Video; ಅತ್ಯದ್ಭುತವಾಗಿ ಕಾರು ಪಾರ್ಕಿಂಗ್ ಮಾಡುತ್ತಲೇ ಕ್ಷಣದಲ್ಲಿ ನಾಲ್ಕು ಕಾರುಗಳನ್ನು ಗುಜರಿಗೆ ಹಾಕುವ ವ್ಯವಸ್ಥೆ ಮಾಡಿದ ಭೂಪ..!
ವಾಹನಗಳನ್ನು ನಡೆಸುವವರು ಎಲ್ಲರೂ ಪರ್ಫೆಕ್ಟ್ ಆಗಿಯೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ವಾಹನ ಚಾಲಕರು ಯಾವಾಗ ಎಲ್ಲಿ ಯಾರಿಗೆ ಡಿಕ್ಕಿ ಹೊಡೆಯುತ್ತಾರೆ ಎಂಬುದು ಆ ದೇವರಿಗೆ ಮಾತ್ರ ಗೊತ್ತು. ಆದ್ದರಿಂದಲೇ ರಸ್ತೆ ಮೇಲೆ ಸುತ್ತಾಡುವಾಗ ತುಂಬಾ ಜಾಗೃತೆಯಿಂದ ಸುತ್ತಾಡಬೇಕೆಂದು ಹೇಳುತ್ತಾರೆ. ನೀವು ನಡೆದುಕೊಂಡೇ ಇರಲಿ ಅಥವಾ ವಾಹನಗಳ ಜೊತೆಗೆ ಇರಲಿ. ಸದಾ ಅಲರ್ಟ್ ಮಾತ್ರ ಇರಬೇಕು. ಕಾರಣ ಸಾಕಷ್ಟು ಜನ ಡ್ರೈವರ್ ಗಳು ತುಂಬಾ ಬೇಜವಾಬ್ದಾರಿತನದಿಂದ ವಾಹನಗಳನ್ನು ನಡೆಸುತ್ತಾರೆ. ಇದರಿಂದ ಅವರಿಗಂತೂ ಹಾನಿ ಹಾಗೆಯೇ ಆಗುತ್ತದೆ ಜೊತೆಗೆ ಇನ್ನೊಬ್ಬರ ಜೀವ ಮತ್ತು ವಾಹನಗಳಿಗೂ ಹಾನಿ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಬೇಜವಾಬ್ದಾರಿತನದ ಡ್ರೈವಿಂಗ್ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ರಸ್ತೆಯ ಬದಿಗೆ ಪಾರ್ಕಿಂಗ್ ನಲ್ಲಿ ನಾಲ್ಕು ಕಾರುಗಳು ನಿಂತಿವೆ. ಅವುಗಳ ಮಧ್ಯ ಒಂದೇ ಒಂದು ಕಾರಿಗೆ ಪಾರ್ಕ್ ಮಾಡುವಷ್ಟು ಸ್ಥಳ ಬಾಕಿ ಇದೆ. ಅಷ್ಟರಲ್ಲಿ ಕ್ಯಾಮೆರಾದ ಎದುರಿನಿಂದ ವೇಗವಾಗಿ ಕಾರೊಂದು ರೌದ್ರ ರೂಪ ಧಾರಣೆ ಮಾಡಿಕೊಂಡು ನುಸುಳಿ ಬರುತ್ತದೆ. ವೇಗದಲ್ಲಿ ಬಂದ ಕಾರು ಎಲ್ಲಿಯೂ ನಿಲ್ಲದೆ ನೇರ ರಸ್ತೆ ಬದಿಯಲ್ಲಿ ನಿಂತ ನಾಲ್ಕು ಕಾರುಗಳನ್ನು ಏರಿ ಬಂದು ಮಧ್ಯೆ ಖಾಲಿ ಇದ್ದ ಸ್ಥಳದಲ್ಲಿ ಕುಕ್ಕರಿಸುತ್ತದೆ. ಈ ಸಂದರ್ಭದಲ್ಲಿ ಮಧ್ಯದಲ್ಲಿ ನಿಂತ ನಾಲ್ಕು ಕಾರುಗಳು ಡ್ಯಾಮೇಜ್ ಆಗಿವೆ. ತಮಾಷೆಯ ವಿಷಯವೇನೆಂದರೆ, ಕಾರು ಚಾಲಕ ತುಂಬಾ ಆರಾಮಾಗಿ ಕಾರು ಪಾರ್ಕ್ ಮಾಡಿ ಇಳಿದು ಬರುತ್ತಾನೆ. ವಿಡಿಯೋ ನೋಡಿದಾಗ ಆ ಕಾರಿನ ಡ್ರೈವರ್ ತನ್ನ ಕಾರನ್ನು ಪಾರ್ಕ್ ಮಾಡುವ ಸಲುವಾಗಿ ತುಂಬಾ ಉತ್ತಮವಾದ ಸ್ಥಳವನ್ನು ಚೂಸ್ ಮಾಡಿದ್ದಾನೆಂದು ಅನಿಸುತ್ತದೆ. ನಾಲ್ಕು ಕಾರುಗಳಿಗೆ ಡ್ಯಾಮೇಜ್ ಮಾಡಿ ಈ ಡ್ರೈವರ್ ಮಾತ್ರ ಕೂಲಾಗಿ ತಿರುಗಾಡಲು ಹೋಗುತ್ತಾನೆ.
ನೋಡಿ ಆತ ತನ್ನ ಕಾರನ್ನು ಪಾರ್ಕ ಮಾಡಿದ ಸ್ಟೈಲ್…
https://twitter.com/GTA___Memes/status/1481385816530239488?s=20&t=bH4Pp1C2xIX8aJ45oCQMqg
ಈ ತಮಾಷೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಟ್ವಿಟರ್ ನಲ್ಲಿ GTA MEMES ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3 ಲಕ್ಷ 40 ಸಾವಿರ ಜನರು ನೋಡಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಕಮೆಂಟ್ ಬಾಕ್ಸ್ ನಲ್ಲಿ ಅನೇಕ ರೀತಿಯ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ನೆಟ್ಟಿಗ ‘ಇದು ತುಂಬಾ ಗ್ರೇಟ್ ಪಾರ್ಕಿಂಗ್’ ಎಂದಿದ್ದಾನೆ.