Video: ಇದ್ದಕ್ಕಿದ್ದಂತೆ ಹವೆಯಲ್ಲಿ ಕುಳಿತ ವ್ಯಕ್ತಿ! ಏನಿದು ಮ್ಯಾಜಿಕ್ ಟ್ರಿಕ್ ಕಂಡು ಹಿಡಿಯುವಿರಾ..?
ತಕ್ಷಣ ಹವೆಯಲ್ಲಿ ಕುಳಿತ ವ್ಯಕ್ತಿ, ಜನರು ಹೀಗೆ ಕಂಡು ಹಿಡಿದರು ಜಾದುವಿನ ಟ್ರಿಕ್! 14 ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಿಸಿದ ವೀಡಿಯೊ….
ಸೋಶಿಯಲ್ ಮಿಡಿಯಾದಲ್ಲಿ ಜಾದೂವಿನ ವಿಡಿಯೊಗಳನ್ನು ತುಂಬಾ ಜನ ಇಷ್ಟ ಪಡುತ್ತಾರೆ. ಕೆಲವರಂತೂ ಆ ಜಾದೂವಿನ ಐಡಿಯಾ ಪತ್ತೆ ಹಚ್ಚಿದ್ದೂ ಉಂಟು.
ಈ ವೀಡಿಯೊವನ್ನು ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪಮ್ಯಾನ್ ಶೇರ್ ಮಾಡಿದ್ದಾರೆ. ಇದು ತುಂಬಾ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೂ ಒಮ್ಮೆಲೇ ಹವೆಯಲ್ಲಿ ಅಂದರೆ ಭೂಮಿಗೆ ಸ್ಪರ್ಶವಿಲ್ಲದೆ ಕುಳಿತುಕೊಳ್ಳುತ್ತಾನೆ. ಇದನ್ನು ನೋಡಿದ ಸುತ್ತಮುತ್ತಲಿನ ಜನರು ಆಶ್ಚರ್ಯ ಚಕಿತರಾದರು. ಯಾರಿಗೂ ತಿಳಿಯಲಿಲ್ಲ, ಎಲ್ಲರಿಗೂ ವ್ಯಕ್ತಿಯೊಬ್ಬ ಯಾವುದೇ ಆಧಾರವಿಲ್ಲದೆ ಹವೆಯಲ್ಲಿ ಹೇಗೆ ಕುಳಿತ? ಎಂಬುದೇ ಪ್ರಶ್ನೆಯಾಗಿತ್ತು. ಅದೇ ಸಮಯಕ್ಕೆ ಸಾಯಕಲ್ ಮೇಲಿಂದ ಹೋಗುವ ವ್ಯಕ್ತಿ ಆತನ ಕಡೆಗೆ ಆಶ್ಚರ್ಯದಿಂದ ನೋಡುತ್ತ ನಿಂತನು.
ವಿಡಿಯೋದಲ್ಲಿ ಕಾಣುತ್ತದೆ ವ್ಯಕ್ತಿ ಸ್ಟ್ರೀಟ್ ನಲ್ಲಿ ಬಂದು ಕೈಯಲ್ಲಿ ಬೆತ್ತವನ್ನು ಹಿಡಿದು ಹವೆಯಲ್ಲಿ ಕೂರುತ್ತಾನೆ. ಈ ಅದ್ಭುತ ದೃಶ್ಯವನ್ನು ನೋಡಿ ಜನ ಆತನ ಆಸುಪಾಸಿನಲ್ಲಿ ಸೇರುತ್ತಾರೆ. ಜನ ಆತನ ವಿಡಿಯೋ ತೆಗೆಯಲು ಶುರು ಮಾಡುತ್ತಾರೆ. ಸ್ವಲ್ಪ ಸಮಯ ಹವೆಯಲ್ಲಿ ಕುಳಿತ ನಂತರ ಮತ್ತೆ ಭೂಮಿಯ ಮೇಲೆ ಕಾಲಿಡುವನು. ಒಬ್ಬ ಸಾಯಕಲ್ ಸವಾರ ಈ ವ್ಯಕ್ತಿಯ ಜಾದೂ ನೋಡಿ ನಿಲ್ಲುತ್ತಾನೆ. ಮತ್ತು ಆತ ತುಂಬಾ ವಿಸ್ಮಯದಿಂದ ಇದನ್ನು ನೋಡುತ್ತಿರುತ್ತಾನೆ.
Come for the magic — stay til the end to see a guy get his mind blown…🤣🤣🤣pic.twitter.com/lsjNG2Up2z
— Rex Chapman🏇🏼 (@RexChapman) July 14, 2020
ಈ ವೀಡಿಯೊವನ್ನು ಇಲ್ಲಿಯವರೆಗೆ 14 ಲಕ್ಷಕ್ಕೂ ಮೇಲ್ಪಟ್ಟು ವ್ಯೂವ್ಜ್ ದೊರಕಿವೆ. 26 ಸಾವಿರದವರೆಗೆ ಲೈಕ್ಸ್ ಸಿಕ್ಕಿವೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಜಾದೂ ನೋಡಿ ಆತನ ಟ್ರಿಕ್ ಏನು ಎಂಬುದು ಪತ್ತೆ ಹಚ್ಚಿದರು. ಯೂಜರ್ ನೊಬ್ಬ ಹೇಳುತ್ತಾನೆ ವ್ಯಕ್ತಿ ಆರಾಮವಾಗಿ ಕೂಡಬಹುದು, ಆದರೆ ಇದು ನೋಡುಗರಿಗೆ ತಿಳಿಯುವದಿಲ್ಲ.
— K (@carlitoscafe11) July 14, 2020
ಬೇರೆ ಯೂಜರ್ ನೊಬ್ಬ ಈ ರೀತಿಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾನೆ. ಅದರಲ್ಲಿ ವ್ಯಕ್ತಿ ಈ ರೀತಿ ಹವೆಯಲ್ಲಿ ಕೂಡುವ ಸಲುವಾಗಿ ಪ್ರಯತ್ನ ಮಾಡುತ್ತಿರುವದು ಕಂಡು ಬರುತ್ತದೆ.
Here's how it's donehttps://t.co/RxDwCkEuLa
— Daniel R Hawker (@DanielRHawker1) July 14, 2020