Video; ಅದ್ಭುತ..! ಸತ್ಯಭಾಮೆಯ ನೀಳ ಕೇಶರಾಶಿ ನೋಡಿ…ಹೀಗೂ ಉಂಟೆ? ಎಂಬ ಪ್ರಶ್ನೆ ಮೂಡದೇ ಇರದು…
ನಿಸರ್ಗ ಕೆಲವರಿಗೆ ಒಂದೊಂದು ವರ ನೀಡಿರುತ್ತದೆ. ಅಂಥ ಮಹಾನುಭಾವರು ಲಕ್ಷಾವಧಿ ಜನರಲ್ಲಿ ಒಬ್ಬರಾಗಿರುತ್ತಾರೆ. ಇವರು ಎಲ್ಲಿದ್ದರೂ ಎಲ್ಲರ ದೃಷ್ಟಿಯನ್ನು ತಮ್ಮ ಕಡೆಗೆ ಸೆಳೆಯುವಂತಹ ಶಕ್ತಿ ಹೊಂದಿರುತ್ತಾರೆ. ಸದ್ಯ ಇಲ್ಲಿಯೇ ನೋಡಿ ಗೊತ್ತಾಗುತ್ತದೆ.
ಈ ವಿಡಿಯೋದಲ್ಲಿ ಯುವತಿಯೊಬ್ಬಳು ಕೈಯಲ್ಲಿಟ್ಟ ಹೂವಿನ ಪಕಳೆಗಳನ್ನು ಬಾಯಿಯಿಂದ ಊದಿ ಗಾಳಿಯಲ್ಲಿ ಹಾರಿಸುತ್ತಾಳೆ ಮತ್ತು ನಂತರ ಕ್ಯಾಮರಾದ ಕಡೆಗೆ ಬೆನ್ನು ಮಾಡಿ ಓಡುತ್ತಾಳೆ. ಯುವತಿ ಕ್ಯಾಮರಾದ ಕಡೆಗೆ ಬೆನ್ನು ಮಾಡುತ್ತಲೇ ನೋಡುವವರು ಒಮ್ಮೆಲೇ ಆಶ್ಚರ್ಯವಾಗುತ್ತಾರೆ. ಮುಡಿಯಿಂದ ಅಡಿಯವರೆಗೆ ಹಬ್ಬಿದ ನೀಳವಾದ ಉದ್ದನೆಯ ಕೇಶರಾಶಿಯನ್ನು ನೋಡಿ, ನೋಡುವ ಯಾವುದೇ ವ್ಯಕ್ತಿ ಸಹಜವಾಗಿಯೇ ಬೆರಗಾಗುತ್ತಾನೆ. ಅಂಥ ವರ ಪ್ರಸ್ತುತ ಯುವತಿ ಅದ್ಯಾವ ದೇವರಿಂದ ಬೇಡಿಕೊಂಡು ಬಂದಿದ್ದಾಳೆ ಎಂದು ಮಹಿಳೆಯರಿಗೆ ಅಸೂಯೆ (ತಮಾಷೆಗಾಗಿ ಮಾತ್ರ) ಉಂಟಾಗಬಹುದು ಅಲ್ವಾ? ಈ ವಿಡಿಯೋದಲ್ಲಿ ದಿವಂಗತ ಡಾಕ್ಟರ್ ರಾಜಕುಮಾರ್ ಅವರ ಸೂಪರ್ ಹಿಟ್ ಹಾಡಿನ ಸತ್ಯಭಾಮೆ ಸತ್ಯಭಾಮೆ ಮೊದಲ ಪದಗಳನ್ನು ತೆಗೆದುಕೊಳ್ಳಲಾಗಿದೆ.
ನೋಡಿ ಈ ಯುವತಿಯ ನೀಳ ಕೇಶರಾಶಿಯ ವಿಡಿಯೋ…
View this post on Instagram
ಈ ವಿಡಿಯೋ ಇಲ್ಲಿಯವರೆಗೆ ಎಲ್ಲರ ಹೃದಯ ಗೆದ್ದಿದೆ. ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮಿನಲ್ಲಿ 12.6 ಮಿಲಿಯನ್ ಗಳವರೆಗೆ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 7 ಲಕ್ಷ 35 ಸಾವಿರ ಜನರು ಲೈಕ್ ಮಾಡಿದ್ದಾರೆ. ಪ್ರಸ್ತುತ ಈ ದೃಶ್ಯವನ್ನು harithamnair ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.