Video; ಅರ್ಶದೀಪ್ ಮನವಿಗೆ ರೋಹಿತ್ ಶರ್ಮಾ ಕೊಡಲಿಲ್ಲ ಬೆಲೆ; ನೆಟ್ಟಿಗರೆಂದರು ಸೊಕ್ಕಿನ ನಾಯಕನಿಗೆ ಮೊದಲು ತೆಗೆಯಿರಿ…

ಏಷಿಯಾ ಕಪ್ ನಿಂದ ಭಾರತ ಮುಖಭಂಗ ಮಾಡಿಕೊಂಡು ಹೆಚ್ಚುಕಡಿಮೆ ಹೊರಗೆ ಬಿದ್ದ ಹಾಗೆಯೇ. ಭಾರತ ಸೂಪರ್ 4 ನಲ್ಲಿ ಹೆಸರಿಗೆ ತಕ್ಕಂತೆ ಆಟವನ್ನು ಪ್ರದರ್ಶಿಸುವಲ್ಲಿ ಎಡವಿತು. ಹೀಗಾಗಿ ಸೂಪರ್ 4 ನಲ್ಲಿ ಭಾರಿ ಮುಖಭಂಗಕ್ಕೆ ಒಳಗಾಯಿತು. ದಿಗ್ಗಜರಿಂದ ಕೂಡಿದ ಆಟಗಾರರೂ ಬರೀ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಾಯಿತು.

ಈ ಮಧ್ಯೆ ರೋಹಿತ್ ಶರ್ಮಾ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕಂಡು ಬಂದ ರೋಹಿತ್ ಅವರ ವರ್ತನೆ ನೆಟ್ಟಿಗರಿಗೆ ಸ್ವಲ್ಪವೂ ಹಿಡಿಸಿಲ್ಲ. ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯ ಭಾರತ ಮತ್ತು ಶ್ರೀಲಂಕಾ ತಂಡಗಳ ಮದ್ಯೆ ನಡೆದ ಪಂದ್ಯದ ಕೊನೆಯ ಓವರ್ ನಲ್ಲಿಯದಿದೆ. ಈ ಪಂದ್ಯವು ರೋಚಕ ಘಟ್ಟ ತಲುಪಿರುವ ಸಂದರ್ಭದಲ್ಲಿ ಉದಯೋನ್ಮುಖ ಆಟಗಾರ ಅರ್ಶದೀಪ್ ಸಿಂಗ್ ಕೊನೆಯ ಓವರ್ ಎಸೆಯುವಾಗ ನಾಯಕ ರೋಹಿತ್ ಶರ್ಮಾ ಅವರಿಗೆ ಏನೋ ಹೇಳಲು ಅಥವಾ ವಿನಂತಿಸಲು ಬಯಸುತ್ತಾರೆ. ಆಗ ರೋಹಿತ್ ಶರ್ಮಾ ಅವರು ಅರ್ಶದೀಪ್ ಜೊತೆ ನಡೆದುಕೊಂಡ ರೀತಿ ತುಂಬಾ ಸೊಕ್ಕಿನದಾಗಿತ್ತು ಎಂಬ ಭಾವನೆ ನೆಟ್ಟಿಗರದ್ದಾಗಿದೆ. ಹೀಗಾಗಿ ನೆಟ್ಟಿಗರು ರೋಹಿತ್ ಮೇಲೆ ಬೇಸರ ವ್ಯಕ್ತ ಮಾಡಿದ್ದಾರೆ. ನೀವು ಡ್ರೆಸಿಂಗ್ ರೂಮ್ ನಲ್ಲಿ ಹೆಗಲ ಮೇಲೆ ಕೈ ಹಾಕಿದರೇನು ಬಂತು? ಆ ಸಂದರ್ಭದಲ್ಲಿ ನಿಧಾನ ಆತ ಹೇಳುವ ಸಲಹೆ ಸೂಚನೆಯನ್ನಾದರೂ ಕೇಳಬಹುದಿತ್ತಲ್ಲಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ನೋಡಿ ಈ ವಿಡಿಯೋ…

https://twitter.com/crickvikram/status/1567218900672315392?ref_src=twsrc%5Etfw%7Ctwcamp%5Etweetembed%7Ctwterm%5E1567218900672315392%7Ctwgr%5E1678152955c7b2fc8193f1b286da5609c836f042%7Ctwcon%5Es1_c10&ref_url=https%3A%2F%2Fd-7918307413836150969.ampproject.net%2F2208242209000%2Fframe.html

ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬರುವ ಹಾಗೆ ಅರ್ಶದೀಪ್ ನಾಯಕ ರೋಹಿತ್ ಗೆ ಏನನ್ನೋ ಹೇಳಲು ಬರುತ್ತಾರೆ, ಆದರೆ ರೋಹಿತ್ ಆತನ ಮಾತನ್ನು ಚೂರು ಕೇಳದೆ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ಇದೇ ದೃಶ್ಯ ನೋಡುಗರಿಗೆ ಇಷ್ಟವಾಗಿಲ್ಲ. ಒಂದು ನಾಯಕನಾಗಿ ಹೊಸ ಆಟಗಾರರ ಜೊತೆಗೆ ಹಿರಿಯ ಆಟಗಾರ ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎನ್ನುವ ಭಾವನೆ ನೆಟ್ಟಿಗರು ವ್ಯಕ್ತ ಮಾಡಿದ್ದಾರೆ. ಪ್ರಿಯ ಓದುಗರೇ, ನಿಮಗೆ ಹೇಗೆ ಕಂಡು ಬಂತು ರೋಹಿತ್ ಅವರ ಈ ನಡಿಗೆ?