Video: ಕೊಹ್ಲಿಯವರನ್ನು ಈ ಕಾರಣಕ್ಕೆ ಕಿಂಗ್ ಎನ್ನುವರು! ಇಶಾನ್ ಕಿಶನ್ ದ್ವಿಶತಕ ಸಿಡಿಸಿದ ಸಮಯದಲ್ಲಿ ಭಾಂಗ್ರಾ ನೃತ್ಯಮಾಡಿ ಸಂಭ್ರಮಿಸಿದ ಕೊಹ್ಲಿ!

ಡಿಸೆಂಬರ್ 10 ರಂದು ಭಾರತ ಮತ್ತು ಬಾಂಗ್ಲಾದೇಶ ನಡುವೆ ಕೊನೆಯ ಪಂದ್ಯ ಜರುಗಿತು. ಈ ಪಂದ್ಯದಲ್ಲಿ ಸಾಕಷ್ಟು ವಿಕ್ರಮಗಳನ್ನು ನೋಡಲು ದೊರಕಿತು. ಮೊದಲನೆಯದಾಗಿ ಈ ಪಂದ್ಯ ಕೇವಲ ಔಪಚಾರಿಕವಾದ ಪಂದ್ಯವಾಗಿತ್ತು ಏಕೆಂದರೆ ಬಾಂಗ್ಲಾದೇಶ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡು ಈ ಸರಣಿಯನ್ನು ತನ್ನದಾಗಿಸಿಕೊಂಡಿತ್ತು ಹೀಗಾಗಿ ಕೊನೆಯ ಪಂದ್ಯ ಕೇವಲ ಔಪಚಾರಿಕವಾಗಿ ಆಡಲಾಯಿತು. ಭಾರತ ತಂಡ ಈ ಪಂದ್ಯ ಗೆದ್ದರೂ ಸಹ ಸರಣಿಯನ್ನು ಮೊದಲೇ ತನ್ನ ಕೈಚೆಲ್ಲಿಕೊಂಡಿತ್ತು.

ಈ ಪಂದ್ಯದಲ್ಲಿ ಕೆಲವು ಅದ್ಭುತವಾದ ಕ್ಷಣಗಳು ನೋಡಲು ದೊರಕಿದವು. ಮೊದಲನೆಯದಾಗಿ ಈ ಪಂದ್ಯದಲ್ಲಿ ಕಿಂಗ್ ವಿರಾಟ್ ಕೊಹ್ಲಿಯವರು ಶತಕ ಸಿಡಿಸಿದರು. ಸುಮಾರು ನಲವತ್ತು ತಿಂಗಳ ಬಳಿಕ ವಿರಾಟ್ ಅವರು ಈ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇದನ್ನು ಕಂಡು ಅಲ್ಲಿದ್ದ ಫ್ಯಾನ್ಸ್ ಗಳು ಖುಷಿಯೊಂದಿಗೆ ಅಲ್ಲಿದ್ದ ಭಾರತದ ತಂಡದ ಟೀಮ್ ಮೆಂಬರ್ ಗಳು ಸಹ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದರು. ಕೆಲವು ವರ್ಷಗಳ ಕಳಪೆ ಪ್ರದರ್ಶನದ ನಂತರ ಈ ವರ್ಷ ವಿರಾಟ್ ಅವರು ಪ್ರತಿಯೊಂದು ಫಾರ್ಮ್ಯಾಟ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡುತ್ತಿರುವದು ನಮ್ಮ ನಿಮ್ಮೆಲ್ಲರಿಗೂ ಸಂತಸದ ಸುದ್ಧಿಯಾಗಿದೆ.

ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಫೀಲ್ಡ್ ಆಯ್ಕೆ ಮಾಡಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಒಂದು ಉತ್ತಮವಾದ ಸ್ಕೋರ್ ಮಾಡುವಲ್ಲಿ ಸಫಲವಾಯಿತು. ಅದಕ್ಕೆ ಮುಖ್ಯವಾಗಿ ಕರಣವಾದದ್ದು ಈ ಎರಡು ಆಟಗಾರರು. ಭಾರತ ತಂಡ ಮೊದಲಿಗೆ ಬ್ಯಾಟಿಂಗ್ ಅಷ್ಟೊಂದು ಸ್ಟ್ರಾಂಗ್ ಆಗಿ ಓಪನ್ ಮಾಡಲು ಸಾಧ್ಯವಾಗಲಿಲ್ಲ. ತದನಂತರ ಕೊಹ್ಲಿ ಹಾಗೂ ಇಶಾನ್ ಕಿಶನ್ ಇಬ್ಬರ ಜೋಡಿಯಾಟ ಬಾಂಗ್ಲಾದೇಶ ತಂಡಕ್ಕೆ ಒಂದು ದೊಡ್ಡ ತಲೆನೋವಾಯಿತು. ಬಾಂಗ್ಲಾದೇಶ ತಂಡದ ಬೌಲರ್ಗಳು ಇವರನ್ನು ಔಟ್ ಮಾಡುವದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಸಹ ಇವರಿಬ್ಬರು ಅತ್ಯೋತ್ತಮವಾಗಿ ಆಟವನ್ನಾಡಿ ಭಾರತ ಜಯಭೇರಿಯಾಗಲು ಪಾತ್ರರಾದರು.

ಕೊಹ್ಲಿ ಹಾಗೂ ಇಶಾನ್ ಕಿಶನ್ ಇವರ ಜೋಡಿಯಾಟದಿಂದ ಭಾರತ ತಂಡದ ಸ್ಕೋರ್ 400 ರನ್ನ ಗಳನ್ನು ಪಾರುಮಾಡಲು ಸಾಧ್ಯವಾಯಿತು. ಕೊಹ್ಲಿಯವರ ಶತಕದ ನಂತರ ಕಿಶನ್ ಸಹ ಕೇವಲ 83 ಬೌಲ್ ಗಳಲ್ಲಿ ಶತಕ ಬಾರಿಸಿದರು. ಹಾಗೆ ತಮ್ಮ ಆಟವನ್ನು ಮುಂದಕ್ಕೆ ಸಾಗಿಸಿತ್ತು ಕಿಶನ್ ಅವರು ಮತ್ತೊಂದು ವರ್ಲ್ಡ್ ರೆಕಾರ್ಡ್ ನ್ನು ತಮ್ಮದಾಗಿಸಿಕೊಂಡರು. ಅದೇನೆಂದರೆ ಅವರು ಕೇವಲ 123 ಬೌಲ್ ಗಳಲ್ಲಿ ದ್ವಿಶತಕ ಬಾರಿಸಿದರು. ಮೊದಲನೆಯ ಶತಕ 83 ಬೌಲ್ ಗಳಲ್ಲಿ ಸಿಡಿಸಿದರೆ ಎರಡನೆಯ ಶತಕ ಕೇವಲ 40 ಬೌಲ್ ಗಳಲ್ಲಿ ಪೂರ್ಣ ಮಾಡಿದರು. ಇದನ್ನು ಕೇಳಿದರೆ ನಿಮಗೆ ಅರ್ಥವಾಗುತ್ತೆ ಕಿಶನ್ ಅವರು ಎಂತಹ ಅದ್ಭುತವಾದ ಆಟ ಆಡಿದ್ದಾರೆ ಎನ್ನುವದು. ಕಿಶನ್ ಅವರ ದ್ವಿಶತಕದ ಸಮಯದಲ್ಲಿನ ಕಿಂಗ್ ಕೊಹ್ಲಿ ಸಂಭ್ರಮಿಸಿದ ಪರಿಯ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ನೀವು ನೋಡಬಹುದು, ಕಿಶನ್ ಅವರು ಯಾವ ಬೌಲಿಗ್ ತಮ್ಮ 200 ರನ್ ಗಳು ಪೂರ್ಣ ಮಾಡಿದರೊ ಅದೇ ಸಮಯಕ್ಕೆ ನಾನ್ ಸ್ಟ್ರೈಕ್ ಆಗಿ ಆಡುತ್ತಿದ್ದ ಕೊಹ್ಲಿಯವರು ತುಂಬಾ ಖುಷಿ ಪಟ್ಟಿದ್ದಾರೆ. ಅವರು ತಾನೇ ದ್ವಿಶತಕ ಸಿಡಿಸಿದ್ದೇನೆ ಅನ್ನೋ ಪರಿಯನ್ನು ಕಿಶನ್ ಗಿಂತಲೂ ಮೊದಲು ತಾವೇ ಬ್ಯಾಟ್ ಮೇಲೆತ್ತಿ ತಮ್ಮ ಹರುಷವನ್ನು ವ್ಯಕ್ತ ಪಡಿಸಿದ್ದಾರೆ. ತದನಂತರ ಇಶಾನ್ ಕಿಶನ್ ನನ್ನು ಬಳಿಗೆ ಕರೆದು ಅಪ್ಪಿಕೊಂಡು ಅವರಿಗೆ ಅಭಿನಂದನೆ ಕೋರಿ ಅವರ ಜೊತೆಗೆ ಭಾಂಗ್ರಾ ನೃತ್ಯ ಸಹ ಮಾಡಿದ್ದಾರೆ. ಯಾವ ಆಟಗಾರ ತನ್ನ ಜೊತೆಯ ಆಟಗಾರನ್ನು ದ್ವಿಶತಕ ಬಾರಿಸಿದ ನಂತರ ಇಷ್ಟೊಂದು ಖುಷಿ ಪಡುತ್ತಾನೆ ಎಂಬುದು ನೀವೇ ಹೇಳಿ. ಅದಕ್ಕೆ ಅನ್ನೊದು ಕೊಹ್ಲಿಯವರು ಕಿಂಗ್ ಇದ್ದಾರೆ ಅಂತ. ತಮ್ಮ ಆಟಗಿಂತ ಬೇರೆಯವರ ಆಟವನ್ನು ಮೆಚ್ಚಿ ಅವರನ್ನು ಪ್ರೋತ್ಸಾಹ ನೀಡುವದು ಕೇವಲ ಕೊಹ್ಲಿಯವರಿಂದಲೇ ಸಾಧ್ಯ ಅಂತ ಈ ವೀಡಿಯೋ ನೋಡಿದ ಮೇಲೆ ಗೊತ್ತಾಗುವದು.

ವೀಡಿಯೋ ನೋಡಿ..

ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ sony sports network ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಲಾವಿದೆ. ಪ್ರಸ್ತುತ ವೀಡಿಯೋ ಇದುವರೆಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡುವರೊಂದಿಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ. ಅಲ್ಲದೆ ಸುಮಾರು 123 ಜನರು ರೇಟ್ವಿಟ್ ಮಾಡಿದ್ದಾರೆ.