Video ! ಕೊರೋನಾ ನಂತರ ಮೊದಲ ಸಲ ಸ್ಕೂಲ್ ಡ್ರೆಸ್ ಮೇಲೆ ಕ್ಯೂಟ್ ಹುಡುಗಿಯ ಕ್ಯೂಟ್ ಡ್ಯಾನ್ಸ್ ! ಪುಟ್ಟಿ ಹಾಕಿದ ಸ್ಟೆಪ್ಸ್ ಗೆ ಧೂಳ್ …ಧೂಳ್…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ಡಾನ್ಸ್ ಗಳನ್ನು ಇಲ್ಲಿಯವರೆಗೆ ನೀವು ನೋಡಿರಬಹುದು. ಆದರೆ ಈಗ ನೋಡುವ ಪುಟ್ಟ ಹುಡುಗಿಯ ಕ್ಯೂಟ್ ಡ್ಯಾನ್ಸ್ ನ ವಿಡಿಯೋ ನೋಡಿದಾಗ ಎಲ್ಲವೂ … ಸುಂಟರಗಾಳಿ ! ಕೊರೋನಾದ ಸಂಕಟದ ನಂತರ ಸ್ಕೂಲ್ ಡ್ರೆಸ್ ಮೇಲೆ ಕ್ಯೂಟ್ ಹುಡುಗಿ ಮಾಡಿದ ಡ್ಯಾನ್ಸ್ ಇಂಟರ್ನೆಟ್ನಲ್ಲಿ ಕತರ್ನಾಕ್ ಸಂಚಲನ ಮೂಡಿಸಿದೆ. ಎರಡು ವರ್ಷ ಪುಟ್ಟಮಕ್ಕಳ ಶಾಲೆಗಳೇ ಮುಚ್ಚಲ್ಪಟ್ಟಿದ್ದವು. ಬಾಲಿವುಡ್ ನ ಪ್ರಸಿದ್ಧ ರ್ಯಾಪರ್ ಬಾದಶಹನ ‘ಜುಗುನು’ ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ್ದಾಳೆ ಈ ಪುಟ್ಟಿ. ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕಂತೂ ಈ ಹುಡುಗಿ ಧೂಳ್ ಧೂಳ್ ಎಬ್ಬಿಸಿದ್ದಾಳೆ. ಈ ವಿಡಿಯೋದಲ್ಲಿ ಶಾಲೆಯಲ್ಲಿಯ ಪುಟ್ಟ ಮಕ್ಕಳು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬಳು ಹುಡುಗಿ ಮಾತ್ರ ತನ್ನದೇ ವಿಶೇಷ ಸ್ಟೈಲಿನಲ್ಲಿ ಡಾನ್ಸ್ ಮಾಡುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಆಕೆ ಡಾನ್ಸ್ ಮಾಡುತ್ತಿರುವ ಈ ಸ್ಟೈಲ್ ಮತ್ತು ಮೂವ್ ಆಕೆಯ ವಯಸ್ಸಿನಲ್ಲಿ ಯಾರಿಗೂ ಸಾಧ್ಯವಾಗುವುದಿಲ್ಲ ಎನಿಸುತ್ತದೆ.
ಶಾಲೆಯ ಪುಟ್ಟ ಹುಡುಗಿಯ ಈ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ನಿಜಕ್ಕೂ ಧೂಳೆಬ್ಬಿಸಿದೆ. ಅಷ್ಟು ಮಕ್ಕಳಲ್ಲಿ ಎಲ್ಲರ ದೃಷ್ಟಿಯನ್ನು ತನ್ನ ಕಡೆಗೆ ಸೆಳೆದುಕೊಳ್ಳುವಲ್ಲಿ ಈ ಪುಟ್ಟಿಯು ಯಶಸ್ವಿಯಾಗಿದ್ದಾಳೆ. ಈ ಹುಡುಗಿಯ ಕುಣಿತಕ್ಕೆ ಮರುಳಾಗಿ ಲಕ್ಷಾವಧಿ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.
ನೋಡಿ ಕ್ಯೂಟ್ ಡ್ಯಾನ್ಸ್…
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಡಿಜೆ ಮೊಂಟಿ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಶೇರ್ ಮಾಡಿದ ಈ ವಿಡಿಯೋಗೆ “ಒಂದು ಪುಟ್ಟ ಹುಡುಗಿಯಲ್ಲಿ ಇಷ್ಟೊಂದು ಎನರ್ಜಿ ಯಾವತ್ತೂ ನೋಡಿರಲಿಲ್ಲ ಎಂಬ ಕ್ಯಾಪ್ಷನ್ ನೀಡಿದ್ದಾರೆ.” ಈ ವಿಡಿಯೋ ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ. ಮತ್ತು ಆಕೆಯ ಎಕ್ಸ್ಪ್ರೆಶನ್ ತುಂಬಾ ಅದ್ಭುತವಾಗಿದೆ. ಈ ಹುಡುಗಿಯ ಡಾನ್ಸ್ ಮುಂದೆ ನಟಿಯರನ್ನು ಸಹ ನಿವಾಳಿಸಿ ಒಗೆಯಬೇಕು, ಅಲ್ವಾ? ಎಂದು ನೇಟಿಜನ್ಸ್ ಗಳು ವಿಧ ವಿಧವಾದ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.