Video: ಈ ನಾಯಿಗಳಿಗೆ ಬೈಕ್ ಸೌಂಡ್ ಅಂದರೆ ಅಲರ್ಜಿ ಅನಿಸುತ್ತೆ, ಬೈಕ್ ಸವಾರ ಎಷ್ಟೇ ಚಾಲಾಕಿತನ ತೋರಿದರು ಕೊನೆಗೆ ತಮ್ಮ ಕೃತಿ ಮಾಡೆಬಿಟ್ಟ ನಾಯಿಗಳು!!!

ನಗರಗಳಲ್ಲಿ ಸಂಚಾರ ಮಾಡುವಾಗ ಮೈ ಎಲ್ಲಾ ಕಣ್ಣಾಗಿರಬೇಕು, ಇದಕ್ಕೆ ಪ್ರಮುಖ ಕಾರಣ ಏನು ಅನ್ನೋದಾದ್ರೆ ರಸ್ತೆ ನಿಯಮಗಳ ಪಾಲನೆ ಮಾಡದೇ ಇರೋದು. ಹೌದು ನಗರಗಳಲ್ಲಿ ದಿನ ಬೆಳಗಾದರೆ ಸಾಕು ಒಂದಲ್ಲಾ ಒಂದು ವಾಹನ ಅಪಘಾತ ಸಂಭವಿಸುತ್ತಾ ಇರುತ್ತದೆ.‌ ರಸ್ತೆ ಸಂಚಾರ ನಿಯಮಗಳು ಎಂದರೆ ಉಡಾಫೆ ಎನ್ನುವ ಹಾಗೆ ವಾಹನ ಚಾಲನೆ ಮಾಡುವುದು ಅನೇಕರಿಗೆ ಹವ್ಯಾಸವೇ ಆಗಿದೆಯೇನೋ ಎನ್ನುವಂತೆ ಇದೆ. ಅಲ್ಲದೇ ಬಹಳಷ್ಟು ಮಂದಿ ಅತಿಯಾದ ವೇಗ, ಸಿಗ್ನಲ್ ಬ್ರೇಕ್, ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಹೀಗೆ ಹತ್ತು ಹಲವು ನಿಯಮಗಳನ್ನು ಮೀರಿ ವಾಹನ ಗಳನ್ನು ಚಾಲನೆ ಮಾಡುವುದು ನಗರಗಳಲ್ಲಿ ಸರ್ವೇ ಸಾಮಾನ್ಯ ಎನಿಸಿದೆ. ಇವೆಲ್ಲವುಗಳ ಜೊತೆಗೆ ಟ್ರಾಫಿಕ್ ಅಥವಾ ರಸ್ತೆಯಲ್ಲಿ ಸಂಚರಿಸುವಾಗ ವಾಹನ ವಾಹನಗಳ ನಡುವೆ ಒಂದು ನಿಯಮಿತವಾದ ಅಂತರ‌ ಕಾಯ್ದುಕೊಳ್ಳುವುದು ಸಹಾ ಅನಿವಾರ್ಯ ಆಗಿರುತ್ತವೆ.

ವಾಹನಗಳ ನಡುವೆ ಅಂತರ ಕಾಯ್ದುಕೊಳ್ಳದೇ ಚಾಲನೆ ಮಾಡಿವುದು ಮತ್ತು ರಸ್ತೆಯ ಮೇಲೆ ಮೂಕ ಪ್ರಾಣಿಗಳ ಅಂದರೆ ದನಗಳು, ಕುರಿಗಳು ಬಂದಾಗ ಸಾವಕಾಶವಾಗಿ ಚಲಾಯಿಸಿದಿದ್ದರೆ ಒಮ್ಮೊಮ್ಮೆ ಅ#ಪಘಾತ ಗಳಿಗೆ ಕಾರಣವಾಗುವ ಅವಕಾಶಗಳು ಇರುತ್ತದೆ. ‌ಕೆಲವರು ಇದನ್ನು ಸಹಾ ಉಡಾಫೆ ಎಂದು ಕೊಳ್ಳಬಹುದು. ಆದರೆ ಇದು ಅಕ್ಷರಶಃ ನಿಜವಾಗಿದೆ. ವಾಹನ ಗಳ ಮತ್ತು ಪ್ರಾಣಿಗಳ ನಡುವೆ ಒಂದು ನಿರ್ದಿಷ್ಟವಾದಂತಹ ಅಂತರವನ್ನು ಕಾಯ್ದುಕೊಳ್ಳದೇ ವಾಹನ ಚಾಲನೆ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎನ್ನುವುದನ್ನು ತೋರಿಸುವ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಮೇಲೆ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವಾಗ ಪ್ರಾಣಿಗಳು ಬಂದರೆ ಸಾವಕಾಶವಾಗಿ ನಡೆಸುವದರ ಅವಶ್ಯಕತೆ ಏನೆಂದು ತಿಳಿಯುತ್ತದೆ.‌

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಂದು ಕಪಲ್ಸ್ ಸ್ಕೂಟಿಯ ಮೇಲೆ ಹೊರಟಿರುತ್ತಾರೆ. ಸ್ವಲ್ಪ ಮುಂದಕ್ಕೆ ಹೋಗುತ್ತಲೇ ಇವರಿಗೆ ಎರಡು ನಾಯಿಗಳು ನಿಂತದ್ದು ಕಂಡು ಬರುತ್ತದೆ. ನಾಯಿ ಈ ಬೈಕಿನ ಧ್ವನಿಯ ಕಡೆಗೆ ತುಂಬಾ ಲಕ್ಷ್ಯ ವಹಿಸುತ್ತಿದ್ದವು ಅನಿಸುತ್ತೆ ಇದನ್ನು ಅರಿತ ಬೈಕ್ ನಡೆಸುವ ವ್ಯಕ್ತಿ ನಾಯಿಗಳ ಪ್ರತಿಕ್ರಿಯೆ ಚೆಕ್ ಮಾಡುವ ಸಲುವಾಗಿ ತನ್ನ ಬೈಕ್ ನ ರೇಸ್ ಹೆಚ್ಚಿಗೆ ಮಾಡುತ್ತಾನೆ. ಆಗ ಅಲ್ಲಿದ್ದ ನಾಯಿಗಳು ಬೈಕಿನತ್ತ ಬರುವ ಹಾಗೆ ಪ್ರತಿಕ್ರಿಯೆ ನೀಡುತ್ತವೆ. ಈ ನಾಯಿಗಳು ನಮ್ಮ ಬೈಕಿಗೆ ಬೆನ್ನು ಹತ್ತುತ್ತವೆ ಎಂಬುದನ್ನು ಅರಿತ ಆ ವ್ಯಕ್ತಿ ತನ್ನ ಜೊತೆಗಾರ್ತಿಯನ್ನು ಕೆಳಗಡೆ ಇಳಿಸಿ ಅಲ್ಲಿಂದ ಇಬ್ಬರು ಸಹ ನಡೆದುಕೊಂಡು ಬೈಕನ್ನು ಒತ್ತಿಕೊಂಡು ಹೋಗುತ್ತಾರೆ. ಆಗ ಈ ಚಾಲಾಕಿ ನಾಯಿಗಳು ಸಹ ಆ ವ್ಯಕ್ತಿಯ ಪ್ಲ್ಯಾನ್ ಕುರಿತು ತಿಳಿದುಕೊಂಡು ಸ್ವಲ್ಪ್ ದೂರ ಹೋಗುವ ವರೆಗೆ ಸುಮ್ಮನೆ ನಿಲ್ಲುತ್ತವೇ.

ಸುಮ್ಮನೆ ನಿಂತುಕೊಂಡ ನಾಯಿಗಳನ್ನು ವೀಕ್ಷಸಿದ ಬೈಕ್ ನಡೆಸುವ ವ್ಯಕ್ತಿ ಇನ್ನೇನು ನಾಯಿಗಳು ನಮ್ಮನ್ನು ಬೆನ್ನಟ್ಟುವದಿಲ್ಲ ಇಲ್ಲಿಂದ ವೇಗವಾಗಿ ಹೋಗಬೇಕು ಎಂದು ಮನದಲ್ಲಿಯೇ ವಿಚಾರ ಜೊತೆಗಾರ್ತಿಯನ್ನು ಹಿಂದಕ್ಕೆ ಕೂಡಿಸಿಕೊಂಡು ಬೈಕ್ ನ್ನು ಹತ್ತಿ ಇನ್ನೇನು ಜೋರಾಗಿ ಓಡಿಸಬೇಕು ಎನ್ನುವಷ್ಟರಲ್ಲಿ ನಾಯಿಗಳು ಸಹ ತುಂಬಾ ವೇಗವಾಗಿ ಓಡಿ ಆ ಬೈಕಿನ ಬೆನ್ನು ಹತ್ತಿಯೇ ಬಿಡುತ್ತವೆ. ಪಾಪ ಈ ನಾಯಿಗಳಿಗೆ ಬೈಕ್ ಧ್ವನಿ ಎಂದರೆ ಅಲರ್ಜಿ ಅನಿಸುತ್ತೆ ಅದಕ್ಕೆ ಆ ಬೈಕನ್ನು ಬೆನ್ನು ಹತ್ತಿ ಕಡಿಯಲು ಹೋಗುತ್ತವೆ. ಬೈಕ್ ನಡೆಸುವ ವ್ಯಕ್ತಿ ಜೀವದ ಹಂಗನ್ನು ತೊರೆದು ಬೈಕ್ ಓಡಿಸುವದರ ಜೊತೆಗೆ ಈ ನಾಯಿಗಳನ್ನು ಒದೆಯುವ ಕಾರ್ಯ ಸಹ ಮಾಡುತ್ತಾನೆ. ಈ ಎಲ್ಲ ಘಟನೆಯನ್ನು ಒಬ್ಬ ವ್ಯಕ್ತಿ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ವೀಡಿಯೋ ನೋಡಿ.

 

View this post on Instagram

 

A post shared by Marielha B.S (@mbs.cwy)

ಪ್ರಸ್ತುತ ವೈರಲ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ mbs.cwy ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದ್ದು. ಇದುವರೆಗೆ ಇದನ್ನು ಸುಮಾರು ಎರಡು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.