಸಿದ್ದಾಳೆ. ಯುವತಿಯ ಈ ನೃತ್ಯ ನೆಟ್ಟಿಗರಿಗೆ ಮಾತ್ರ ಸಖತ್ತಾಗಿ ಇಷ್ಟವಾಗಿದೆ. ವಿಡಿಯೋ ವೈರಲ್ ಆದದ್ದನ್ನು ನೋಡಿದರೆ ಯುವತಿಯ ಕುಣಿತಕ್ಕೆ ಇಂಟರ್ನೆಟ್ ಯೂಸರ್ಗಳು ಮಾರುಹೋಗಿದ್ದಾರೆ.
ನೋಡಿ ಈ ಯುವತಿಯ ನೃತ್ಯ…
View this post on Instagram
ಪ್ರಸ್ತುತ ಈ ವೈರಲ್ ಆದ ವಿಡಿಯೋ ಇಂಟರ್ನೆಟ್ ನಲ್ಲಿ ಈವರೆಗೆ 9.7 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ ಪ್ರಸ್ತುತ ವಿಡಿಯೋವನ್ನು 6 ಲಕ್ಷ 16 ಸಾವಿರ ಜನರು ಲೈಕ್ ಮಾಡಿದ್ದಾರೆ.