Video; ಎತ್ತರದ ಗೋಡೆ ಹತ್ತಲು ನಾಯಿ ಎಷ್ಟೇ ಟ್ರೈ ಮಾಡಿದರೂ ಆಗುತ್ತಿತ್ತು ಫೇಲ್! ಕೊನೆಗೆ ನೀಡಿತು ಜೀವನದ ಪಾಠ…

ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ. ಪ್ರಯತ್ನಿಸುವರು ಎಂದಿಗೂ ಸೋಲುವುದಿಲ್ಲ ಎಂಬ ಮಾತೇ ಇದೆ. ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಮನುಷ್ಯನೂ ಸಹ ಸತತ ಪ್ರಯತ್ನಶೀಲನಾಗಿರಗಬೇಕು. ಇದೇ ಪಾಠವನ್ನು ನಾಯಿಯೊಂದು ತನ್ನ ಪ್ರಯತ್ನದ ಬಲದಿಂದ ಉದಾಹರಣೆ ನೀಡಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಪ್ರಶಂಸೆಯನ್ನು ಗಿಟ್ಟಿಸುತ್ತಿದೆ.

ಎತ್ತರವಾದ ಗೋಡೆಯನ್ನು ಹತ್ತಲು ಮಾಡಿರುವ ನಾಯಿಯ ಪ್ರಯತ್ನ ನಿಜಕ್ಕೂ ಶ್ಲಾಘನೀಯವೇ ಆಗಿದೆ. ವಿಡಿಯೋದಲ್ಲಿ ಕಂಡುಬರುವ ಪ್ರಕಾರ ನಾಯಿಯೊಂದು ಎತ್ತರವಾದ ಗೋಡೆಯನ್ನು ಏರಿ ಆಚೆ ಬದಿಗೆ ಹೋಗಲು ಪ್ರಯತ್ನಿಸುತ್ತಿರುತ್ತದೆ. ಈ ಪ್ರಯತ್ನದಲ್ಲಿ ನಾಯಿ ಸಾಕಷ್ಟು ಬಾರಿ ಪ್ರಯತ್ನಿಸಿದರೂ ಅದಕ್ಕೆ ಯಶಸ್ಸು ಲಭಿಸುವುದಿಲ್ಲ. ಆದರೂ ನಾಯಿಯು ಮಾತ್ರ ಪೆಚ್ಚು ಮೋರೆ ಹಾಕದೆ ತನ್ನ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ. ಕೊನೆಗೆ ತನ್ನ ಪ್ರಯತ್ನದಲ್ಲಿ ನಾಯಿಯು ಯಶಸ್ಸು ಕಾಣುತ್ತದೆ. ಮತ್ತು ಆ ಗೋಡೆಯನ್ನೇರಿ ಆಚೆ ಬದಿಗೆ ಹೋಗುತ್ತದೆ. ಇಲ್ಲಿ ನಾಯಿಯು ತನ್ನ ಪ್ರಯತ್ನದಲ್ಲಿ ಸಾಕಷ್ಟು ಬಾರಿ ಸೋತರೂ ತನ್ನ ಪ್ರಯತ್ನ ಮಾತ್ರ ಬಿಡುವುದಿಲ್ಲ. ತನ್ನ ಕೆಲಸವನ್ನು ಪೂರ್ಣತ್ವದ ಕಡೆಗೆ ಒಯ್ಯಲು ಸತತ ಪ್ರಯತ್ನ ಮಾಡುವುದರಲ್ಲಿಯೇ ನಾಯಿಯು ಗಮನಹರಿಸುತ್ತದೆ. ಹಾಗೂ ಯಶಸ್ಸು ಕಾಣುತ್ತದೆ.

ವಿಡಿಯೋ ನೋಡಿ

ಈ ಸುಂದರವಾದ ಸಂದೇಶವನ್ನು ನೀಡುವ ವಿಡಿಯೋವನ್ನು @TansuYegen ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಸೋತ ಮನಸ್ಸಿಗೆ ಪ್ರೇರಣೆಯನ್ನು ನೀಡುವಂಥ ಈ ಅದ್ಭುತವಾದ ವಿಡಿಯೋವನ್ನು ಇಲ್ಲಿಯವರೆಗೆ ಹತ್ತು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನಾಯಿಯು ಮಾಡಿದ ಈ ಪ್ರಯತ್ನಕ್ಕೆ ಹಾಗೂ ಕಂಡ ಯಶಸ್ಸಿಗೆ ನೇಟಿಜನ್ಸ್ ಗಳು ಸಲಾಮ್ ಹೊಡೆದಿದ್ದಾರೆ.