Video; ಕೋಬ್ರಾ ಮೇಲೆ ಗುರಿ ಇಟ್ಟು ಎಡವಟ್ಟು ಮಾಡಿಕೊಂಡ ವ್ಯಕ್ತಿ; ತತ್ ಕ್ಷಣವೇ ಕರ್ಮಕ್ಕೆ ಸರಿಯಾಗಿ ಪ್ರತಿಫಲ ನೀಡಿದ ಕೋಬ್ರಾ…
ಹಾವಿನ ರೋಷ ಹನ್ನೆರಡು ವರ್ಷ ಎಂದು ಮೊದಲಿನಿಂದಲೂ ಹೇಳಲಾಗುತ್ತದೆ. ಇದರ ಹಿಂದಿನ ಮುಖ್ಯ ಉದ್ದೇಶವೇನೆಂದರೆ ಒಟ್ಟಿನಲ್ಲಿ ಹಾವಿನ ಸಿಟ್ಟು ತುಂಬಾ ಕೆಟ್ಟದಾಗಿರುತ್ತದೆ. ಹಾವಿಗೆ ಸಂಬಂಧಿಸಿದ ಅನೇಕ ವಿಡಿಯೋಗಳಲ್ಲಿ ಅದರ ಸಿಟ್ಟಿನ ಬಗ್ಗೆ ನೋಡಿದ್ದೇವೆ. ಇಂಥ ಸಂದರ್ಭದಲ್ಲಿ ಕೆಲವರು ತಮ್ಮ ಜೀವವನ್ನು ಸಹ ಕಳೆದುಕೊಂಡಿದ್ದಾರೆ.
ವ್ಯಕ್ತಿಯೊಬ್ಬ ಈ ವಿಡಿಯೋದಲ್ಲಿ ಹಾವಿನ ಜೊತೆಗೆ ತಮಾಷೆ ಮಾಡಲು ಹೋಗಿ ದೊಡ್ಡ ತಪ್ಪು ಮಾಡಿಕೊಂಡಿದ್ದಾನೆ. ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಕಾರಿನಲ್ಲಿ ಕುಳಿತ ವ್ಯಕ್ತಿ ತನ್ನ ರಿವಾಲ್ವರ್ ನಿಂದ ಕೊಬ್ರಾಗೆ ಗುರಿ ಇಟ್ಟು ಹೊಡೆಯುವ ಮೊದಲ ತಪ್ಪು ಮಾಡುತ್ತಾನೆ. ಇಲ್ಲಿ ಆತನಿಟ್ಟ ಗುರಿ ತಪ್ಪುತ್ತದೆ, ಹಾಗೂ ಕೋಬ್ರಾ ಸ್ವಲ್ಪದಲ್ಲಿ ಬಚಾವಾಗುತ್ತದೆ. ಇದು ಆತ ಮಾಡಿದ ಎರಡನೇ ತಪ್ಪು. ತದನಂತರ ಕೋಬ್ರಾ ತಕ್ಷಣವೇ ತನ್ನ ಶತ್ರುವಿನ ಮೇಲೆ ಅಟ್ಯಾಕ್ ಮಾಡಲು ಆಕ್ಟಿವ್ ಆಗುತ್ತದೆ. ಈ ಮುಂದಿನ ದೃಶ್ಯ ನೋಡಿದಾಗ ನಿಮ್ಮ ದೇಹ ಸಹ ಮೆಲ್ಲಗೆ ಕಂಪಿಸುವುದು ನಿಜ. ಕಾರಿನಲ್ಲಿ ತಿರುಗಾಡುವಾಗ ಕಚ್ಚಾ ರಸ್ತೆಯಲ್ಲಿ ಕೋಬ್ರಾ ಹಾವೊಂದು ಕಾಣಿಸುತ್ತದೆ. ಅದನ್ನು ನೋಡಿದ ಕಾರಿನವರಲ್ಲಿ ಒಬ್ಬ ವ್ಯಕ್ತಿಯು ರಿವಾಲ್ವರ್ ತೆಗೆದು ಅದನ್ನು ಶೂಟ್ ಮಾಡಲು ನೋಡುತ್ತಾನೆ. ಈ ಸಂದರ್ಭದಲ್ಲಿ ವ್ಯಕ್ತಿಯು ಮೇಲಿಂದ ಮೇಲೆ ಫೈರಿಂಗ್ ಮಾಡುತ್ತಾನೆ. ಪ್ರತಿ ಬಾರಿಯೂ ಆತನ ಗುರಿ ತಪ್ಪುತ್ತದೆ. ಕೋಬ್ರಾ ಮಾತ್ರ ಆಗ ತನ್ನ ಸಿಟ್ಟನ್ನು ಒಮ್ಮೆಲೇ ಹೊರಹಾಕುತ್ತಾ ಬುಸುಗುಡುತ್ತಾ ವ್ಯಕ್ತಿಯ ಮೇಲೆಯೇ ಏರಿ ಬರುವ ಭಯಾನಕ ದೃಶ್ಯ ವಿಡಿಯೋದ ಎಂಡ್ ನಲ್ಲಿ ನೋಡಬಹುದು.
ವೀಡಿಯೋ ನೋಡಿ
Don't bring a gun to a cobra fight! 🐍 pic.twitter.com/qGshAWdjHu
— Klipz Entertainment (@klip_ent) December 16, 2022
ಕೋಬ್ರಾ ಅಟ್ಯಾಕ್ ಮಾಡಿದ ನಂತರ ವ್ಯಕ್ತಿಯ ನರಗಳು ಒಮ್ಮೆಲೆ ಸಡಿಲಾಗುತ್ತದೆ. ವ್ಯಕ್ತಿಯು ಜೋರು ಜೋರಾಗಿ ಕಿರುಚಿದ್ದನ್ನು ಇಲ್ಲಿ ಕೇಳಬಹುದು. ಪ್ರಸ್ತುತ ಘಟನೆಯ ನಂತರ ವ್ಯಕ್ತಿಯ ಬಗ್ಗೆ ತಿಳಿದುಬಂದಿಲ್ಲ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ @Instantregretss ಹೆಸರಿನ ಅಕೌಂಟಿನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಒಂದು ಲಕ್ಷ 80 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.