Video: ಗಣೇಶನ ಆರತಿಗೆ ಚಪ್ಪಾಳೆ ತಟ್ಟುತ್ತ ಭಕ್ತಿಯಲ್ಲಿ ತಲ್ಲೀನವಾದ ಇಲಿ, ವಿಡಿಯೋ ನೋಡಿ!
ಇಲಿಯನ್ನು ಗಣೇಶನ ವಾಹನ ಎಂದು ಸಹ ಕರೆಯುತ್ತಾರೆ. ಗಣೇಶನ ವಾಹನ ಇಲಿಯು ಸದಾ ನಮ್ಮ ಮನೆಗಳಲ್ಲಿ , ಕಾರ್ಯಾಲಯಗಳಲ್ಲಿ , ರಸ್ತೆಯ ಬದಿಗಳಲ್ಲಿ, ಚರಂಡಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಾವು ಮನೆಗಳಲ್ಲಿ ಇಲಿಯನ್ನು ಕಂಡರೆ ಸಾಕು ಆಗ ನಾವು ಅದಕ್ಕೆ ಹೊರಗೆ ಓಡಿಸಲು ತುಂಬಾನೇ ಪ್ರಯತ್ನ ಮಾಡುತ್ತದೆ ಆದರೂ ಸಹ ಇಲಿಗಳು ಹೊರಗೆ ಹೋಗುವುದಿಲ್ಲ ಒಂದು ದಾರಿ ಮುಚ್ಚಿದರೆ ಮತ್ತೊಂದು ದಾರಿ ಮುಖಾಂತರ ಮನೆಯ ಒಳಗೆ ಪ್ರವೇಶ ಮಾಡುತ್ತೇವೆ. ಇಲಿಗಳು ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಮನೆ ಒಳಗೆ ನುಗ್ಗಿ ತಮಗೆ ಸಿಕ್ಕ ಆಹಾರವನ್ನು ತಿನ್ನುತ್ತವೆ ಒಂದು ವೇಳೆ ಆಹಾರ ಸಿಗದೆ ಇದ್ದರೆ ಅವುಗಳಿಗೆ ಸಿಕ್ಕಿದ ವಸ್ತುವನ್ನು ತಮ್ಮ ಚೂಪಾದ ಹಲ್ಲುಗಳಿಂದ ಕತ್ತರಿಸಿಬಿಡುತ್ತವೆ. ಮುಂಜಾನೆ ಎದ್ದು ಕೂಡಲೇ ಮನೆಯ ಸ್ಥಿತಿ ನೋಡಿದಾಗ ನಾವು ಇಲಿಗಳನ್ನು ತುಂಬಾನೇ ದೂರುತ್ತೇವೆ ಹೀಗಾಗಿ ಇಲಿಗಳನ್ನು ಕಂಡರೆ ನಮ್ಮ ಮನಸ್ಸಲ್ಲಿ ಕೋಪದ ಭಾವನೆ ಬರುತ್ತದೆ.
ಇಲಿಗಳು ಪ್ರತಿಯೊಂದು ವಸ್ತುಗಳು ಕತ್ತರಿಸುವ ಹಿಂದೆ ನಿಸರ್ಗದ ಒಂದು ಕಾರಣ ವಿದೆ ಅದೇನೆಂದರೆ ಪ್ರತಿನಿತ್ಯ ಇಲಿಗಳು ತಮ್ಮ ಹಲ್ಲುಗಳಿಂದ ಏನಾದರೂ ಕತ್ತರಿಸದೆ ಇದ್ದರೆ ಇಲಿಗಳು ತಮ್ಮ ಹಲ್ಲಿನ ಕತ್ತರಿಸುವ ಕ್ಷಮತೆ ಕಳೆದುಕೊಳ್ಳುತ್ತವೆ ಆದ್ದರಿಂದಲೇ ಅವು ತಮ್ಮ ಮುಂದೆ ಏನೇ ಸಿಕ್ಕರೂ ಸಹ ಅವುಗಳ ಮೇಲೆ ತಮ್ಮ ಹಲ್ಲಿನಿಂದ ದಾಳಿ ಮಾಡುತ್ತವೆ.
ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಇಲಿಯ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ಗಣೇಶನ ಭಕ್ತ ಅಥವಾ ವಾಹನ ನಿಜವಾಗಿಯೂ ಇಲಿ ಇದೆ ಎಂದು ನೀವೇ ಹೇಳುವಿರಿ. ಈ ವಿಡಿಯೋದಲ್ಲಿ ನೀವು ನೋಡಬಹುದು ಒಂದು ರಸ್ತೆಯ ಮದ್ಯದಲ್ಲಿ ಒಂದು ಇಲಿಯು ತನ್ನ ಎರಡು ಕಾಲುಗಳ ಮೇಲೆ ನಿಂತುಕೊಂಡು ಇನ್ನೆರಡು ಕಾಲುಗಳನ್ನು ಮೇಲಕ್ಕೆ ಎತ್ತಿ ನಾವು ಹೇಗೆ ಚಪ್ಪಾಳೆ ತಟ್ಟುತ್ತೇವೆಯೋ ಅದೇ ರೀತಿಯಾಗಿ ಚಪ್ಪಾಳೆ ತಟ್ಟುತ್ತದೆ. ಈ ಇಲಿ ಸುಮಾರು ಒಂದು ನಿಮಿಷದವರೆಗೆ ಚಪ್ಪಾಳೆ ಹೊಡೆಯುತ್ತಾ ಹಾಗೆಯೇ ನಿಂತಿರುತ್ತದೆ. ಈ ಇಲಿ ಗಣೇಶನ ಆರತಿಗೆ ಚಪ್ಪಾಳೆ ತಟ್ಟುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಇಲಿಯ ಚಪ್ಪಾಳೆ ತಟ್ಟುವುದನ್ನು ನೋಡಿದರೆ ನಿಜವಾಗಿಯೂ ಇದು ಗಣೇಶನನ್ನು ಮನದಲ್ಲಿ ನೆನೆಸಿ ಚಪ್ಪಾಳೆ ತಟ್ಟುತ್ತಿರಬಹುದು ಅನ್ನೋ ಭಾವನೆ ನಿಮ್ಮಲ್ಲಿ ಬರುವುದು ಸದ್ಯಕ್ಕೆ ಈ ಭಕ್ತಿ ಮಯ ಇಲಿಯ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ lalusaini5627 ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು 10 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.