Video: ಈ ಕಾಡು ಹಂದಿಯ ಡಿಕ್ಕಿಯ ರಭಸಕ್ಕೆ ಕಬ್ಬಿಣದ ಗೇಟ್ ಬಾಗಿಲು ಪುಡಿ ಪುಡಿಯಾಯಿತು! ನೋಡಿ ವೈರಲ್ ವಿಡಿಯೋ………….

ನೀವು ಅನೇಕ ಕಾಡು ಪ್ರಾಣಿಗಳ ಕೃ#ತ್ಯಗಳನ್ನು ಕಂಡು ಹೋಗಳುವದನ್ನು ನೀವು ನೋಡಿದ್ದೀರಿ. ಆದರೆ ಎಂದಾದರೂ ಕಾಡು ಹಂದಿಯನ್ನು ಹೋಗಳುವದನ್ನು ನೀವು ಕೇಳಿದ್ದೀರಾ? ಆದರೆ ಈ ವಿಡಿಯೋ ನೋಡಿದ ಕೂಡಲೇ ನೀವು ಸಹ ಕಾಡು ಹಂದಿಯನ್ನು ಹೋಗಳುತ್ತೀರಿ. ಪ್ರಸ್ತುತ ವೀಡಿಯೋದಲ್ಲಿ ಹಂದಿ ತನ್ನ ಶಕ್ತಿಯ ಪ್ರದರ್ಶನ ಮಾಡಿದೆ. ಇದನ್ನು ಜನರು ಸಹ ತುಂಬಾ ಇಷ್ಟ ಪಡುತ್ತಿದ್ದಾರೆ. ಜೊತೆಗೆ ಇನ್ನೂ ಕೆಲವರು ಈ ಕುರಿತು ತಮಾಷೆಯ ಕಾಮೆಂಟ್ ಸಹ ಮಾಡುತ್ತಿದ್ದರೆ.

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಕಾಡು ಹಂದಿ ತುಂಬಾ ವೇಗವಾಗಿ ಓಡಿ ಬರುತ್ತಿರುತ್ತದೆ. ಅದು ಕಬ್ಬಿಣದ ಗೇಟ್ ನ ಬಾಗಿಲಿನ ಮತ್ತೊಂದು ಬದಿಯಿಂದ ಓಡಿ ಬರುತ್ತಿದೆ. ರಭಸದಿಂದ ಓಡಿ ಬರುತ್ತಲೇ ಅದು ಕಬ್ಬಿಣದ ಗೇಟ್ ಗೆ ಡಿಕ್ಕಿ ಹೊಡೆಯುತ್ತದೆ. ಆ ಡಿಕ್ಕಿ ಎಷ್ಟೊಂದು ಪ್ರಭಾವಶಾಲಿ ಇತ್ತೆಂದರೆ ಅಲ್ಲಿದ್ದ ಕಬ್ಬಿಣದ ಗೇಟ್ ಬಾಗಿಲು ಪುಡಿ ಪುಡಿಯಾಗುವದರೊಂದಿಗೆ ಒಂದು ಸೈಡಿನ್ ಗೇಟ್ ಸಹ ಹಾರಿ ಬೀಳುತ್ತದೆ. ಆದರೆ ಕಬ್ಬಿಣದ ಗೇಟ್ ಭಾರವಾಗಿದ್ದರು ಸಹ ಆ ಹಂದಿಯ ಮೈಮೇಲೆ ಬಿದ್ದಾಗ ಹಂದಿ ಅದನ್ನು ಸಹ ತಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತದೆ. ಸುಮಾರು ಎರಡು ಮೀಟರ್ ಗಳ ವರೆಗೆ ಆ ಭಾರವಾದ ಗೇಟ್ ಸಹ ಎತ್ತಿಕೊಂಡು ಹೋಗುತ್ತದೆ. ಈ ವಿಡಿಯೋ ಎಲ್ಲಿದ್ದು? ಆ ಹಂದಿ ಓಡುತ್ತಿರುವದು ಏಕೆ? ಇವುಗಳ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.

ವಿಡಿಯೋ ನೋಡಿ.

ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಈ ವಿಡಿಯೋಗೆ ತುಂಬಾನೇ ವೀಕ್ಷಣೆ ಬರುತ್ತಿವೆ. ಅಷ್ಟೊಂದು ರಭಸವಾಗಿ ಓಡಿ ಬಂದು ಗೇಟ್ ನ್ನು ಪುಡಿ ಪುಡಿಯಾಗಿ ಮಾಡಿರುವ ಹಂದಿಯ ತಾಕತ್ತನ್ನು ನೆಟ್ಟಿಗರು ಹೋಗಳುತ್ತಿದ್ದಾರೆ.