Video; ಕಿರಾತಕ ಚಿರತೆ ಹೆದರಿಸುತ್ತಿದ್ದರೂ ಕ್ಯಾರೇ ಎನ್ನದೇ ತಿರುಗಿ ಹೂಂಕರಿಸುತ್ತಲೇ ನಿಂತ ಜಿಂಕೆ..! ಡೇರಿಂಗ್ ಮೆಚ್ಚಿದ ನೆಟ್ಟಿಗರು…!
ವೈಲ್ಡ್ ಲೈಫ್ ಜಗತ್ತೇ ತುಂಬಾ ರೋಚಕವಾಗಿದೆ. ಇಲ್ಲಿ ವಾಸಿಸುವ ಪ್ರಾಣಿಗಳು ಯಾವಾಗ ಏನು ಮಾಡುತ್ತವೆ ಹೇಳಲು ಸಾಧ್ಯವಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಂಬಲಸಾಧ್ಯವಾದ ವಿಡಿಯೋ ಒಂದು ನೋಡಲು ಸಿಗುತ್ತಿದೆ. ಹಿಂಸ್ರ ಪ್ರಾಣಿಗಳನ್ನು ನೋಡುತ್ತಲೇ ಜೀವ ಮುಷ್ಟಿಯಲ್ಲಿ ಹಿಡಿದು ದಿಕ್ಕುದೆಸೆಯಿಲ್ಲದ ಓಡುತ್ತದೆ ಜಿಂಕೆ. ಆದರೆ ಇಲ್ಲಿ ಜಿಂಕೆಯ ಡೇರಿಂಗ್ ನೋಡಿ ನೇಟಿಜನ್ಸ್ ಗಳು ಫಿದಾ ಆಗಿದ್ದಾರೆ. ಒಂದೇ ಒಂದು ಕ್ಷಣವು ಹೆಚ್ಚುಕಡಿಮೆಯಾದರೆ ಜಿಂಕೆಗೆ ಬೇಟೆಯಾಡಿ ತಿಂದು ತನ್ನ ಹೊಟ್ಟೆ ಮೇಲೆ ಕೈಯಾಡಿಸುತ್ತದೆ ಕ್ರೂರ ಚಿರತೆ. ಇಂಥದ್ದರಲ್ಲಿ ನೇರ ಚಿರತೆಗೆ ಸೆಡ್ಡು ಹೊಡೆದು ನಿಂತಿದೆ ಜಿಂಕೆ. ಈ ವಿಡಿಯೋ ನೋಡಲು ತುಂಬಾ ವಿಶೇಷವಾಗಿದೆ.
ವಿಡಿಯೋದಲ್ಲಿ ಕಂಡುಬರುವ ಹಾಗೆ ಕ್ರೂರ ಕಿರಾತಕ ಚಿರತೆ ಬೇಟೆಯಾಡುವ ಸಲುವಾಗಿ ಪೊದೆಯಲ್ಲಿ ಸನ್ನದ್ಧವಾಗಿ ಕುಳಿತಿದೆ. ಆದರ ಎದುರಿಗೆ ಸ್ವಲ್ಪವೇ ಅಂತರದಲ್ಲಿ ನೇರ ರಸ್ತೆಯ ಮೇಲೆ ಜಿಂಕೆಯೊಂದು ನಿಂತಿದೆ. ಜಿಂಕೆ ಚಿರತೆಗೆ ಸ್ಪಷ್ಟವಾಗಿ ನೋಡಿದರೂ, ವಿಶೇಷವೆಂದರೆ ಈ ಜಿಂಕೆ ಓಡಿ ಹೋಗಲು ಯತ್ನಿಸಿಲ್ಲ. ಬದಲಾಗಿ ಚಿರತೆಗೆ, ‘ನಿನ್ನಲ್ಲಿ ಧಮ್ ಇದ್ರೆ ನನ್ನನ್ನು ಹಿಡಿದು ತೋರಿಸು’ ಎಂಬಂತೆ ಚಾಲೆಂಜ್ ನೀಡುತ್ತಿರುವ ಹಾಗಿದೆ ಅದರ ಆ್ಯಟಿಟ್ಯೂಡ್. ಚಿರತೆಯು ನೆಟ್ಟಗಣ್ಣಿನಿಂದ ಒಂದೇ ಸವನೆ ಜಿಂಕೆಗೆ ವೀಕ್ಷಿಸುತ್ತಿದ್ದರೂ ಜಿಂಕೆ ಮಾತ್ರ ಚಿರತೆಗೆ ಸೊಪ್ಪು ಹಾಕದೆ ಹಾಗೆಯೇ ಧೈರ್ಯದಿಂದ ಜಿಂಕೆಯೂ ಚಿರತೆಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆ.
ವಿಡಿಯೋ ನೋಡಿ
View this post on Instagram
ಈ ದೃಶ್ಯ ನೇಟಿಜನ್ಸ್ ಗಳಿಗೆ ತುಂಬಾ ಇಂಪ್ರೆಸ್ ಮಾಡಿದೆ. ಡೇರಿಂಗ್ ಅಂದರೆ ಇದು ನಮ್ಮ ರಾಕಿ ಭಾಯಿ ತರ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ವೈಲ್ಡ್ ಅನಿಮಲ್ ಪಿಕ್ಸ್ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷ 32 ಸಾವಿರ ಜನರು ವೀಕ್ಷಿಸಿದ್ದಾರೆ. ಮತ್ತು ಸಾವಿರಾರು ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.