Video; ಅರ್ಜೆಂಟಿನ ವರ್ಲ್ಡ್ ಕಪ್ ಗೆದ್ದನಂತರ ಬ್ಯೂನಸ್ ನಲ್ಲಿ ವಿಜಯೋತ್ಸವ ಆಚರಣೆ! ನೋಡಲು ಸಾಲುವುದಿಲ್ಲ ಎರಡು ಕಣ್ಣುಗಳು…
ಭಾರತದಲ್ಲಿ ಕ್ರಿಕೆಟ್ ಹುಚ್ಚು ಇರುವ ತರ ವಿದೇಶಗಳಲ್ಲಿ ಫುಟ್ಬಾಲ್ ಹುಚ್ಚು ತುಂಬಾ ಹೆಚ್ಚಿದೆ. ಜಗತ್ತಿನಲ್ಲಿ ಎಲ್ಲಕ್ಕೂ ಹೆಚ್ಚು ಇಷ್ಟಪಡುವ ಆಟವೆಂದರೆ ಫುಟ್ಬಾಲ್ ಮಾತ್ರ. ಕೆಲವೇ ದಿನಗಳ ಹಿಂದೆ ಫುಟ್ಬಾಲ್ ಮಹಾಮೇಳ ಕತಾರ್ ನಲ್ಲಿ ಸಂಪನ್ನವಾಯಿತು. ಇಲ್ಲಿ ಅನೇಕ ರೋಚಕ ಫಲಿತಾಂಶಗಳು ಹೊರ ಬಿದ್ದವು. ಮೊದಲ ಹಂತದ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಸೌದಿ ಅರೇಬಿಯಾದಿಂದ ಸೋತು ಮುಖಭಂಗ ಅನುಭವಿಸಿದಾಗ ಅರ್ಜೆಂಟಿನಾ ತಂಡ ವರ್ಲ್ಡ್ ಕಪ್ ಮುಕುಟ ತನ್ನ ಮಡಿಗೇರಿಸಿಕೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.
ಆದರೆ ಅರ್ಜೆಂಟಿನ ತಂಡದ ನಾಯಕರಾದ ಮೆಸ್ಸಿ ತಮ್ಮ ಸಂಗಡಿಗರೊಂದಿಗೆ ಜಗತ್ತಿಗೆ ಅದ್ಭುತವಾದ ಆಶ್ಚರ್ಯವನ್ನು ನೀಡಿದರು. ಮೊದಲ ಹಂತದಲ್ಲಿ ಸೋತರೂ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು ನಿಂತರು. ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಒಂದು ಹಂತದಲ್ಲಿ ಸೋಲಬಹುದೇನೋ ಎಂಬ ಆತಂಕ ಮೂಡಿತ್ತು. ಮತ್ತೆ ಅಲ್ಲಿಯೂ ಅರ್ಜೆಂಟಿನ ತಂಡ ತನ್ನ ಅನುಭವ ಮತ್ತು ಬಲಪ್ರಯೋಗಿಸಿ ವಿಶ್ವಕಪ್ ನ್ನೇ ಗೆಲ್ಲುವಲ್ಲಿ ಯಶಸ್ವಿಯಾಯಿತು. ಸದ್ಯ ಈ ದೇಶದಲ್ಲಿ ಫುಟ್ಬಾಲ್ ಗೆದ್ದ ವಿಜಯೋತ್ಸವ ಜರುಗುತ್ತಿದೆ. ಅಲ್ಲಿಯ ಅದ್ಭುತವಾದ ದೃಶ್ಯ ದ್ರೋಣ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಅದನ್ನೇ ನೀವಿಲ್ಲಿ ವೀಕ್ಷಿಸಬಹುದು. ಅದ್ಭುತವಾದ ದೃಶ್ಯವನ್ನು ನೋಡಲು ನಿಜಕ್ಕೂ ಎರಡು ಕಣ್ಣುಗಳು ಸಾಲವು.
ನೋಡಿ ಈ ವಿಡಿಯೋ…
World Cup winning celebrations in Argentina…. pic.twitter.com/ePVKbWH3hR
— lakshmi (@Akalya19969503) December 23, 2022
ಪ್ರಸ್ತುತ ಈ ಫುಟ್ಬಾಲ್ ವರ್ಲ್ಡ್ ಕಪ್ ಗೆದ್ದ ವಿಜಯೋತ್ಸವದ ಅದ್ಬುತ ದೃಶ್ಯದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ lakshmi ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ವೀಕ್ಷಣೆಯನ್ನು ಮಾಡಿದ್ದಾರೆ.