Video: ಕಾಗೆಗಳ ಕಾಟದಿಂದ ಕೋಪಗೊಂಡು ಗೂಬೆ ಮಾಡಿದ್ದೇನು ಗೊತ್ತಾ? ‘ರಾತ್ರಿಯ ರಾಜಾ ಗೂಬೆ ಯಾದರೆ, ಹಗಲಿನ ರಾಜಾ ಕಾಗೆ’ ಎಂದ ನೆಟ್ಟಿಗರು!!

ಕಾಗೆ ಎಂದರೆ ಸಾಕು ನಮಗೆಲ್ಲ ಅಪಶ#ಕುನ ಅಂತ ಭಾವಿಸುತ್ತೇವೆ. ಕಾಗೆಗಳನ್ನು ಮನೆ ಹತ್ತಿರ ಸುಳಿದಾಡಲು ಸಹ ಬಿಡುವದಿಲ್ಲ. ಮುಂಜಾನೆ ಎದ್ದು ಕಾಗೆಯ ಮುಖ ನೋಡಬಾರದು ಇದರಿಂದ ದಿವಸ ಚೆನ್ನಾಗಿ ಕಳೆಯುವದಿಲ್ಲ ಅನ್ನೋದು ಕೆಲವರ ವಿಚಾರ. ಕಾಗೆಯ ಧ್ವನಿ ಕರ್ಕಶವಾಗಿರುತ್ತದೆ ಹೀಗಾಗಿ ಕಾಗೆಯ ಧ್ವನಿ ಯಾರೂ ಸಹ ಕೇಳಬಯಸುವದಿಲ್ಲ. ಕಾಗೆಯನ್ನು ದ#ರಿದ್ರ ಪಕ್ಷಿ ಅಂತಾನೂ ಕರೆಯುತ್ತಾರೆ. ಯಾವ ಮನೆಯ ಮೇಲೆ ಕಾಗು ಕೂಡುತ್ತದೆಯೋ ಆ ಮನೆಗೆ ದ#ರಿದ್ರ ಹತ್ತುವದು ಎನ್ನುತ್ತಾರೆ. ಆದರೆ ನಾವು ಯಾವುದೇ ವ್ಯಕ್ತಿಯ ವಿ#ಧಿವಶವಾದ ನಂತರ ಆವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮರುದಿವಸ ಪಕ್ಷಿಗೆ ಅನ್ನ ಹಾಕುತ್ತೇವೆ ಆಗ ಕಾಗೆ ಬಂದು ಮುಟ್ಟಿದರೆ ಅಂದರೆ ಅಲ್ಲಿದ್ದ ಅನ್ನವನ್ನು ತಿಂದರೆ ತುಂಬಾ ಒಳ್ಳೆಯದು ಎಂದು ಭಾವಿಸುತ್ತೇವೆ. ಪಿತೃಪಕ್ಷದ ದಿನದಂದು ಸಹ ಕಾಗೆಯನ್ನು ತುಂಬಾ ಪೂಜಿಸುತ್ತಾರೆ.

ಗೂಬೆ ಅಂದಕೂಡಲೇ ನಮ್ಮ ನೆನಪಿಗೆ ಬರುವದು ಅದರ ಮುಖ ಮತ್ತು ಕಣ್ಣುಗಳು. ಗೂಬೆ ಯಾವಾಗಲೂ ಸಿಟ್ಟಿನಿಂದ ಇರುವ ಹಾಗೆ ಕಾಣುತ್ತದೆ. ಇದರಿಂದ ಅದನ್ನು ನೋಡಿದರೆ ಹೆ#ದರಿಕೆ ಉಂಟಾಗುವದು ಸಹಜ. ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಗೂಬೆಗಳು ಕಾಣಿಸಿ ಕೊಳ್ಳುತ್ತವೆ. ನಾವು ರಾತ್ರಿಯಲ್ಲಿ ಗೂಬೆಯನ್ನು ನೋಡಬಾರದು ಎಂದು ದೊಡ್ಡವರು ಹೇಳುತ್ತಾರೆ. ಏಕೆಂದರೆ ರಾತ್ರಿಯಲ್ಲಿ ಅದರ ಕಣ್ಣುಗಳು ತುಂಬಾ ವಿ#ಪರೀತವಾಗಿ ಕಾಣುತ್ತವೆ ಹೀಗಾಗಿ ಆ ಸಮಯದಲ್ಲಿ ಕಣ್ಣುಗಳು ನೋಡಿದರೆ ಹೆದ#ರಿಕೊಳ್ಳಬಹುದು ಅನ್ನೋ ಉದ್ದೇಶದಿಂದ ನಾವು ರಾತ್ರಿಯಲ್ಲಿ ಗೂಬೆಯನ್ನು ನೋಡಬಾರದು ಎಂದು ಹೇಳುತ್ತಾರೆ.

ಗೂಬೆಯ ಇನ್ನೊಂದು ವಿಶೇಷತೆ ಏನೆಂದರೆ ಅದಕ್ಕೆ ಹಗಲಿನಲ್ಲಿ ಕಣ್ಣು ಕಾಣುವದಿಲ್ಲ. ಕೇವಲ ರಾತ್ರಿ ಸಮಯದಲ್ಲಿ ಮಾತ್ರ ತನ್ನ ಗೂಡಿನಿಂದ ಹೊರಗೆ ಬಂದು ಬೇಟೆಯಾಡಿ ಮತ್ತೆ ದಿನದ ತುಂಬೆಲ್ಲಾ ವಿಶ್ರಾಂತಿ ಪಡೆಯುತ್ತದೆ. ಆಕ#ಸ್ಮಿಕವಾಗಿ ಗೂಬೆ ಹಗಲಿನಲ್ಲಿ ಹೊರಗೆ ಬಂದರೆ ಅದರ ಕಣ್ಣುಗಳು ಕಾಣುವದಿಲ್ಲ. ಪರಿಣಾಮ ಕೆಲವೊಮ್ಮೆ ಅದರ ಜೀವ ಸಹ ಕ#ಳೆದುಕೊಳ್ಳುತ್ತದೆ. ಪ್ರಸ್ತುತ ವೀಡಿಯೋನೆ ಇದಕ್ಕೆ ಉತ್ತಮವಾದ ಉದಾಹರಣೆ.

ಈ ವೈರಲ್ ವಿಡಿಯೋದಲ್ಲಿ ಸಹ ಗೂಬೆ ಹಗಲಿನಲ್ಲಿ ಒಂದು ಕಲ್ಲಿನ ಬಂದು ಕೂಡುತ್ತದೆ. ಆದರೆ ಆ ಸ್ಥಳ ಕಾಗೆಗಳು ವಾಸಮಾಡುವ ಸ್ಥಳವಾಗಿರುತ್ತದೆ. ಹೀಗಾಗಿ ಗೂಬೆ ಬಂದು ಕೂಡುತ್ತಲೇ ಅಲ್ಲಿದ್ದ ಎಲ್ಲ ಕಾಗೆಗಳು ಒಟ್ಟಿಗೆ ಸೇರಿ ಗೂಬೆಯನ್ನು ಹೇಗಾದರೂ ಮಾಡಿ ಇಲ್ಲಿಂದ ಓಡಿಸಬೇಕು ಅನ್ನೋ ಯೋಜನೆ ಮಾಡುತ್ತವೆ. ಕಾಗೆಗಳು ಒಟ್ಟಿಗೆ ಸೇರಿ ಅದರ ಸುತ್ತಲೂ ಕೂಡುತ್ತವೆ. ತದನಂತರ ಒಂದರ ನಂತರ ಒಂದು ಹೀಗೆ ಒಂದೊಂದಾಗಿ ಬಂದು ಗೂಬೆಯ ರೆಕ್ಕೆಯನ್ನು ಹಿಡಿದು ಎಳೆಯಲು ಪ್ರಯತ್ನಿಸುತ್ತವೆ. ಆದರೆ ಕಾಗೆಗಿಂತ ಬಲಿಶಾಲಿಯಾಗಿದ್ದ ಗೂಬೆ ಮಾತ್ರ ಹಾಗೆ ಸುಮ್ಮನೆ ಕುಳಿತು ಕೊಳ್ಳುತ್ತದೆ. ಕಾರಣ ಏನು ಗೊತ್ತಾ? ಕಾರಣ ಏನೆಂದರೆ ಹಗಲಿನಲ್ಲಿ ಗೂಬೆಯ ಕಣ್ಣು ಕಾಣುವದಿಲ್ಲ ಹೀಗಾಗಿ ಕಾಗೆಗಳು ಎಲ್ಲಿವೆ ಎಂಬುದು ಅದಕ್ಕೆ ಕಾಣುವದಿಲ್ಲ ಇದರಿಂದ ಗೂಬೆ ಏನು ಮಾಡದೆ ಸುಮ್ಮನೆ ಕೂಡುತ್ತದೆ.

ವೀಡಿಯೋ ನೋಡಿ……..