Video; ಇದು ಬರೀ ಭಾರತದಲ್ಲಷ್ಟೇ ನೋಡಲು ಸಿಗುತ್ತದೆ; ಬೈಕ್ ಗೆ ಹತ್ತಿತು ಆಕಸ್ಮಿಕ ಬೆಂಕಿ! ಮುಂದಿನ ದೃಶ್ಯ ನೋಡಿ ವಿಡಿಯೋದಲ್ಲಿ.

ಇತ್ತೀಚೆಗೆ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗಲುವ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿರುವದು ಕೇಳಿ ಬರುತ್ತಿದೆ ಅಥವಾ ಇದರ ವಿಡಿಯೋಗಳು ನೋಡಲು ಸಿಗುತ್ತಿವೆ. ಸದ್ಯ ಇದೇ ರೀತಿಯ ಒಂದು ದೃಶ್ಯ ರಸ್ತೆಯ ಮೇಲೆ ನಡೆದಿದೆ. ನಂತರ ಅಲ್ಲಿಯ ಕಂಡು ಬಂದ ದೃಶ್ಯ ತುಂಬಾ ವಿಶೇಷವಾಗಿತ್ತು.

ದಂಪತಿಗಳಿಬ್ಬರು ಸ್ಕೂಟರ್ ಮೇಲೆ ಕುಳಿತು ಬರುತ್ತಾರೆ. ಅಲ್ಲಿ ಪತ್ನಿ ಕೆಳಗೆ ಇಳಿಯುತ್ತಾಳೆ. ಕೆಲವೇ ಕ್ಷಣಗಳ ನಂತರ ಪತಿ ತನ್ನ ಸ್ಕೂಟರ್ ಮತ್ತೆ ಸ್ಟಾರ್ಟ್ ಮಾಡುತ್ತಾನೆ. ಅದೇ ಸಮಯಕ್ಕೆ ಸ್ಕೂಟರ್ ಕೆಳಗಡೆ ಒಮ್ಮೆಲೆ ಬೆಂಕಿ ಹತ್ತಿ ಉರಿಯುವ ದೃಶ್ಯ ಪತ್ನಿಗೆ ಕಂಡು ಬರುತ್ತದೆ. ಇದನ್ನು ಪತ್ನಿ ಹೇಳುವದಷ್ಟೆ ತಡ ಪತಿ ಬೈಕ್ ನ್ನು ಆದಷ್ಟು ಬೇಗ ಸೈಡ್ ಸ್ಟಾಂಡ್ ಮೇಲೆ ನಿಲ್ಲಿಸುತ್ತಾನೆ. ಪ್ರಸ್ತುತ ದೃಶ್ಯ ಸುತ್ತ ಮುತ್ತಲಿನನವರು ನೋಡುವದಷ್ಟೆ ತಡ ಒಮ್ಮೆಲೆ ಎಲ್ಲರೂ ಬೈಕ್ ನಲ್ಲಿ ಹತ್ತಿದ ಬೆಂಕಿಯನ್ನು ನಂದಿಸಲು ಕಾರ್ಯೋನ್ಮುಖರಾಗುತ್ತಾರೆ. ಯಾರು ಬಾಟಲಿಯಿಂದ ನೀರು ತಂದು ಚೆಲ್ಲಿದರೆ, ಯಾರು ಬಕೆಟ್ ನಿಂದ ನೀರು ತಂದು ಮಜ್ಜನ ಮಾಡುತ್ತಾರೆ. ಅಷ್ಟರಲ್ಲಿ ಬೇರೊಬ್ಬನು ಎಕ್ಸ್ಟಿಂಗುಷರ್ (ಬೆಂಕಿ ನಂದಿಸುವ ಸಾಧನ Extinguisher) ನ್ನೇ ತೆಗೆದುಕೊಂಡು ಬಂದು ತಗುಲಿರುವ ಬೆಂಕಿಯನ್ನು ಕ್ಷಣದಲ್ಲಿ ನಂದಿಸಿಬಿಡುತ್ತಾನೆ.

IFS ಆಫೀಸರ್ ಆದ ಸುಶಾಂತ್ ನಂದಾ ಅವರು ತಾವು ಶೇರ್ ಮಾಡಿದ ವಿಡಿಯೋ ಜೊತೆ “ಇದು ಬರೀ ಭಾರತದಲ್ಲಷ್ಟೇ ಕಾಣಸಿಗುವುದು ಎಂದಿದ್ದಾರೆ” ಸಮಸ್ಯೆ ನಿರ್ಮಾಣವಾದರೆ ಕ್ಷಣದಲ್ಲಿ ಅದನ್ನು ಪರಿಹರಿಸಲು ಸಾಕಷ್ಟು ಜನರು ಇಲ್ಲಿ ಬಂದೇ ಬರುತ್ತಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ. ಭಾರತದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ನಮ್ಮ ಜನ ಮೀನಮೇಷ ಎಣಿಸುತ್ತಾ ಕುಳಿತುಕೊಳ್ಳುವವರಲ್ಲ ಎನ್ನುವ ಉದ್ದೇಶವನ್ನು ಹೊರಹಾಕಿದ್ದಾರೆ.

ವಿಡಿಯೋ ನೋಡಿ

ಇಲ್ಲಿಯವರೆಗೆ ಈ ವೀಡಿಯೋವನ್ನು 1 ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಣೆಯನ್ನು ಮಾಡಿದ್ದಾರೆ. ಹಾಗೂ ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.