Video: ಇದಕ್ಕಿದ್ದ ಹಾಗೆ ಆಗಸದಲ್ಲಿ ನೀಲಿ ಬಣ್ಣ, ಅಗ್ನಿ ಗೋಳದಂತಹ ಬೆಳಕು ಕಂಡು ಪರಮಾಣು ಧಾಳಿಯೆಂದು ಹೌಹಾರಿದ ಜನ!
ಕೆನಡಾದಲ್ಲಿ ಒಂದು ಉಲ್ಕಾ ಶಿಲೆಯು ಅಪ್ಪಳಿಸಿದೆ. ಆದರೆ ಅದು ಉಲ್ಕಾಶಿಲೆ ಎಂದು ತಿಳಿಯದ ಜನರು ತಮ್ಮ ಮೇಲೆ ಪರಮಾಣು ದಾ ಳಿ ಯು ನಡೆದಿದೆ ಎಂದು ಭ್ರಮಿಸಿದ್ದಾರೆ. ಭೂಮಿಗೆ ಅಪ್ಪಳಿಸಿದ ಉಲ್ಕಾಶಿಲೆಯ ಹೊಳಪು ಎಷ್ಟು ತೀಕ್ಷ್ಣವಾಗಿತ್ತು ಎಂದರೆ ಜನರಿಗೆ ಅದು ಉಲ್ಕಾಶಿಲೆ ಎಂಬುದನ್ನು ಗುರುತಿಸಲು ಕೂಡಾ ಸಾಧ್ಯವಾಗಿಲ್ಲ. ಕೆನಡಾದ ಆಲ್ಬರ್ಟಾ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಆಕಾಶದಲ್ಲಿ ಒಂದು ನೀಲಿಯ ಬಣ್ಣದ ಬೆಳಕು ಜನರಿಗೆ ಗೋಚರಿಸಿದೆ. ಆಗಸದಲ್ಲಿ ಇಂತಹುದೊಂದು ವಿಸ್ಮಯವನ್ನು ನೋಡಿದ ಜನರು ಕೂಡಲೇ ಬಹುಶಃ ತಮ್ಮ ಮೇಲೆ ಪರಮಾಣು ದಾ ಳಿ ಯು ನಡೆದಿದೆ ಎಂದು ಭಾವಿಸಿದ್ದಾರೆ. ಆದರೆ ಆನಂತರ ಅದು ಪರಮಾಣು ದಾ ಳಿ ಯಲ್ಲ ಬದಲಿಗೆ ಅದೊಂದು ಉಲ್ಕಾಶಿಲೆ ಎನ್ನುವ ವಾಸ್ತವ ವಿಷಯವನ್ನು ತಿಳಿದುಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ. ಈ ಉಲ್ಕಾಶಿಲೆ ಯಿಂದ ಉಂಟಾದ ಅಗ್ನಿಯ ಗೋಳವು ಬಹಳ ವಿಶಾಲವಾಗಿತ್ತು ಎನ್ನಲಾಗಿದೆ.
ಈ ಬೆಂಕಿಯ ವಿಶಾಲವಾದ ಸರ್ಕಲ್ ಅಮೇರಿಕಾದ ಗಡಿ ಪ್ರದೇಶದಿಂದ ಹಿಡಿದು ಆರ್ಕಟಿಕ್ ಸರ್ಕಲ್ ವರೆಗೂ ಕಾಣುತ್ತಿತ್ತು ಎನ್ನಲಾಗಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಹಲವು ಸೆಕ್ಯೂರಿಟಿ ಕ್ಯಾಮರಾಗಳಲ್ಲಿ ಈ ವಿಸ್ಮಯ ಎನಿಸುವ ಉಲ್ಕಾ ಪಾತದ ದೃಶ್ಯವು ದಾಖಲಾಗಿದೆ ಎನ್ನಲಾಗಿದೆ. ಹೀಗೆ ದಾಖಲಾದ ದೃಶ್ಯಗಳಲ್ಲಿ ಒಂದು ವಿಡಿಯೋದಲ್ಲಿ ಗಮನಿಸಿದಾಗ, ಉಲ್ಕೆಯು ಭೂಮಿಯ ವಾತವಾರಣದೊಳಗೆ ಪ್ರವೇಶ ಮಾಡಿದಾಗ ಆಗಸದಲ್ಲಿ ಕಂಡುಬಂದಿರುವ ಬೆಳಕಿನ ಪ್ರಮಾಣ ಅಥವಾ ಅದರ ಪ್ರಖರತೆಯು ಹೇಗಿತ್ತು ಎನ್ನುವುದು ಕಂಡಿದೆ ಎನ್ನಲಾಗಿದೆ. ಹೌದು ಉಲ್ಕೆಯ ಪ್ರಖರವಾದ ಹೊಳಪಿನಿಂದಾಗಿ ಆ ರಾತ್ರಿಯ ವೇಳೆಯಲ್ಲಿ ಕೂಡಾ ಕೆಲವು ಕ್ಷಣಗಳ ಕಾಲ ಕಪ್ಪು ಆಗಸವು ಹೊಳೆದು ಬೆಳಕಿನ ಅನುಭೂತಿಯನ್ನು ಮೂಡಿಸಿತ್ತು ಎನ್ನಲಾಗಿದೆ.
ಈ ಪ್ರಖರವಾದ ಬೆಳಕು ಕಂಡು ಬಂದ ನಂತರ, ಅಂತರರಾಷ್ಟ್ರೀಯ ಉಲ್ಕಾ ಸಂಸ್ಥೆಗೆ ಸುಮಾರು ಮುನ್ನೂರ ಕ್ಕಿಂತ ಅಧಿಕ ಫೋನ್ ಕರೆಗಳು ಬಂದಿದ್ದು, ಕರೆ ಮಾಡಿದವರೆಲ್ಲಾ ಕೂಡಾ ತಾವು ಉಲ್ಕಾ ಶಿಲೆಯನ್ನು ನೋಡಿದ ವಿಚಾರವನ್ನು ತಿಳಿಸಿದ್ದಾರೆ. ಇದಾರ ನಂತರ ಆಲ್ಪರ್ಟಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಡಾಕ್ಟರ್ ಕ್ರಿಶ್ ಹಾರ್ಡ್ ಅವರು ಕೆನಡಾದ ರೇಡಿಯೋ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿ, ಬಾಹ್ಯಾಕಾಶದಿಂದ ಶಿಲೆಯೊಂದು ನಮ್ಮ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಹಾಗೆ ಪ್ರವೇಶಿಸಿದಾಗ ಇಲ್ಲಿನ ವಾತಾವರಣದೊಂದಿಗೆ ಉಂಟಾದ ಘರ್ಷಣೆಯಿಂದಾಗಿ ಅದು ಸುಟ್ಟು ಹೋಗಿದೆ ಎನ್ನುವ ಸ್ಪಷ್ಟ ಮಾಹಿತಿಯನ್ನು ನೀಡುವ ಮೂಲಕ ಜನರಿಗೆ ಈ ವಿಚಾರವಾಗಿ ಎದ್ದಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು.

ಉಲ್ಕೆಗಳು ಅಂತರಿಕ್ಷದಲ್ಲಿರುವ ಕ್ಷುದ್ರ ಗ್ರಹದ ಒಂದು ಭಾಗ ಮಾತ್ರ. ಯಾವುದೋ ಕಾರಣಕ್ಕೆ ಕ್ಷುದ್ರ ಗ್ರಹಗಳು ಒಡೆದಾಗ, ಮುರಿದಾಗ ಅವುಗಳ ಸಣ್ಣ ತುಂಡುಗಳು ಕ್ಷುದ್ರ ಗ್ರಹಗಳಿಂದ ಬೇರ್ಪಡುತ್ತವೆ. ಅವುಗಳನ್ನು ನಾವು ಉಲ್ಕೆಗಳು ಅಥವಾ ಉಲ್ಕಾ ಶಿಲೆಗಳು ಎಂದು ಕೂಡಾ ಕರೆಯುತ್ತೇವೆ. ಈ ಉಲ್ಕಾಶಿಲೆ ಗಳು ಅಂತರಿಕ್ಷದಿಂದ ಬೀಳುತ್ತಾ ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಅವು ಉರಿಯಲು ಆರಂಭಿಸುತ್ತವೆ. ಆಗ ಇವುಗಳು ನಮಗೆ ಶೂಟಿಂಗ್ ಸ್ಟಾರ್ ಅಥವಾ ಬೀಳುತ್ತಿರುವ ನಕ್ಷತ್ರ ಎನ್ನುವಂತೆ ಕಂಡುಬರುತ್ತದೆ. ಅನೇಕ ಜನರು ಇದನ್ನು ನೋಡಿ ನಕ್ಷತ್ರ ಬೀಳುತ್ತಿದೆ ಎಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಅದು ನಕ್ಷತ್ರವಾಗಿರದೆ ಉಲ್ಕಾ ಶಿಲೆ ಯಾಗಿರುತ್ತದೆ.
ಆದರೆ ಭೂಮಿಯನ್ನು ತಲುಪುವ ಪ್ರತಿಯೊಂದು ಹೋಲಿಕೆಯು ಕೂಡ ಇಲ್ಲಿನ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಸುಟ್ಟು ಬೂದಿಯಾಗುತ್ತದೆ ಎಂದು ಹೇಳಲಾಗುವುದಿಲ್ಲ.
ಕೆಲವೊಮ್ಮೆ ಭಾರೀ ಗಾತ್ರದ ಉಲ್ಕೆಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ನಂತರವೂ ಕೂಡ ಬೆಂಕಿಯಂತೆ ಉರಿಯದೇ ಬಹಳ ಭದ್ರವಾಗಿ ಬಂದು ಭೂಮಿಯ ಮೇಲೆ ಲ್ಯಾಂಡ್ ಆಗುತ್ತವೆ. ಅಂತರಿಕ್ಷ ಸಂಸ್ಥೆ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ ಭೂಮಿಯ ವಿವಿಧ ಭಾಗಗಳಲ್ಲಿ ಕಂಡು ಬರುವ ಇಂತಹ ಉಲ್ಕೆಗಳನ್ನು ಸಂಗ್ರಹಿಸುವ, ನಿರ್ವಹಣೆ ಮಾಡುವ ಕೆಲಸವನ್ನು ಮಾಡುತ್ತದೆ. ಈ ಉಲ್ಕೆಗಳ ಆಧಾರದಲ್ಲಿ ಅನೇಕ ಅಧ್ಯಯನಗಳನ್ನು ನಡೆಸುವ ಖಗೋಳ ವಿಜ್ಞಾನಿಗಳು ನಮಗೆ ಸೌರಮಂಡಲ ಹಾಗೂ ಅನ್ಯಗ್ರಹಗಳ ಕುರಿತಾದ ಅನೇಕ ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುವ ಮೂಲಕ ಅಂತರಿಕ್ಷದಲ್ಲಿ ಅಡಗಿರುವ ರಹಸ್ಯಗಳ ಮೇಲಿಂದ ಪರದೆಯನ್ನು ಸರಿಸುತ್ತಾರೆ.