Video- ಅಬ್ಬಾ! ದೈತ್ಯಾ#ಕಾರಾದ ಮೊಸಳೆ ಮನೆಯಲ್ಲಿ ನುಗ್ಗಿತು, ಧೈರ್ಯದಿಂದ ವ್ಯಕ್ತಿ ಮಾಡಿದ್ದೇನು? ವಿಡಿಯೋ ನೋಡಿ……..
ಚಿರತೆ, ಆನೆ ಮತ್ತು ಮೊಸಳೆಯಂತಹ ಪ್ರಾಣಿಗಳ ಮನೆಯಲ್ಲಿ ನುಗ್ಗಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತವೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಂದು ಮೊಸಳೆ ಕಾಣಬಹುದು. ಈ ಮೊಸಳೆ ನೇರವಾಗಿ ಮನೆಯೊಳಗೆ ನುಗ್ಗಿದೆ. ಈ ವಿಡಿಯೋ ವನ್ನು @MajorFactor2 ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಲಾಗಿದೆ. 52 ಸೆಕೆಂಡಿನ ಈ ವಿಡಿಯೋದಲ್ಲಿ ದೈ#ತ್ಯಾಕಾರಾದ ಮೊಸಳೆ ಮನೆಯ ಆವರಣದಲ್ಲಿ ತಿರುಗಾಡುತ್ತಿರುವದನ್ನು ನೀವು ನೋಡಬಹುದು.
ಮೊಸಳೆಗಳು ಸಾಮಾನ್ಯವಾಗಿ ನೀರು ಹೊಂದಿದ ಪ್ರದೇಶದಲ್ಲಿ ಮತ್ತು ಅರಣ್ಯಕ್ಷೇತ್ರದಲ್ಲಿ ಕಂಡು ಬರುವವು. ಮೊಸಳೆಯನ್ನು ದೂರಿನಿಂದ ನೋಡಿದರೆ ಸಾಕು ಮೈತುಂಬ ಬೆವರು ಬಿಡುತ್ತವೆ. ಅಂತಹದರಲ್ಲಿ ಮೊಸಳೆ ಮನೆಯೊಳಗೆ ಬಂದಾಗ ಆಕಸ್ಮಿಕವಾಗಿ ನಿಮ್ಮ ಕಣ್ಣು ಅದರ ಮೇಲೆ ಬಿದ್ದಾಗ ಅಲ್ಲಿ ನಿರ್ಮಾಣವಾಗುವ ಪರಸ್ಥಿತಿಯ ಕುರಿತು ಹೇಳುವ ಅವಶ್ಯಕತೆ ಇಲ್ಲ. ಮೊಸಳೆಯನ್ನು ಕಂಡು ಮಾತೂ ಕೂಡಾ ಬಾರದ ಹಾಗೆ ಆಗುವದು ಸ್ವಾಭಾವಿಕ ಸಂಗತಿಯಾಗಿದೆ. ಇಂತಹ ಅಪಾಯಕಾರಿ ಪ್ರಾಣಿಯ ಎದುರು ಶೌರ್ಯ ತೋರಿಸುವ ಪ್ರಯತ್ನ ಮಾಡುವವರ ಸಂಖ್ಯೆ ಬೆರೆಳೆಣಿಕೆ ಮಾತ್ರ. ಆದರೆ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿ ತನ್ನ ಧೈರ್ಯ, ಸಾಹಸದಿಂದ ಮನೆಯಲ್ಲಿ ಬಂದ ಮೊಸಳೆಯನ್ನು ತಾನೇ ಹಿಡಿಯುತ್ತಾನೆ. ಆತನು ಮೊಸಳೆಯನ್ನು ಹಿಡಿದ ಪರಿಯನ್ನು ಕಂಡು ನೆಟ್ಟಿಗರು ಈತನ ಸಾಹಸಕ್ಕೆ ಹೋಗಳುತ್ತಿದ್ದಾರೆ.
ಮೊಸಳೆ ಹಿಡುಯುವ ಸಮಯ ಬಂದರೆ, ನಮಗೆ ಅರಣ್ಯ ಸಿಬ್ಬಂದಿಯವರಿಗೆ ಕರೆಯುವುದರ ಬದಲು ಬೇರೆ ಪರ್ಯಾಯವೆ ಇರುವದಿಲ್ಲ. ಆದರೆ ಈ ವಿಡಿಯೋದಲ್ಲಿ ಮಾತ್ರ ಈ ವ್ಯಕ್ತಿ ಯವುಗೆ ಅರಣ್ಯ ಸಿಬ್ಬಂದಿಯ ಹಾದಿ ಕಾಯದೆ ಸ್ವತಃ ಮೊಸಲೆಯನ್ನು ಹಿಡಿಯುವ ಕಾರ್ಯ ಮಾಡಿದ್ದಾನೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಮನೆಯ ಹೊರಾಂಗಣದಲ್ಲಿ ಮೊಸಳೆ ಬಂದದ್ದು ಕಂಡು ಎದೆಗುಂದದೆ ಧೈರ್ಯದಿಂದ ಅದನ್ನು ಹಿಡಿಯಬೇಕು ಎಂದು ಯೋಚಿಸಿ ಮನೆಯ ಹೊರಗಡೆ ಇದ್ದ ಡಸ್ಟ್ ಬಿನ್ ಅನ್ನು ತಗೆದುಕೊಂಡು ಅದರೊಳಗೆ ಮೊಸಲೆಯನ್ನು ಹಿಡಿಯಲು ಮೊಸಳೆಯ ಮುಂದೆ ಡಸ್ಟ್ ಬಿನ್ ಇಡುತ್ತಾನೆ. ಡಸ್ಟ್ ಬಿನ್ ಮುಂದೆ ಇಡುತ್ತಲೇ ಮೊಸಳೆ ಹಿಂದಕ್ಕೆ ಹಿಂದಕ್ಕೆ ಸರಿಯುತ್ತ ಹೋಗುತ್ತದೆ. ಆದರೂ ಕೂಡಾ ಅಂಜದೆ ಈ ವ್ಯಕ್ತಿ ಸಹ ಡಸ್ಟ್ ಬಿನ್ ಹಾಗೆ ಅದರ ಮುಂದೆ ತಗೆದುಕೊಂಡು ಹೋಗುತ್ತಾನೆ. ಕೊನೆಗೆ ಆ ಮೊಸಳೆ ಡಸ್ಟ್ ಬಿನ್ ದಲ್ಲಿ ಹೋಗುತ್ತದೆ ಹೋದ ಕೂಡಲೇ ವ್ಯಕ್ತಿ ಡಸ್ಟ್ ಬಿನ್ ಮುಚ್ಚಳವನ್ನು ಮುಚ್ಚುತ್ತಾನೆ. ಡಸ್ಟ್ ಬಿನ್ ನಲ್ಲಿ ಮೊಸಳೆಯನ್ನೇ ಹಿಡಿದುಕೊಂಡು ಹೋಗುತ್ತಾನೆ.
ವಿಡಿಯೋ ನೋಡಿ
Bruh said by any means necessary.🤔😂 🐊 pic.twitter.com/V89Sy0auce
— J- 🌎✨ (@MajorFactor2) September 29, 2021
ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಇದುವರೆಗೆ ಈ ವಿಡಿಯೋವನ್ನು 9 ಲಕ್ಷಕ್ಕಿಂತಾ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಈ ಪ್ರಕಾರದ ಮೊಸಳೆಯನ್ನು ಹಿಡಿಯಲು ದೊಡ್ಡ ಸಾಹಸ, ಧೈರ್ಯ ಬೇಕಾಗುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ವಿವಿಧ ಪ್ರಕಾರದ ಪ್ರತಿಕ್ರಿಯೆ ವ್ಯಕ್ತ ಮಾಡಿದ್ದಾರೆ.