Video: ‘ಖತರೊಂಕಾ ಖಿಲಾಡಿ’, ಈ ಬೆಕ್ಕು ಗೋಡೆಯ ಬಿಲದಲ್ಲಿ ಹಾರಿದ ಬಗೆಯನ್ನು ನೋಡಿದರೆ ನೀವು ಸಹ ಆಶ್ಚರ್ಯ ಪಡುವಿರಿ!!
ಬೆಕ್ಕು ಈ ಪ್ರಾಣಿಯನ್ನು ಸಾಕು ಪ್ರಾಣಿಗಳ ಎಂತಹ ವರ್ಗಕ್ಕೆ ಸೇರಿಸಲಾಗುವದು ಎಂದರೆ ಅವುಗಳ ಕುರಿತು ಯಾರಿಗೂ ಸಹ ಊಹಿಸಲು ಸಾಧ್ಯವಾಗುವದಿಲ್ಲ. ನಿಮ್ಮ ಮನೆಯಲ್ಲಿ ಸಹ ಒಂದು ಸಾಕಿದ ಬೆಕ್ಕು ಇದ್ದರೆ ಅದರ ಕಿತಾಪತಿಯ ಕುರಿತು ನಿಮಗೆ ಎಲ್ಲ ಗೊತ್ತಿದೆ ಎಂದುಕೊಂಡರೆ ಅದು ತಪ್ಪಾಗಬಹುದು. ಆದರೆ ಮನೆಯಲ್ಲಿಯ ಬೆಕ್ಕು ಕೆಲವೊಮ್ಮೆ ಊಟದ ತಟ್ಟೆಯಲ್ಲಿ, ಕೆಲವೊಮ್ಮೆ ಕೆಲವೊಬ್ಬರ ಕಿವಿಯ ಬದಿಯಿಂದ ಹಾರಾಡುವದು ನೀವು ನೋಡಿರಬಹುದು. ಆದರೆ ಬೆಕ್ಕು ಕೆಲವೊಮ್ಮೆ ಯಾವ ಕೃತಿ ಮಾಡುವದು ಎಂಬುದು ಗುರುತಿಸಲು ಸಹ ಸಾಧ್ಯವಾಗುವದಿಲ್ಲ. ಅಸಾಧ್ಯವಾದ ಕಾರ್ಯವನ್ನು ಸಾಧ್ಯವನ್ನಾಗಿ ಮಾಡುವದೇ ಬೆಕ್ಕಿನ ವಿಷೇಶತೆ ಇದೆ.
ಬೆಕ್ಕಿನ ಕರಾಮತಿಯ ಕುರಿತು ಎಷ್ಟೇ ಹೇಳಿದರು ಅದು ಸಾಲದು. ಬೆಕ್ಕು ಇದೊಂದು ತುಂಬಾ ಬುದ್ಧಿವಂತ ಮತ್ತು ಚತುರ ಪ್ರಾಣಿಯಾಗಿದೆ. ಬೆಕ್ಕಿನ ಒಂದು ಆಶ್ಚರ್ಯ ಪಡಿಸುವಂತಹ ವೀಡಿಯೋ ಸಾದ್ಯಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಬೆಕ್ಕು ಎರಡು ಗೋಡೆಗಳ ಅಂತರವನ್ನು ಕೇವಲ ಸೆಕೆಂಡ ನಲ್ಲಿ ಪಾರು ಮಾಡಿ ಅಲ್ಲಿಂದ ಮಾಯವಾಗುತ್ತದೆ. ಅಂದರೆ ಈ ಬೆಕ್ಕಿನ ಹಿಂದೆ ಯಾವುದೇ ಪ್ರಾಣಿ ಅಥವಾ ಮನುಷ್ಯ ಇದನ್ನು ಬೆನ್ನಟ್ಟಿಕೊಂಡು ಬರುತ್ತಿರುತ್ತಾರೆ. ಅಷ್ಟರಲ್ಲಿ ಬೆಕ್ಕು ಎರಡು ವಿಶಾಲವಾದ ಗೋಡೆಗಳ ಹತ್ತಿರ ಬರುತ್ತದೆ. ಒಂದು ಗೋಡೆಯಿಂದ ಮತ್ತೊಂದು ಗೋಡೆಯ ನಡುವೆ ತುಂಬಾನೇ ಅಂತರ ವಿರುತ್ತೆ ಅಲ್ಲದೆ ಮುಂದಿನ ಇಟ್ಟಿಗೆಯ ಗೋಡೆಗೆ ಚಿಕ್ಕ ಚಿಕ್ಕ ರಂಧ್ರಗಳು ಇರುತ್ತವೆ ಆಗ ಬೆಕ್ಕು ಹೇಗಾದರೂ ಮಾಡಿ ಮುಂದಿದ್ದ ಗೋಡೆಯ ರಂಧ್ರದಲ್ಲಿ ಹಾರಿ ಅಲ್ಲಿಂದ ಪಲಾಯನ ಮಾಡಬೇಕು ಎಂದು ವಿಚಾರ ಮಾಡುತ್ತೆ.
ಆದರೆ ಈ ಕಾರ್ಯ ಅಷ್ಟೊಂದು ಸುಲಭವಾಗಿರಲಿಲ್ಲ ಏಕೆಂದರೆ ಈ ಗೋಡೆಗಳ ಮಧ್ಯದಲ್ಲಿ ಒಂದು ಆಳವಾದ ಚರಂಡಿ ಇರುತ್ತದೆ ಒಂದು ವೇಳೆ ಬೆಕ್ಕು ಹಾರಿದ ಮೇಲೆ ರಂಧ್ರದ ಒಳಗಡೆ ಹೋಗದೆ ಇದ್ದರೆ ಅದು ನೇರವಾಗಿ ಚರಂಡಿಯಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ಆದರೂ ಸಹ ಈ ಬೆಕ್ಕು ಓಡುತ್ತ ಬಂದು ಸ್ವಲ್ಪ ಸಮಯದ ವರೆಗೆ ಒಂದೇ ಜಾಗದಲ್ಲಿ ಕುಳಿತುಕೊಂಡು ಅದರ ಗುರಿಯನ್ನು ನಿಶ್ಚಿತ ಪಡಿಸಿಕೊಳ್ಳುತ್ತದೆ. ತದನಂತರ ಒಮ್ಮೆಲೇ ಜೀಗಿದು ಮುಂದಿದ್ದ ಗೋಡೆಯ ಬಿಲದಲ್ಲಿ ಹೋಗುತ್ತದೆ. ಬಿಲದಿಂದ ಪಾರಾಗಿ ಗೋಡೆಯ ಮತ್ತೊಂದು ಬದಿಗೆ ಹೋಗಿ ಅಲ್ಲಿಂದ ಓಡಿ ಹೋಗುತ್ತದೆ.
ವಿಡಿಯೋ ನೋಡಿ