Video; ಅಕ್ಕ ಮತ್ತೆ ಬಂದಳು ಸ್ಕೂಟರ್ ತೆಗೆದುಕೊಂಡು; ಈ ಬಾರಿ ಸ್ವಲ್ಪ ದೂರದಿಂದಲೇ ನೋಡಿ ಈ ಸ್ಟಂಟ್!
ಸೋಶಿಯಲ್ ಮೀಡಿಯಾದಲ್ಲಿ ಯುವತಿಯರ ಸ್ಕೂಟರ್ ನಡೆಸುವ ಸಂಬಂಧದ ಅನೇಕ ವಿಡಿಯೋಗಳನ್ನು ಸಾಕಷ್ಟು ತಮಾಷೆಗೆ ಗುರಿ ಮಾಡಲಾಗುತ್ತದೆ. ಇಂಥ ಘಟನೆಗಳು ಪುರುಷರಿಂದಲೂ ನಡೆಯುತ್ತವೆ. ಆದರೆ ಅವರನ್ನು ಅಷ್ಟೊಂದು ಅಪಹಾಸ್ಯಕ್ಕೆ ಗುರಿಪಡಿಸುವದಿಲ್ಲ. ಇರಲಿ ಸದ್ಯ ಇದೇ ರೀತಿಯ ಬೇರೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಇಲ್ಲಿ ಅಕ್ಕ ಏನು ಮಾಡಿದ್ದಾಳೆ ನೋಡಿ.
ಯುವತಿಯೊಬ್ಬಳು ಪ್ರಸ್ತುತ ವಿಡಿಯೋದಲ್ಲಿ ಸ್ಕೂಟರ್ ನಡೆಸುವ ತಯಾರಿಯಲ್ಲಿದ್ದಾಳೆ. ತನ್ನ ಸ್ಕೂಟರ್ ನ್ನು ಟರ್ನ್ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ಸ್ಕೂಟರ್ ಒಮ್ಮೆಲೆ ಕುದುರೆಯ ಹಾಗೆ ಜಂಪ್ ತೆಗೆದುಕೊಂಡು ನಾಗಾಲೋಟದಿಂದ ಎದುರಿಗಿದ್ದ ಗ್ರಿಲ್ ಗೇಟ್ ಗೆ ಡಿಕ್ಕಿ ಹೊಡೆದಿದೆ. ಅಲ್ಲಿ ಡಿಕ್ಕಿ ಅಷ್ಟೇ ಹೊಡೆದಿಲ್ಲ, ಸ್ಕೂಟರ್ ಸಂಪೂರ್ಣವಾಗಿ ಗ್ರಿಲ್ ಗೇಟ್ ನೊಳಗೆ ನುಗ್ಗಿದೆ. ಈ ದೃಶ್ಯ ನೋಡಲು ತುಂಬಾ ವಿಚಿತ್ರವಾಗಿಯೇ ಇದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋವನ್ನು seuseurian.id ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 4.8 ಮಿಲಿಯನ್ ಜನರು ನೋಡಿದ್ದು ಸುಮಾರು 1 ಲಕ್ಷ 27 ಸಾವಿರ ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.