Video: ‘ಒಂದು ಮುತ್ತಿನ ಕಥೆ’ ಚಿತ್ರದ ನೆನಪು ಮಾಡಿಕೊಟ್ಟ ಅಪ್ಪುವಿನ ವಿಡಿಯೋ ವೈರಲ್!!
ಕನ್ನಡ ಚಿತ್ರರಂಗದಲ್ಲಿ ಎಂದೆಂದಿಗೂ ಅಳಿಸಲಾಗದ ಬರೆ ಎಂದರೆ ಅಪ್ಪುವಿನ ಸಾ#ವು. ಪುನೀತ್ ಅವರ ಸಾ#ವಿನಿಂದ ಇಡೀ ಚಿತ್ರರಂಗವೇ ತಲ್ಲಣಗೊಂಡಿದೆ. ಅವರ ಆಕಸ್ಮಿಕವಾಗಿ ಬಂದ ಸಾ#ವು ಅಭಿಮಾನಿಗಳ ಮನದಲ್ಲಿ ದುಃಖದ ಸಾಗರವೇ ಹೊರಡಿಸಿದೆ. ಇಂದು ಅಪ್ಪು ನಮನೆಲ್ಲ ಅಗಲಿ ಎಷ್ಟೋ ದಿವಸಗಳು ಕಳೆದರೂ ಸಹ ಅಭಿಮಾನಿಗಳ ರೋಧನೆ ಕಡಿಮೆಯಾಗುವ ಮಾತೇ ಇಲ್ಲ. ಅಪ್ಪು ಇನ್ನೂ ಸಹ ನಮ್ಮಲ್ಲಿಯೇ ಇದ್ದಾರೆ ಎನ್ನೋ ಭಾಸವಾಗುತ್ತಿದೆ. ಕೋಟ್ಯಂತರ ಅಭಿಮಾನಿಗಳ ಪ್ರೀತಿ ಹೊಂದಿದ ಅಪ್ಪು ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ.
ಅಪ್ಪು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಹೇಳಲು ಸಾಲದು. ಅವರು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಕಂಡು ದೇಶದಾದ್ಯಂತ ಜನರು ಹೋಗಳುವದರ ಜೊತೆಗೆ ಪರದೇಶದಲ್ಲಿಯ ಜನರು ಇವರನ್ನು ಪೂಜಿಸುತ್ತಿದ್ದಾರೆ. ಇವರ ಬಗ್ಗೆ ಎಷ್ಟು ಹೇಳಿದರು ಸಾಲದು. ಸದ್ಯಕ್ಕೆ ಅಪ್ಪು ಅವರ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಅಪ್ಪು ಅವರು ಮುಂಜಾನೆಯ ಸಮಯದಲ್ಲಿ ವಾಕಿಂಗ್ ಮಾಡುವ ದೃಶ್ಯ ಇದರಲ್ಲಿದೆ.
ಪ್ರಸ್ತುತ ವೀಡಿಯೋದಲ್ಲಿ ಪುನೀತ್ ಅವರು ಮುಂಜಾನೆಯ ಸಮಯದಲ್ಲಿ ಮಾಲದೀವ್ ಬೀಚ್ ನಲ್ಲಿ ವಾಕಿಂಗ್ ಮಾಡುತ್ತಿದ್ದಾರೆ. ವಾಕಿಂಗ್ ಮಾಡುವ ಸಮಯದಲ್ಲಿ ‘ಒಂದು ಮುತ್ತಿನ ಕಥೆ’ ಚಿತ್ರ ಶೂಟ್ ಮಾಡಿದ ಐಲೆಂಡ್ ಕುರಿತು ಹೇಳಿದ್ದಾರೆ. ಸುಮಾರು 30 ದಿವಸಗಳ ವರೆಗೆ ಆ ಸ್ಥಳದಲ್ಲಿ ಶೂಟ್ ಮಾಡಿದ್ದೇವೆ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ. ಒಂದು ಮುತ್ತಿನ ಕಥೆ ಇದು ಭಾರತದ ಸಿನಿಮಾ ರಂಗದಲ್ಲಿಯೇ ನೀರಿನಲ್ಲಿ ಶೂಟ್ ಮಾಡಿದ ಮೊದಲನೆಯ ಚಲನಚಿತ್ರ ಇದಾಗಿದೆ. ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿತ್ತು. ಚಿತ್ರದಲ್ಲಿ ರಾಜಕುಮಾರ್ ಅವರು ನಟಿಸಿದ್ದಾರೆ. ಆದರೆ ಈ ಚಿತ್ರದ ಕುರಿತು ಪುನೀತ್ ಅವರು ಹೇಳಿರುವ ಮಾತು ನೀವೇ ಕೇಳಿ.
ವಿಡಿಯೋ ನೋಡಿ….!