Video; ಆಕಾಶದಲ್ಲಿಯೇ ಸ್ಟ್ಯಾಚು ಸ್ಟ್ಯಾಚು ಆಟ ಆಡಲು ಶುರು ಮಾಡಿದ ವಿಮಾನ. ವಿಡಿಯೋ ನೋಡಿದಾಗ ನಂಬಲಸಾಧ್ಯ..!

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ವಿಡಿಯೋಗಳು ಅಥವಾ ಫೋಟೋ ದೃಶ್ಯಗಳು ಕಾಣಲು ಸಿಗುತ್ತವೆ. ಸ್ವಂತ ಕಣ್ಣುಗಳಿಂದ ನೋಡಿದಾಗಲೂ ಇವುಗಳ ಮೇಲೆ ವಿಶ್ವಾಸವಿದುವದು ಕಷ್ಟವಾಗುತ್ತದೆ. ಸದ್ಯ ಇಂಥದ್ದೇ ಒಂದು ವಿಡಿಯೋ ನೋಡುಗರಿಗೆ ತುಂಬಾ ಆಶ್ಚರ್ಯವನ್ನು ಉಂಟು ಮಾಡುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ವಿಮಾನ ಒಂದು ಓವರ್ ಬ್ರಿಡ್ಜ್ ಮೇಲೆ ಸ್ಟ್ಯಾಚು ರೀತಿಯಲ್ಲಿ ಅಲುಗಾಡದೆ ನಿಂತಿರುವುದು ಕಂಡು ಬರುತ್ತಿದೆ. ಈ ದೃಶ್ಯವನ್ನು ನೋಡಿದವರು ಮಂತ್ರಮುಗ್ಧರಾಗುತ್ತಿದ್ದಾರೆ. ಅದೇ ತಾನೆ ಆಕಾಶಕ್ಕೆ ಹಾರುತ್ತಿರುವ ವಿಮಾನ ಈ ರೀತಿಯಲ್ಲಿ ಕಂಡು ಬರುತ್ತಿದೆ. ಇದು ಆಕಾಶದಲ್ಲಿ ಸ್ವಲ್ಪವೂ ಅಲುಗಾಡದೆ ನಿಂತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ರಸ್ತೆಯ ಮೇಲಿಂದ ಶೂಟ್ ಮಾಡಿಕೊಳ್ಳುವವರ ಕಾರು ಮಾತ್ರ ಸ್ವಲ್ಪ ವೇಗದಲ್ಲಿಯೆ ಚಲಿಸುತ್ತಿದೆ. ಅದರಲ್ಲಿ ಕುಳಿತವರು ಪ್ರಸ್ತುತ ವಿಮಾನಿನ ವಿಡಿಯೋ ಶೂಟ್ ಮಾಡಿಕೊಂಡಿದ್ದಾರೆ. ಬನ್ನಿ ಏನದು ನೋಡೋಣ.

ಮೊದಲು ಇಲ್ಲಿ ಸ್ಟ್ಯಾಚು ಪ್ಲೇನ್ ನ ವಿಡಿಯೋ ನೋಡಿ…

ಈ ತಲೆ ತಿರುಗಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ worlds.best.reels ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಇದು ಇಲ್ಲಿಯವರೆಗೆ 24 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ ಮತ್ತು ತಮ್ಮ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಸುಮಾರು 70 ಸಾವಿರಕ್ಕೂ ಮೀರಿ ಜನರು ಲೈಕ್ಸ್ ಗಳನ್ನು ಮಾಡಿದ್ದಾರೆ.
.