Video; ಎಲ್ಲ ಕೆಲಸ ಸ್ವಲ್ಪ ಬದಿಗಿಟ್ಟು ಮೊದ್ಲು ಈ ಪುಟ್ಟನ ಸಖತ್ ಡಾನ್ಸ್ ನ ವಿಡಿಯೋ ನೋಡಿ;

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಮಕ್ಕಳ ವಿಡಿಯೋಗಳು ಕೆಲವೊಮ್ಮೆ ನೆಟ್ಟಿಗರಿಗೆ ಆಶ್ಚರ್ಯವನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಮಕ್ಕಳು ತುಂಬಾ ದೊಡ್ಡವರಂತೆ ಸಹಜವಾಗಿ ವರ್ತಿಸುತ್ತಾರೆ. ಮಕ್ಕಳು ಈ ರೀತಿ ವರ್ತನೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಈ ವಿಡಿಯೋ ನೋಡಿದ ನಂತರ ಹುಟ್ಟುತ್ತದೆ. ಸದ್ಯ ಇಲ್ಲಿ ನೋಡುವ ಇದೇ ರೀತಿಯ ಒಂದು ವಿಡಿಯೋ ವ್ಯಕ್ತಿಗೆ ಯೋಚಿಸುವಂತೆ ಮಾಡುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ದೊಡ್ಡ ದೊಡ್ಡ ಹುಡುಗರು ಡಾನ್ಸ ಮಾಡುವದರಲ್ಲಿ ತೊಡಗಿದ್ದಾರೆ. ನಮ್ಮ ಗಮನ ಮಾತ್ರ ಆ ಮಕ್ಕಳ ಹಿಂದೆ ಚಿಕ್ಕ ಮಗುವೊಂದು ಮಾಡುತ್ತಿರುವ ಡಾನ್ಸ್ ಕಡೆಗೆ ಹರಿಯುತ್ತದೆ. ಅದಕ್ಕೆ ಕಾರಣ ಆ ಮಗು ಹಾಕುತ್ತಿರುವ ಭರ್ಜರಿ ಸ್ಟೆಪ್ಸ್ ಗಳು. ಈ ದೃಶ್ಯ ನೋಡುವಾಗ ಇಷ್ಟೊಂದು ಚಿಕ್ಕ ಮಕ್ಕಳು ಅದ್ಹೇಗೆ ದೊಡ್ಡವರಂತೆ ಹಾಗೂ ಅನುಭವಿಯಂತೆ ಕುಣಿತವನ್ನು ಸಾದರ ಪಡಿಸುತ್ತಾರೆ ಎಂಬ ಪ್ರಶ್ನೆ ಮನದಲ್ಲಿ ಹುಟ್ಟುತ್ತದೆ. ದೊಡ್ಡ ದೊಡ್ಡ ಹುಡುಗರು ಮುಂದೆ ಡಾನ್ಸ್ ಮಾಡುತ್ತಿರುವಾಗ ಈತ ಮಾತ್ರ ಅವರ ಹಿಂದೆ ತುಂಬಾ ಸಹಜವಾಗಿ ಅಷ್ಟೇ ಸಲೀಸಾಗಿ ಅವರಂತೆ ಅಲ್ಲ ಅವರಿಗಿಂತಲೂ ಭರ್ಜರಿಯಾಗಿ ಹಾಗೂ ತೀರ ಗಂಭೀರವಾಗಿ ಡಾನ್ಸ್ ಸ್ಟೆಪ್ಸ್ ಗಳನ್ನು ಹಾಕುತ್ತಿದ್ದಾನೆ. ಆತನ ಡಾನ್ಸ್ ನಲ್ಲಿಯ ಕಂಡುಬರುವ ವೇಗ ನೋಡಿದಾಗಲಂತೂ ನಿಜಕ್ಕೂ ಆಶ್ಚರ್ಯ ಉಂಟು ಮಾಡುತ್ತದೆ. ಈ ಡಾನ್ಸ್ ಮಾಡುವಾಗ ಮಗು ಎಷ್ಟೊಂದು ಸೀರಿಯಸ್ ಆಗಿದ್ದಾನೆ ಎಂಬುದನ್ನು ಇಲ್ಲಿ ನಾವು ನೋಡಬಹುದು.

ನೋಡಿ ಈ ವಿಡಿಯೋ…

ಪ್ರಸ್ತುತ ಈ ಮಗುವಿನ ಸುಂದರವಾದ ಡಾನ್ಸ್ ತೋರಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದದ್ದಲ್ಲದೆ 4 ಲಕ್ಷ 53 ಸಾವಿರ ಲೈಕ್ಸ್ ಗಳನ್ನು ಸಹ ಹೊಂದಿದೆ.