Video ಎಲ್ಲರ ನಾಗಿನ್ ಡಾನ್ಸ್ ನೋಡಿಯಾಗಿದ್ದರೆ, ಸ್ವಲ್ಪ ಈ ಹಿರಿಯರ ಖತರ್ನಾಕ್ ನಾಗಿನ್ ಡಾನ್ಸ್ ಒಮ್ಮೆ ನೋಡಿಯೇ ಬಿಡಿ..!
ಭಾರತೀಯ ಡಾನ್ಸ್ ಗಳಲ್ಲಿ ಎಲ್ಲಕ್ಕೂ ಫೇಮಸ್ ಹಾಗೂ ಎಲ್ಲರಿಗೂ ತುಂಬಾ ಇಷ್ಟವಾದ ಡಾನ್ಸ್ ಎಂದರೆ ನಾಗಿನ್ ಡಾನ್ಸ್! ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಬಾಜಾ ನವರು ಸಹ ಬೇಕೆಂತಲೇ ಈ ಮ್ಯೂಸಿಕ್ ನ್ನು ಬಾರಿಸುತ್ತಾರೆ. ಈ ನೃತ್ಯ ಪ್ರಕಾರ ಬರೀ ಮದುವೆಯಲ್ಲಿ ಅಷ್ಟೇ ಅಲ್ಲ ಚಿಕ್ಕ ಪುಟ್ಟ ಕಾರ್ಯಕ್ರಮಗಳಲ್ಲೂ ತುಂಬಾ ಫೇಮಸ್ ಆಗಿ ಬಿಟ್ಟಿದೆ. ಇಲ್ಲಿ ಕಾಣುವ ತಾಜಾ ವಿಡಿಯೋ ನೋಡಿದ ಮೇಲಂತೂ ನೀವು ಬಿದ್ದು ಬಿದ್ದು ನಗುತ್ತೀರಿ. ಕಾರಣ ಇಲ್ಲಿ ಡಾನ್ಸ್ ಹದಿಹರೆಯದವರಲ್ಲ, ಇಳಿವಯಸ್ಸಿನ ಅಂಕಲ್ ಅಥವಾ ಅಜ್ಜಂದಿರು ಕೂಡಿ ಉತ್ಸಾಹದಲ್ಲಿ ನಾಗಿನ್ ಡಾನ್ಸ್ ಮಾಡುತ್ತಿದ್ದಾರೆ. ಸದ್ಯ ಇದೇ ವಿಡಿಯೋ ಇಂಟರ್ನೆಟ್ ನಲ್ಲಿ ಜೋರಾಗಿ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಹಿರಿಯರು ತುಂಬಾ ಜೋಶ್ ನಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ ನಾಗಿನ್ ಮ್ಯೂಸಿಕ್ ಪ್ರಾರಂಭವಾಗಿ ಬಿಡುತ್ತದೆ. ಮತ್ತೇನು ಶುರು ಆಗಿ ಬಿಡುತ್ತದೆ ಎಲ್ಲರೂ ಕೂಡಿ ಬೇರೆ ಬೇರೆ ಜಾತಿಯ ಹಾವಾಗಿ ಕುಣಿಯಲು. ಕೆಲವರು ಇದನ್ನು ನೋಡಿ ಚಪ್ಪಾಳೆ ತಟ್ಟಿದರೆ ಉಳಿದವರೂ ನೆಲದ ಬಿದ್ದು ಹಾವಿನಂತೆ ಹೊರಳಾಡಲು ಶುರು ಮಾಡುತ್ತಾರೆ. ಹಿರಿಯರ ಈ ಬಿಂದಾಸ್ ಮಸ್ತಿ ನೋಡಿ ಯಾರಿಗೂ ಸಹ ಖುಷಿ ಆಗುತ್ತದೆ.
ವಿಡಿಯೋ ನೋಡಿ
View this post on Instagram
ಯಾವ ರೀತಿ ಈ ಹಿರಿಯರು ತಮ್ಮ ಮನಸ್ಸಿಗೆ ಬಂದಂತೆ ಮುಕ್ತವಾಗಿ ಡಾನ್ಸ್ ಮಾಡುತ್ತಿದ್ದಾರೆ ನೋಡಿವರಿಗೆ ನಿಜಕ್ಕೂ ಖುಷಿಯಾಗುತ್ತಿದೆ. ಈ ವೀಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ gieddeandgieddee ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗನೊಬ್ಬ ಈ ಎಲ್ಲ ಹಾವುಗಳು ಖಜಾನೆಯನ್ನು ರಕ್ಷಿಸುವ ತುಂಬಾ ಅಪರೂಪದ ಹಾವಾಗಿವೆ ಎಂದಿದ್ದಾನೆ.