Video; ಕಸ ಕಲೆಕ್ಟ್ ಮಾಡುವವನ ಜೊತೆ ಸುಶಿಕ್ಷಿತ ವ್ಯಕ್ತಿ ವರ್ತಿಸಿದ ಬಗೆ; ಕಸ ಗುಡಿಸುವ ವ್ಯಕ್ತಿಯ ಮುಖ ಹೇಗೆ ಬದಲಾಯಿತು ನೋಡಿ.

ಇತ್ತೀಚೆಗೆ ಜನರ ವಿಚಾರಗಳು ತುಂಬಾ ಬದಲಾಗುತ್ತಿವೆ. ಬರು ಬರುತ್ತಾ ಮೊದಲಿನ ಮೇಲು, ಕೀಳು ಎಂಬ ಭಾವನೆ ತುಂಬಾ ಕಡಿಮೆಯಾಗುತ್ತಾ ಬರುತ್ತಿದೆ. ತನಗಿಂತಲೂ ಕಡಿಮೆ ಆದಾಯವುಳ್ಳ ವ್ಯಕ್ತಿಗಳ ಜೊತೆಗೆ ನಡೆದುಕೊಳ್ಳುವ ರೀತಿಯಲ್ಲಿ ಒಳ್ಳೆಯ ಬದಲಾವಣೆ ಕಂಡುಬರುತ್ತಿದೆ. ಇದಕ್ಕೆಲ್ಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಸಹ ಇರಬಹುದು ಎಂದು ಅನಿಸುತ್ತದೆ. ಸದ್ಯ ಇದೇ ರೀತಿ ಆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಂಡು ಬರುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಕಸ ಕಲೆಕ್ಟ್ ಮಾಡುವ ವ್ಯಕ್ತಿಯೊಬ್ಬ ಕಂಡು ಬರುತ್ತಾನೆ. ಆತ ಕಸವನ್ನು ಕಲೆಕ್ಟ್ ಮಾಡುವ ತನ್ನ ಕೆಲಸವನ್ನು ತುಂಬಾ ಜವಾಬ್ದಾರಿತನದಿಂದ ಮಾಡುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಆತನಿಗೆ ಮನೆಯಲ್ಲಿಯ ಕಸವನ್ನು ನೀಡಲು ಸುಶಿಕ್ಷಿತ ವ್ಯಕ್ತಿಯೊಬ್ಬ ಬಾಗಿಲು ತೆರೆದು ಒಮ್ಮೆಲೆ, ಅಣ್ಣ ನೀನು ಕಚರಾವಾಲ ಇದ್ದಿಯಲ್ಲ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಕಸ ಕಲೆಕ್ಟ್ ಮಾಡುವ ವ್ಯಕ್ತಿಯ ಮುಖ ಒಮ್ಮೆಲೆ ಬಾಡುತ್ತದೆ. ಮರಕ್ಷಣವೇ ಕಸ ನೀಡುವ ಸುಶಿಕ್ಷಿತ ವ್ಯಕ್ತಿಯು ತನ್ನ ಮಾತನ್ನು ಹೀಗೆ ಬದಲಾಯಿಸುತ್ತಾನೆ. ಅಣ್ಣ, ಕಚರಾವಾಲಗಳು ನಾವಿದ್ದೇವೆ, ನೀನು ನಿಜವಾದ ಸಫಾಯಿವಾಲ (ಶುಚಿಯಾಗಿ ಇಡುವವ) ಇದ್ದೀಯಾ, ಎಂದಾಗ ಕಸವನ್ನು ಕಲೆಕ್ಟ್ ಮಾಡುವ ವ್ಯಕ್ತಿಯ ಮುಖ ಮಾರುದ್ದ ಅಗಲವಾಗುವಾದರ ಜೊತೆಗೆ ಸಮಾಧಾನದ ದೊಡ್ಡ ಹಾಸ್ಯ ಆತನ ಮುಖದ ಮೇಲೆ ಲಾಸ್ಯವಾಡುವದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಗಮನಿಸಬಹುದು. ವ್ಯಕ್ತಿಯು ಹೇಳುವ ಹಾಗೆ ನಿಜವಾಗಿಯೂ ಆತ ಸಫಾಯಿವಾಲನೆ ಇದ್ದಾನೆ. ಮನೆಯಲ್ಲಿಯ ಕಸವನ್ನು ಕಲೆ ಹಾಕಿ ನೀಡುವವರು ನಾವೇ ನಿಜವಾದ ಕಚರಾವಾಲಗಳು, ಅಲ್ವಾ?

ವೀಡಿಯೋ ನೋಡಿ

ಮನಸ್ಸಿನಲ್ಲಿ ಯೋಚನೆಯನ್ನು ಕ್ಷಣದಲ್ಲಿಯೇ ಬದಲಾಯಿಸುವ ಸುಂದರವಾದ ಮಾತುಗಳ ಈ ಪುಟ್ಟ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ instagram ನಲ್ಲಿ sg _status .8019 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ದಯವಿಟ್ಟು ನಿಮ್ಮ ವಿಚಾರಗಳನ್ನು ಬದಲಾಯಿಸಿ ಎಂದು ಕ್ಯಾಪ್ಷನ್ ಬೇರೆ ನೀಡಲಾಗಿದೆ.