Video: ಇದೆಂಥ ಚಮತ್ಕಾರ ಮಹಾರಾಯ, ಮೂಸಂಬಿ ಹಣ್ಣಿನ ಸಿಪ್ಪೆಯಿಂದ ಬೆಂಕಿ ಹಚ್ಚಬಹುದಾ? ವಿಡಿಯೋ ನೋಡಿ ರಹಸ್ಯ ಗೊತ್ತಾದ್ರೆ ನಮಗೂ ತಿಳಿಸಿ!!

ಇಂದಿನ ಯುಗದಲ್ಲಿ ಅನೇಕ ಸಂಗತಿಗಳು ಸಂಶೋಧನೆ ಮಾಡಿದ್ದಾರೆ. ಇಂದು ಮೊಬೈಲ್, ಟಿವಿ, ಲೈಟ್ , ವಿಮಾನ , ಫ್ರಿಜ್, ಮಿಕ್ಸರ್ , ಕೂಲರ್ ಎಸಿ  ಮುಂತಾದವುಗಳನ್ನು ಶೋಧನೆ ಮಾಡಿದ್ದಾರೆ. ಇದರಿಂದ ನಮ್ಮ ಜೀವನದಲ್ಲಿ ಅನೇಕ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಇಂದು ಮೊಬೈಲ್ ಮೂಲಕ ಒಬ್ಬ ವ್ಯಕ್ತಿ ತನಗೆ ಬೇಕಾದ ವ್ಯಕ್ತಿಯ ಜೊತೆಗೆ  ಕೆಲವೇ ಸೆಕೆಂಡಗಳಲ್ಲಿ ಮಾತನಾಡಬಹುದು. ಆದರೆ ಮೊದಲು ಹೀಗಿರಲಿಲ್ಲ ಯಾವುದೇ ಒಂದು ಸಂದೇಶವನ್ನು ಬೇರೆ ವ್ಯಕ್ತಿಗೆ ಕಳುಹಿಸಬೇಕಾದರೆ ಮೊದಲು ಪತ್ರ ಅಥವಾ ಒಬ್ಬ ವ್ಯಕ್ತಿಗೆ ಕಳುಹಿಸಿ ಸಂದೇಶ ನೀಡಲಾಗುತ್ತಿತ್ತು. ಇಂಥ ಒಂದು ಕೆಲಸವು ಇಂದು ಮೊಬೈಲ್ ಸಂಶೋಧನೆ ಮೂಲಕ ಬಹಳಷ್ಟು ಸರಳವಾಗಿದೆ. ಶಾಸ್ತ್ರಜ್ಞರು ದಿನದಿಂದ ದಿನಕ್ಕೆ ಹೊಸದಾದ ಸಂಗತಿಯನ್ನು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿರುತ್ತಾರೆ. ವಿಜ್ಞಾನದಲ್ಲಿ ಕೆಲವು ಸಂಗತಿಗಳು ಜಾದೂ ಮಾಡುವ ವ್ಯಕ್ತಿಗಳು ಅನಿಸುರಿಸುತ್ತಾರೆ ಆದರೆ ಅದು ನಮಗೆ ಗೊತ್ತೇ ಆಗುವುದಿಲ್ಲ. ನಮಗೆ ಅನಿಸುತ್ತದೆ ಈತನೊಬ್ಬ ಶ್ರೇಷ್ಠ ಜಾದೂಗಾರ ಅಂತ ಪ್ರಸ್ತುತವಾಗಿ ಅಂತಹದೇ ಒಂದು ವಿಡಿಯೋ ತುಂಬಾನೇ ಚರ್ಚೆಯಲ್ಲಿದೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೋಸಂಬಿಯನ್ನು ಸುಲಿದು ಅದರ ಸಿಪ್ಪೆಯಿಂದ ಬೆಂಕಿಯನ್ನು ಹಚ್ಚುವ ಪ್ರಯತ್ನ ಮಾಡುತ್ತಾನೆ. ಆದರೆ ಮೋಸಂಬಿಯ ಸಿಪ್ಪೆಯಿಂದ ಬೆಂಕಿ ಹೇಗೆ ತಗಲುತ್ತದೆ? ಎಂಬುದು ನಮ್ಮ ನಿಮ್ಮೆಲ್ಲರ ಪ್ರಶ್ನೆಯಾಗಿದೆ.ಆದರೆ ಈ ವಿಡಿಯೋದಲ್ಲಿ ನೋಡಿದರೆ ನಿಜವಾಗಿಯೂ ಸಹ ಮೋಸಂಬಿಯ ಸಿಪ್ಪೆಯನ್ನು ಬೆಂಕಿ ಹತ್ತುತ್ತದೆ ಅನ್ನೋ ನಂಬಿಕೆ ಬರುತ್ತದೆ. ಈ ವ್ಯಕ್ತಿ ಮೊದಲಿಗೆ ತನ್ನ ಕೈಯಲ್ಲಿದ್ದ ಸಿಪ್ಪೆಯನ್ನು ಅಲ್ಲಿದ್ದ ಹುಲ್ಲಿನ ಮೇಲೆ ಸಿಂಪಡಿಸುತ್ತಾನೆ.  ಸಿಪ್ಪೆಯಲ್ಲಿದ್ದ ರಸವು ಹೇಗೆ ಹೊರಗೆ ಬರುತ್ತದೆಯೋ ಹಾಗೆ ಅಲ್ಲಿ ಬೆಂಕಿಯ ಉತ್ಪಾದನೆಯಾಗುತ್ತದೆ. ಈ ವ್ಯಕ್ತಿ ಪದೇ ಪದೇ ಸಿಪ್ಪೆಯನ್ನು ಹಿಂಡಿ ಅದರಿಂದ ಉರಿಯನ್ನು ತಯಾರು ಮಾಡುತ್ತಾನೆ. ಇದು ವಿಜ್ಞಾನವೋ ಅಥವಾ ಚಮತ್ಕಾರವೂ ನೀವೇ ಹೇಳಬೇಕು. ಈ ಟ್ರಿಕ್ ನಲ್ಲಿ ಬಳಸಿರುವ ಪದಾರ್ಥ ಯಾವುದು ಅಂತ ನಿಮಗೆ ಗೊತ್ತಾದ್ರೆ ನಮಗೆ ಕಮೆಂಟ್ ಮಾಡಿ ತಿಳಿಸಿ.

ವೀಡಿಯೋ ನೋಡಿ

 

View this post on Instagram

 

A post shared by Vadde Madhu Madhu (@jrntr756906)

ಪ್ರಸ್ತುತ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ jrntr756906 ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನೆಟ್ಟಿಗರು  ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.