Vava Suresh : ಇದು ನನ್ನ ಪುನರ್ಜನ್ಮ! ದ ಗ್ರೇಟ್ ಸ್ನೇಕ್ ಕ್ಯಾಚರ್ ವಾವಾ ಸುರೇಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್; ಕೋಬ್ರಾ ಕಚ್ಚಿದ ರೀತಿಯ ವಿಡಿಯೋ ವೈರಲ್…
ಭಾರತದಲ್ಲಿಯೇ ದ ಗ್ರೇಟ್ ಸ್ನೇಕ್ ಕ್ಯಾಚರ್ ಎಂದು ಗುರುತಿಸಿಕೊಳ್ಳುವ ಕೇರಳದ ವಾವಾ ಸುರೇಶ್ ಅವರಿಗೆ ಜನೆವರಿ ತಿಂಗಳ ಕೊನೆಯ ದಿನ 31ಕ್ಕೆ ಕೋಬ್ರಾ ದಂಶ ಮಾಡಿತ್ತು. ಸುರೇಶ್ ಅವರ ಮೇಲೆ ಕೊಟ್ಟಾಯಮ್ ನ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ನಡೆದಿತ್ತು. ಈಗ ಸುರೇಶ್ ಅವರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಿದ ನಂತರ ಜನರು ಸುರೇಶ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಆಗ ವಾವಾ ಸುರೇಶ್ ಅವರು ವಿ ಎನ್ ವಾಸವನ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅವರು ಮಾಡಿದ ಸಹಾಯದಿಂದ ನನ್ನ ಪ್ರಾಣ ಉಳಿಯಿತು ಎಂದು ಹೊಗಳಿದ್ದಾರೆ. ಜೊತೆಗೆ ಅವರು MCH ಸಿಬ್ಬಂದಿ ವರ್ಗಕ್ಕೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸುರೇಶ್ ಅವರು ಹೇಳುವ ಪ್ರಕಾರ, ಒಬ್ಬರು ಅರಣ್ಯ ಅಧಿಕಾರಿ ಸುರೇಶ್ ಅವರ ವಿರುದ್ಧ ತಪ್ಪಾದ ಮಾಹಿತಿಯನ್ನು ಪಸರಿಸುತ್ತಿದ್ದರು. ಸುರೇಶ್ ಹಾವುಗಳನ್ನು ಹಿಡಿಯಲು ಯಾವುದೇ ರೀತಿಯ ಉಪಕರಣಗಳನ್ನು ಉಪಯೋಗಿಸುವುದಿಲ್ಲ ಎಂಬ ಟೀಕೆಗಳು ಸಹ ಕೇಳಿ ಬಂದಿದ್ದವು. ಆದರೆ ಸಂದರ್ಶನದಲ್ಲಿ ಮಾತ್ರ ಸುರೇಶ್ ಇನ್ನು ಮುಂದೆ ಸರ್ಪಗಳನ್ನು ಹಿಡಿಯುವಾಗ ಇನ್ನಷ್ಟು ಹೆಚ್ಚಿಗೆ ಕಾಳಜಿಯನ್ನು ತೆಗೆದುಕೊಳ್ಳುತ್ತೇನೆ ಮತ್ತು ನಾನು ಜೀವ ಇರುವವರೆಗೂ ಹಾವುಗಳನ್ನು ಹಿಡಿಯುವ ಕೆಲಸ ಮಾಡುತ್ತಾ ಇರುತ್ತೇನೆ ಎಂದಿದ್ದಾರೆ. ಜನೆವರಿ 31 ರಂದು ಸುರೇಶ್ ಅವರು ಕೊಟ್ಟಾಯಮ್ ಹತ್ತಿರ ಕುರಿಚಿ ಗ್ರಾಮದಲ್ಲಿ ಹಾವು ಹಿಡಿಯಲು ಹೋದ ಸಂದರ್ಭದಲ್ಲಿ ಕೋಬ್ರಾ ಅವರ ತೊಡೆಗೆ ಕಚ್ಚಿ ಬಿಟ್ಟಿತ್ತು.
ನೋಡಿ ಸುರೇಶ್ ಅವರಿಗೆ ಹಾವು ಕಚ್ಚಿದ ವಿಡಿಯೋ…
Vava Suresh is bitten by Cobra, he is hospitalized & in critical situation. He is widely being consider as the brother and friend for every Trivandrum residents. please pray for him to come back in action likewise he survived in the past@ShashiTharoor @WeAreTrivandrum @navjotk28 pic.twitter.com/VdlYf1jlBd
— 𝓥𝓲𝓼𝓱𝓪𝓴𝓱 𝓒𝓱𝓮𝓻𝓲𝓪𝓷 (@VishakhCherian) January 31, 2022
ಸುರೇಶ್ ಅವರಿಗೆ ಹಾವು ಕಚ್ಚಿದ್ದು ಇದೆ ಮೊದಲವೇನಲ್ಲ. ಇದಕ್ಕೂ ಮುನ್ನ ಅನೇಕ ಸಲ ಸರ್ಪಗಳು ಕಚ್ಚಿವೆ. 2020 ರಲ್ಲಿಯಂತೂ ಅವರಿಗೆ ಪಿಟ್ ವೈಪರ್ ಹಾವು ಕಚ್ಚಿತ್ತು. ಇಲ್ಲಿಯವರೆಗೆ 3500 ಕ್ಕಿಂತಲೂ ಹೆಚ್ಚು ಹಾವುಗಳು ಸುರೇಶ್ ಅವರ ರಕ್ತದ ರುಚಿ ನೋಡಿವೆ. ಅದರಲ್ಲಿ ಸುಮಾರು 300 ಸರ್ಪಗಳು ವಿಷಕಾರಿಯಾಗಿದ್ದವು. ಕೇರಳವಿದು ವಿಶೇಷವಾಗಿ 110 ಪ್ರಕಾರದ ಹಾವುಗಳ ಮನೆಯೆಂದು ಗುರುತಿಸಿ ಕೊಳ್ಳುತ್ತದೆ. ಸುರೇಶ್ ಅವರು ಇಲ್ಲಿಯವರೆಗೆ ಸುಮಾರು ಎಲ್ಲ ಪ್ರಜಾತಿಯ ಹಾವುಗಳನ್ನು ಹಿಡಿದಿದ್ದಾರೆ.