Video; ಕರುಳ ಕುಡಿಗೆ ಸಿಂಹದ ಬಾಯಿಯಿಂದ ಉಳಿಸಿಕೊಂಡು ಹೋಗುವಾಗ, ಕಪಾಳಕ್ಕೆ ಒಂದೇಟು ಬಿಗಿದು ಹೋದ ತಾಯಿ ಝೀಬ್ರಾ!
ಸೋಶಿಯಲ್ ಮೀಡಿಯಾದಲ್ಲಿ ವೈಲ್ಡ್ ಲೈಫಿಗೆ ಸಂಬಂಧಿಸಿದ ಏನಾದರೂ ವಿಶೇಷ ವಿಡಿಯೋಗಳು ಮತ್ತು ಫೋಟೋ ದಿನನಿತ್ಯ ನಮ್ಮ ಕಣ್ಣಿಗೆ ಬಿದ್ದೇ ಬೀಳುತ್ತವೆ. ಈ ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಜೀವನ ತುಂಬಾ ವಿಚಿತ್ರವಾಗಿರುತ್ತದೆ. ಇಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ ಮಾಂಸಹಾರಿ ಪ್ರಾಣಿಗಳಿಂದ ಹೆಜ್ಜೆಹೆಜ್ಜೆಗೆ ಅಪಾಯ ಕಾದಿರುತ್ತದೆ. ಈಗ ಹೆಣ್ಣು ಸಿಂಹ ಮತ್ತು ತಾಯಿ ಝೀಬ್ರಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೇಟಿಜನ್ಸ್ ಗಳು ಝೀಬ್ರಾದ ಧೈರ್ಯ ಮತ್ತು ತನ್ನ ಕರುಳ ಕುಡಿಗಾಗಿ ಹೋರಾಡಿದ ಹೋರಾಟಕ್ಕೆ ಹೊಗಳುತ್ತಿದ್ದಾರೆ.
ಕಾಡಿನಲ್ಲಿ ಪುಟ್ಟ ಝೀಬ್ರಾ ತನ್ನ ತಾಯಿಯೊಂದಿಗೆ ಸುತ್ತಾಡುತ್ತಿರುವಾಗ ಹೆಣ್ಣು ಸಿಂಹ ಒಂದು ಅದರ ಮೇಲೆ ಅಟ್ಯಾಕ್ ಮಾಡಿದೆ. ಇದನ್ನು ನೋಡಿದ ತಾಯಿ ಅದ್ಹೇಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯ. ತಕ್ಷಣ ತನ್ನ ಕರುಳ ಬಳ್ಳಿಯನ್ನು ಬಿಡಿಸಲು ತಾಯಿ ಝೀಬ್ರಾ ಕಾರ್ಯೋನ್ಮುಖವಾಗಿದೆ. ಅದು ಸಿಂಹಕ್ಕೆ ಶೆಡ್ಡು ಹೊಡೆದು ನಿಂತಿದೆ. ಈ ಹೋರಾಟದಲ್ಲಿ ಝೀಬ್ರಾ ತನ್ನ ಪ್ರಾಣವನ್ನು ಲೆಕ್ಕಿಸದೆ ಸಿಂಹದ ಜೊತೆಗೆ ನೇರ ಯುದ್ಧ ಸಾರಿದೆ. ಇಲ್ಲಿ ಸಿಂಹವು ಮರಿಝೀಬ್ರಾದ ಕುತ್ತಿಗೆಯನ್ನು ಬಲವಾಗಿ ಹಿಡಿದಿದೆ. ಆದರೂ ತಾಯಿ ಝೀಬ್ರಾ ಸ್ವಲ್ಪವೂ ಹಿಮ್ಮಟ್ಟದೆ ತನ್ನ ಪ್ರಯತ್ನ ಮುಂದುವರಿಸಿದೆ. ಕೊನೆಗೂ ತಾಯಿ ಝೀಬ್ರಾಕ್ಕೆ ತನ್ನ ಕರುಳಕುಡಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸು ಲಭಿಸಿದೆ. ಅಷ್ಟೇ ಏಕೆ ಹೋಗುವಾಗ ಇನ್ನೊಮ್ಮೆ ನನ್ನ ಮಗುವಿಗೆ ಏನಾದರೂ ಕಣ್ಣೆತ್ತಿ ನೋಡಿದರೆ ಹುಷಾರ್! ನಿನ್ನನ್ನು ಹುಟ್ಟಲಿಲ್ಲ ಎನ್ನಿಸಿಬಿಡ್ತೇನೆ ಎನ್ನೋತ್ತರ ಮುಖಕ್ಕೆ ಒಂದು ಸಾಲಿಡ್ ಒದೆ ನೀಡಿ ಝೀಬ್ರಾ ತನ್ನ ಮರಿಯನ್ನು ಜೊತೆಗೆ ತೆಗೆದುಕೊಂಡು ಹೋಗಿದೆ. ಇಲ್ಲಿ ಸಿಂಹವು ಹುಚ್ಚನಂತೆ ಮುಖ ಮಾಡಿ ತೆಪ್ಪಗೆ ಕುಳಿತಿದ್ದನ್ನು ನೋಡಬಹುದು.
ನೋಡಿ ಝೀಬ್ರಾದ ಈ ಸಾಲಿಡ್ ವಿಡಿಯೋ…
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಲೈನ್ ಲವರ್ಸ್ 2 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಲ್ಲದೆ ಸಾಕಷ್ಟು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.