Video: ಕಾಗೆಯ ಜಾಣತನ ಸಾಬೀತು ಪಡಿಸುವ ಮತ್ತೊಂದು ವಿಡಿಯೋ ವೈರಲ್, “ಕಾಗೆಯನ್ನು ಸುಮ್ಮನೆ ಮನುಷ್ಯ ನಿಂ#ದಿಸುತ್ತಿದ್ದಾನೆ” ಎಂದ ನೆಟ್ಟಿಗರು!

ಬಾಲ್ಯದಲ್ಲಿ ಕಾಗೆಯ ಚಾಕಚಕ್ಯತೆ ಮತ್ತು ಕುತಂತ್ರದ ಬಗ್ಗೆ ನೀವು ಅನೇಕ ಕಥೆಗಳನ್ನು ಕೇಳಿರಬಹುದು ಮತ್ತು ಓದಿರಬಹುದು. ಕಲ್ಲಿನ ತುಂಡುಗಳನ್ನು ನೀರಲ್ಲಿ ಹಾಕಿ ಮಡಿಕೆಯಲ್ಲಿಯ ನೀರು ಕುಡಿಯುವ ಕಥೆಯಂತೂ ನೀವು ಕೇಳದೆ ಇರಲಾರರಿ. ಇದೀಗ ಅಂಥದ್ದೇ ಅಂದರೆ ಕಾಗೆಯ ಜಾಣತನವನ್ನು ಸಾಬೀತುಪಡಿಸುವಂತ ವಿಡಿಯೋವೊಂದು ಬೆಳಕಿಗೆ ಬಂದಿದೆ.
ಇದರಲ್ಲಿ ಕಾಗೆ ತನ್ನ ತನ್ನ ಬುದ್ಧಿಯನ್ನು ಒಳ್ಳೆಯ ರೀತಿಯಾಗಿ ಉಪಯೋಗ ಮಾಡುವದನ್ನು ಕಾಣಬಹುದು. ಈ ವೀಡಿಯೋ ನೋಡಿದ ಮೇಲೆ ನೀವೂ ಹೇಳುತ್ತೀರಿ ಈ ಕಾಗೆ ನಿಜಕ್ಕೂ ಬುದ್ದಿವಂತ ಅಂತ.

ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಕಾಗೆ ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಕೋಣೆಯಲ್ಲಿ ವ್ಯಕ್ತಿಯೊಬ್ಬರು ಈ ಕಾಗೆಯ ಮುಂದೆ ಬೇರೆ ಬೇರೆ ಆಕಾರದ ಬಣ್ಣಬಣ್ಣದ ಆಟಿಕೆಗಳನ್ನು ಇಟ್ಟಿರುತ್ತಾರೆ. ಆದರೆ ಅವುಗಳನ್ನು ಗಾತ್ರದ ಅನುಸಾರ ಒಂದರ ಮೇಲೊಂದು ಈ ರೀತಿಯಾಗಿ ಇಟ್ಟರೆ ಕೊನೆಗೆ ಒಂದೇ ಆಕಾರದ ಗೋಲಾಕಾರದ ಆಟಿಗೆ ಇದೆ ಅನ್ನೋ ಹಾಗೆ ಕಾಣುವದು. ಈ ರೀತಿಯಾಗಿ ಕಾಗೆ ತಪ್ಪದೆ ಆ ಪೆಟ್ಟಿಗೆಗಳನ್ನು ಎಲ್ಲಕ್ಕಿಂತ ಮೊದಲು ದೊಡ್ಡದು ಕೊನೆಗೆ ಎಲ್ಲಕ್ಕಿಂತ ಚಿಕ್ಕದು ಈ ಕ್ರಮವಾಗಿ ಎಲ್ಲ ಆಟಿಕೆಗಳನ್ನು ಕಾಗೆ ಜೋಡಿಸುವದು ನೀವು ಕಾಣಬಹುದು. ನಾವು ಸಾಮಾನ್ಯವಾಗಿ ಈ ಕ್ರಿಯೆಯನ್ನು ಮಕ್ಕಳಿಗೆ ಮಾಡಲು ಕಲಿಸುತ್ತೇವೆ ಆದರೆ ಈ ವಿಡಿಯೋದಲ್ಲಿ ಮಾತ್ರ ಕಾಗೇ ಕ್ರಿಯೆ ಮಾಡಿ ತನ್ನ ಜಾಣತನದ ಪ್ರದರ್ಶನ ಮಾಡಿದೆ. ಆದರೆ ಈ ಕಾಗೆಗೆ ಹೀಗೆ ಮಾಡುವುದನ್ನು ಕಲಿಸಿದವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವಿಡಿಯೋ ನೋಡಿ.

ಸ್ಮಾರ್ಟ್ ಕಾಗೆಯ ಈ ವೀಡಿಯೊವನ್ನು Instagram ನಲ್ಲಿ 9gag ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಕೇವಲ ಎರಡೇ ದಿನಗಳಲ್ಲಿ 6 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿರುವ ಈ ವಿಡಿಯೋದ ಜನಪ್ರಿಯತೆಯನ್ನು ಅಳೆಯಬಹುದು. ಈ ವೀಡಿಯೋ ನೋಡಿದ ನಂತರ ಬಳಕೆದಾರರು ಕೂಡ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ, “ಈ ಕಪ್ಪು ಕಾಗೆಗಳು ತುಂಬಾ ಬುದ್ಧಿವಂತವಾಗಿರುತ್ತವೆ ಎಂಬುದು ನನಗೆ ನಂಬೋಕೆ ಆಗುತ್ತಿಲ್ಲ”. ಮತ್ತೊಬ್ಬ ನೆಟ್ಟಿಗ ಬಳಕೆದಾರರು ಪ್ರಶ್ನೆಯನ್ನು ಕೇಳುವಾಗ ಬರೆದರು, ಇದು ಹೇಗೆ ಇಷ್ಟೊಂದು ಬುದ್ಧಿವಂತವಾಯಿತು? ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು “ಜನರು ಕಾಗೆಗಳನ್ನು ಏಕೆ ಕೆಟ್ಟದಾಗಿ ನೋಡುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ, ಇದು ತುಂಬಾ ಬುದ್ಧಿವಂತ ಹಕ್ಕಿ” ಎಂದು ಪ್ರತಿಕ್ರಿಯಿಸಿದ್ದಾರೆ.