VIDEO; ಕಷ್ಟದಲ್ಲಿದ್ದಾಗ ತಮ್ಮವರೂ ದೂರ ಓಡಿ ಹೋಗುವಾಗ; ನಂಬಿಗಸ್ಥ ನಾಯಿ ಬಂದ ರೀತಿ ನೋಡಿ ಹೇಗಿದೆ…?

ಸಾಕು ಪ್ರಾಣಿಗಳಲ್ಲಿ ನಾಯಿಗೆ ತುಂಬಾ ಆದ್ಯತೆಯನ್ನು ನೀಡಲಾಗಿದೆ. ಇದಕ್ಕೆ ಕಾರಣ ಇದು ತನ್ನ ಮಾಲೀಕರೊಂದಿಗೆ ಸದಾ ಕಾಲ ಪ್ರಾಮಾಣಿಕವಾಗಿ ವರ್ತಿಸುತ್ತದೆ. ಇದು ನಂಬಿದ ವ್ಯಕ್ತಿಗೆ ಎಂದೂ ದ್ರೋಹ ಬಗೆಯುವದಿಲ್ಲ. ತನ್ನ ಜೀವ ಹೋದರೂ ಮಾಲೀಕನ ಕಷ್ಟದಲ್ಲಿ ಭಾಗಿಯಾಗಲು ಹಿಂದೆ ಮುಂದೆ ನೋಡುವುದಿಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇದನ್ನೇ ಹೇಳುವ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಪುಟ್ಟ ಮಗು ತನ್ನ ಕುಟುಂಬದೊಂದಿಗೆ ರಸ್ತೆಯ ಬದಿಯಲ್ಲಿ ನಿಂತಿದೆ. ಅಷ್ಟರಲ್ಲಿ ಒಂದು ಬೀದಿ ನಾಯಿಯು ಹಠಾತ್ ಮಗುವಿನ ಮೇಲೆ ಅಟ್ಯಾಕ್ ಮಾಡುತ್ತದೆ. ಆಕಸ್ಮಿಕವಾಗಿ ನಡೆದ ಈ ಘಟನೆಯನ್ನು ಅಲ್ಲಿಯೇ ಹತ್ತಿರ ನಿಂತ ಆ ಕುಟುಂಬದವರು ಸಾಕಿದ ನಾಯಿಯ ಕಣ್ಣಿಗೆ ಬೀಳುತ್ತದೆ. ಆಮೇಲೆ ತಕ್ಷಣ ಮಿಂಚಿನ ವೇಗದಲ್ಲಿ ಬೀದಿ ನಾಯಿಯ ಮೇಲೆ ಸಾಕು ನಾಯಿ ಅಟ್ಯಾಕ್ ಮಾಡುತ್ತದೆ. ಈ ಅದ್ಭುತ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಯು ತನ್ನ ಮನೆಯ ಸದಸ್ಯನಿಗಾಗಿ ಒಂದೇ ಒಂದು ಕ್ಷಣವೂ ಹಾಳು ಮಾಡದೆ ರಕ್ಷಣೆಗೆ ನಿಂತಿದೆ.

ವೀಡಿಯೋ ನೋಡಿ

 

View this post on Instagram

 

A post shared by Dharam Veer 04 (@04dharamveer)

ನಾಯಿಯ ಈ ಸ್ವಾಮಿನಿಷ್ಠೆಯನ್ನು ತೋರಿಸುವ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ _sg_status.8019 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಗೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.