Video; ವಯಸ್ಸು ಇದೊಂದು ನಂಬರ್ ಅಷ್ಟೇ; ಸುಮಾರು 70/75 ರ ಹರೆಯದ ಅಜ್ಜಿಯ ಜಿಗಿತ ನೇರ ಆಕಾಶಕ್ಕೆ.

ಸಾಮಾಜಿಕ ಜಾಲತಾಣವು ಅದ್ಭುತದಿಂದ ಕೂಡಿದೆ. ಸೋಶಿಯಲ್ ಮೀಡಿಯಾ ಅಂದರೆ ವೈರಲ್ ವಿಡಿಯೋಗಳ ದೊಡ್ಡ ವೇದಿಕೆ. ಇಲ್ಲಿ ನೇಟಿಜನ್ಸ್ ಗಳಿಗೆ ಯಾವ ಪ್ರಕಾರದ ವಿಡಿಯೋ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏನಾದರೂ ಒಂದು ಕಾರಣದಿಂದ ದಿನಂಪ್ರತಿ ಯಾವುದಾದರೂ ಒಂದು ವಿಡಿಯೋ ವೈರಲ್ ಆಗುತ್ತದೆ. ಕೆಲವೊಂದು ವಿಡಿಯೋಗಳು ನೆಟ್ಟಿಗರಿಗೆ ಆನಂದ, ಸಂತೋಷ ನೀಡಿದರೆ ಇನ್ನು ಕೆಲವು ವಿಡಿಯೋಗಳು ತಮಾಷೆಯಿಂದ ನಕ್ಕು ನಗಿಸಿ ಬಿಡುತ್ತವೆ. ಕೆಲವು ವಿಡಿಯೋಗಳನ್ನಂತೂ ನೋಡಿದಾಗ ಕೋಪ ತಾರಕಕ್ಕೇರುತ್ತದೆ. ಇನ್ನು ಕೆಲವು ವಿಡಿಯೋಗಳು ಜೀವನ ಜೀವಿಸುವ ನಿಜವಾದ ಪಾಠವನ್ನು ಸಹ ಹೇಳಿಕೊಡುತ್ತವೆ.

ಪ್ರಸ್ತುತ ಅಂಕಣದಲ್ಲಿ ನೀವು ನೋಡಲಿರುವ ಕೆಲವೇ ಸೆಕೆಂಡುಗಳ ಈ ವಿಡಿಯೋ ಜೀವನವನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳಬೇಕೆಂಬ ಸಂದೇಶವನ್ನು ನೀಡುತ್ತಿದೆ. ಇಲ್ಲಿ ಒಬ್ಬಳು ಅಜ್ಜಿ ಮಾಡುತ್ತಿರುವ ಸ್ಟಂಟ್ ನೋಡಿ. ಈ ಅಜ್ಜಿ ಎಂಥ ಮಹತ್ವದ ಸಂದೇಶವನ್ನು ನೀಡುತ್ತಿದ್ದಾರೆಂದು ತಿಳಿದು ಬರುತ್ತದೆ. ವಯಸ್ಸಾದರೂ ಸಹ ಈ ಅಜ್ಜಿಯ ಉತ್ಸಾಹಕ್ಕೆ ಏನು ಕಡಿಮೆ ಇಲ್ಲ. ಸುಮಾರು 70 ರಿಂದ 75 ವರ್ಷ ವಯಸ್ಸಿನ ಈ ಹರೆಯದ ಅಜ್ಜಿ ಪ್ಯಾರಾಶೂಟ್ ದೊಂದಿಗೆ ನೇರ ಆಕಾಶಕ್ಕೆ ಜಿಗಿಯಲು ರೆಡಿಯಾಗಿದ್ದಾರೆ ಮತ್ತು ಜಿಗಿದು ಬಿಡುತ್ತಾರೆ.

ಈ ರೀತಿಯ ಸ್ಟಂಟ್ ಮಾಡಲು ಯುವಕರು ಸಹ ಹೆದರುವುದುಂಟು. ಆದರೆ ಅಜ್ಜಿ ತನ್ನ ಈ ಇಳಿವಯಸ್ಸಿನಲ್ಲಿ ಈ ಸ್ಟಂಟ್ ಮಾಡಲು ತೋರಿಸುತ್ತಿರುವ ಉತ್ಸಾಹ ನಿಜಕ್ಕೂ ಯುವಕರಿಗೆ ದಾರಿದೀಪವಾಗಿದೆ. ಅಜ್ಜಿಯ ಈ ಆಟವನ್ನು ನೋಡಿದರೆ ವಯಸ್ಸು ಕೇವಲ ಒಂದು ನಂಬರ್ ಅಷ್ಟೇ ಎನಿಸುತ್ತದೆ. ಮನಸ್ಸಿದ್ದರೆ ಮನುಷ್ಯ ಯಾವ ವಯಸ್ಸಿನಲ್ಲಿಯೂ ಏನು ಬೇಕಾದರೂ ಸಾಧಿಸಬಲ್ಲ ಎಂಬ ಸಂದೇಶವನ್ನು ಅಜ್ಜಿ ಎಲ್ಲರಿಗೂ ನೀಡುವಂತಿದೆ. ಇಲ್ಲಿ ಅಜ್ಜಿಯು ಗಂಡುಗಚ್ಚಿ ಹಾಕಿ ಪ್ಯಾರಾಶೂಟ್ನಲ್ಲಿ ಆಕಾಶಕ್ಕೆ ಹಾರಿ ಜೀವನದಲ್ಲಿ ಒಮ್ಮೆಯಾದರೂ ಮೋಜು ಮಾಡುವ ಹವ್ಯಾಸ ಇಟ್ಟುಕೊಂಡಿದ್ದಾರೆ ಎಂದರೆ ಇವರಿಗೆ 100 ತೋಪುಗಳ ಘರ್ಜನೆಯೊಂದಿಗೆ ಸೆಲ್ಯೂಟ್ ನೀಡಬೇಕು.

ನೋಡಿ ಈ ವಿಡಿಯೋ…

ಹವ್ಯಾಸದಿಂದ ತುಂಬಿದ ಅಜ್ಜಿಯ ಈ ಸೂಪರ್ ವಿಡಿಯೋವನ್ನು gulzar.shayri.he ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಅಜ್ಜಿಯ ಈ ಮುಕ್ತವಾದ ಆಕಾಶ ಜಿಗಿತದ ವಿಡಿಯೋ ನೋಡಿ ಸಾವಿರಾರು ನೇಟಿಜನ್ಸ್ ಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತು ಅಷ್ಟೇ ಪ್ರೀತಿಯ ಇಮೋಜಿಗಳನ್ನು ಕಾಮೆಂಟ್ ನಲ್ಲಿ ಶೇರ್ ಮಾಡಿದ್ದಾರೆ.