Viagra ನಿಂದ 45 ದಿವಸಗಳಿಂದ ಕೋಮಾನಲ್ಲಿದ್ದ ಕರೊನಾ ಪಾಸಿಟಿವ್ ನರ್ಸ್ ಜೀವ ಉಳಿಯಿತು!!

ಇಂಗ್ಲೆಂಡ್‌ನ ಗೇನ್ಸ್‌ಬರೋ ಲಿಂಕನ್‌ಶೈರ್‌ನಲ್ಲಿ ವಾಸಿಸುತ್ತಿದ್ದ ಕರೋನಾ ಸೋಂಕಿತ ನರ್ಸ್ ವಯಾಗ್ರ ಸಹಾಯದಿಂದ ಆಕೆಯ ಪ್ರಜ್ಞೆಯನ್ನು ತರಲಾಯಿತು. ವಾಸ್ತವವಾಗಿ, ಈ ನರ್ಸ್ 45 ದಿನಗಳ ಕಾಲ ಕೋಮಾದಲ್ಲಿದ್ದರುB ಮತ್ತು ಅವರ ಆಕ್ಸಿಜನ್ ಮಟ್ಟವು ನಿರಂತರವಾಗಿ ಕಡಿಮೆಯಾಗುತ್ತ ಹೋಗುತ್ತಿತ್ತು.

‘ದಿ ಸನ್’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಮೋನಿಕಾಗೆ ಪ್ರಜ್ಞೆ ಬಂದಾಗ, ಇದಕ್ಕಾಗಿ ಅವರು ವೈದ್ಯರು ಮತ್ತು ಅವರ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ್ದಾರೆ. ಮೋನಿಕಾಗೆ ಪ್ರಜ್ಞೆಯನ್ನು ತರಲು, ವೈದ್ಯರು ಇರೆಕ್ಟಾಯಿಲ್ ಡಿಸಫನ್ಕ್ಷನ್ ಔಷಧಿಯ ಉಪಯೋಗ ಮಾಡಿದ್ದರು. ವಾಸ್ತವವಾಗಿ, ಮೋನಿಕಾ ಅವರ ಆಕ್ಸಿಜನ್ ಮಟ್ಟವು ಮೊದಲೇ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿತ್ತು ಅಲ್ಲದೆ ನಂತರವೂ ಸಹ ಅತಿ ವೇಗವಾಗಿ ಕಡಿಮೆಯಾಗತೊಡಗಿತು. ಅವರ ಆಕ್ಸಿಜನ್ ಮಟ್ಟ ಹೆಚ್ಚಿಸುವ ಸಲುವಾಗಿ ವೈದ್ಯರು ವಿಚಿತ್ರ ರೀತಿಯಲ್ಲಿ ಉಪಚಾರ ಮಾಡಿದರು.

ಇಂಗ್ಲೆಂಡಿನ ಗೇನ್ಸ್‌ಬರೋ ಲಿಂಕನ್‌ಶೈರ್‌ನ ನಿವಾಸಿ ನರ್ಸ್ ಮೋನಿಕಾ ಹೇಳಿದ್ದೇನೆಂದರೆ, ‘‘ನನಗೆ ಪ್ರಜ್ಞೆ ಬಂದಾಗ ವೈದ್ಯರು , ವಯಾಗ್ರದ ಸಹಾಯದಿಂದ ನನಗೆ ಪ್ರಜ್ಞೆ ಬಂದಿರುವುದಾಗಿ ಹೇಳಿದರು. ಮೊದಮೊದಲು ನನಗೆ ಇದೆಲ್ಲ ತಮಾಷೆಯಾಗಿ ಕಂಡಿತು. ಆದರೆ ವಾಸ್ತವದಲ್ಲಿ ಅವರು ನನಗೆ ಭಾರೀ ಪ್ರಮಾಣದಲ್ಲಿ ವಯಾಗ್ರ ನೀಡಲಾಗಿದೆ ಎಂದು ನಂತರ ಹೇಳಿದರು.”

ಮೋನಿಕಾ NHS ಲಿಂಕನ್‌ಶೈರ್‌ನಲ್ಲಿ ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಸಮಯದಲ್ಲಿ, ಅವರಿಗೆ ಅಕ್ಟೋಬರ್‌ನಲ್ಲಿ ಕರೋನಾ ಸಂಕ್ರಮಣ ಆಗಿತು. ಕ್ರಮೇಣ ಅವರ ಆರೋಗ್ಯ ಇನ್ನಷ್ಟು ಹದಗೆಡತೊಡಗಿತು ಮತ್ತು ರಕ್ತದ ವಾಂತಿ ಕೂಡ ಪ್ರಾರಂಭವಾಯಿತು. ಇದಾದ ನಂತರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಲ್ಲದೆ ಅಲ್ಲಿಂದ ಶೀಘ್ರದಲ್ಲೇ ಅವರನ್ನು ಬಿಡುಗಡೆ ಸಹ ಮಾಡಲಾಯಿತು.

ಆದರೆ ಮನೆಗೆ ಹೋದ ಕೂಡಲೇ ಮೋನಿಕಾಗೆ ಉಸಿರಾಟದ ತೊಂದರೆ ಶುರುವಾಯಿತು. ಅದರ ನಂತರ ಅವರು ನೇರವಾಗಿ ಲಿಂಕನ್ ಕೌಂಟಿ ಆಸ್ಪತ್ರೆಗೆ ಹೋದರು. ಅಲ್ಲಿ ಅವರಿಗೆ ಚಿಕಿತ್ಸೆ ಆರಂಭಿಸಲಾಯಿತು. ಆದರೆ ಅವರ ಆಮ್ಲಜನಕದ ಮಟ್ಟವು ನಿರಂತರವಾಗಿ ಕುಸಿಯುತ್ತಿತ್ತು ಇದನ್ನು ಕಂಡು ಡಾಕ್ಟರ್ ಅವರನ್ನು ICU ಗೆ ಸೇರಿಸಿದರು. ನವೆಂಬರ್ 16 ರಂದು, ಅವರು ಕೋಮಾದಲ್ಲಿ ಹೋದರು.

ಸತತವಾಗಿ ಆಕ್ಸಿಜನ್ ಮಟ್ಟ ಕೆಳಗೆ ಇಳಿಯುವದನ್ನು ಕಂಡು ಮೋನಿಕಾ ಚಿಕಿತ್ಸೆಗೆ ವೈದ್ಯರು ವಿಭಿನ್ನ ಉಪಾಯವನ್ನು ಕಂಡುಕೊಂಡರು. ಅವರನ್ನು ವಯಾಗ್ರ ಔಷಧದಿಂದ ಚಿಕಿತ್ಸೆ ನೀಡಿದರು. ವಾಸ್ತವವಾಗಿ, ವಯಾಗ್ರ ಬಳಕೆಯು ರಕ್ತ ಪರಿಚಲನೆ ಸುಧಾರಿಸುತ್ತದೆ. ವಯಾಗ್ರ ಶ್ವಾಸಕೋಶದಲ್ಲಿ ಫಾಸ್ಫೋಡಿಸ್ಟರೇಸ್ ಕಿಣ್ವಗಳನ್ನು ಉತ್ಪಾದಿಸುತ್ತದೆ ಮತ್ತು ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ಶ್ವಾಸಕೋಶವನ್ನು ವಿಶ್ರಾಂತಿ ನೀಡುವ ಕೆಲಸ ಮಾಡುತ್ತದೆ.

ಮೋನಿಕಾ ಹೇಳಿದ್ದೇನೆಂದರೆ, “ಕೇವಲ ವಯಾಗ್ರ ಔಷಧಿಯ ಮೂಲಕ ನನ್ನ ಜೀವ ಉಳಿದಿದೆ. 48 ಗಂಟೆಗಳಲ್ಲಿ ನನ್ನ ಶ್ವಾಸಕೋಶಗಳು ಕೆಲಸ ಮಾಡಲು ಪ್ರಾರಂಭಿಸಿದವು. ನನಗೆ ಅಸ್ತಮಾ ಸಹ ಇದೆ, ಇದರಿಂದಾಗಿ ನನ್ನ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತಿರುತ್ತಿತ್ತು.” ಈಗ ಮೋನಿಕಾ ಮೊದಲಿಗಿಂತ ಹೆಚ್ಚು ಆರೋಗ್ಯವಾಗಿದ್ದಾರೆ ಮತ್ತು ಮುಂದಿನ ಚಿಕಿತ್ಸೆಯನ್ನು ತನ್ನ ಮನೆಯಲ್ಲಿಯೇ ತೆಗೆದುಕೊಳ್ಳುತ್ತಿದ್ದಾರೆ.