Video: ಗಾಯಗೊಂಡರು ಸಹ ಎರಡು ಸಿಂಹಗಳನ್ನು ಹೆದರಿಸಿ ಓಡಿಸಿದ ಬಹದ್ದೂರ್ ನಾಯಿ, ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂದ ಐಎಫ್ಎಸ್ ಅಧಿಕಾರಿ!!!

ಸಿಂಹಕ್ಕೆ ಕಾಡಿನರಾಜನೆಂದೇ ಗುರುತಿಸಲಾಗುತ್ತದೆ. ಕೆಲವೊಮ್ಮೆ ಇದಕ್ಕೂ ಸಹ ಕಾಡಿನಲ್ಲಿ ಭಯದ ಅರಿವಾಗುವುದು ಸಾಮಾನ್ಯ. ಸಾಮಾನ್ಯವಾಗಿ ನಾವು ಸಿಂಹದ ಬೇಟೆಯಾಡುವ ಹಿಂಸ್ರ ರೂಪವನ್ನೇ ನೋಡಿದ್ದೇವೆ. ಸದ್ಯ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಇದಕ್ಕೆ ತೀರ ಭಿನ್ನವಾಗಿದೆ. ಈ ವಿಡಿಯೋದಲ್ಲಿ ಸಿಂಹವು ಭಯದ ಅರಿವನ್ನು ಮಾಡಿಕೊಂಡಿದೆ. ಯಾಕೆಂದರೆ ಅದಕ್ಕೆ ಇಲ್ಲಿ ಸಂಪೂರ್ಣವಾಗಿ ಭೀತಿ ಆವರಿಸಿರುವದು ಕಂಡು ಬರುತ್ತದೆ. ಸಿಂಹದ ಈ ದೃಶ್ಯ ನೋಡಿದರೆ ಮೊದಲಿಗೆ ವಿಶ್ವಾಸವೇ ಕೂಡುವುದಿಲ್ಲ.

ಧೈರ್ಯ ಮತ್ತು ಶಕ್ತಿಯುತ ಸ್ವಭಾವಕ್ಕೆ ಪ್ರಸಿದ್ಧಿಯನ್ನು ಪಡೆದಿರುವ ಸಿಂಹವನ್ನೇ ನಾವು ಇಲ್ಲಿಯವರೆಗೆ ನೋಡಿದ್ದೇವೆ. ಅದು ಹೆದರುವುದನ್ನು ಹೆಚ್ಚಾಗಿ ನಾವು ಕಂಡೇ ಇಲ್ಲ. ಆದರೆ ಇಲ್ಲಿ ನಡೆದ ಪರಿಸ್ಥಿತಿಯು ಸಿಂಹದ ಜೊತೆಗೆ ತುಂಬಾ ವಿಚಿತ್ರವಾಗಿದೆ.ಯಾಕೆಂದರೆ ವಿಡಿಯೋದಲ್ಲಿ ಸಿಂಹವು ಬೇರೆ ಪ್ರಾಣಿಗಳ ಮೇಲೆ ಹಲ್ಲೆ ಮಾಡುವುದು ಅಥವಾ ಅಟ್ಯಾಕ್ ಮಾಡುವದು ಬಿಟ್ಟು ಇಲ್ಲಿ ತಾನು ಮುಂದಿರುವ ಪ್ರಾಣಿಯನ್ನು ಹೆದರಿ ಹೋಗಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಒಂದು ಗಾಯಗೊಂಡ ನಾಯಿ ಅಂದರೆ ಆ ನಾಯಿಯ ಒಂದು ಕಾಲು ಮುರಿದಿರುತ್ತದೆ ಅದು ಆಕಸ್ಮಿಕವಾಗಿ ಎರಡು ಸಿಂಹಗಳ ಎದುರಿಗೆ ಬರುತ್ತದೆ ಇದನ್ನು ಬರುತ್ತಿದ್ದನ್ನು ನೋಡಿ ಎರಡು ಸಿಂಹಗಳು ಆ ನಾಯಿಯ ಮೇಲೆ ಅ#ಟ್ಯಾಕ್ ಮಾಡಬೇಕು ಎನ್ನುವಷ್ಟರಲ್ಲಿ ನಾಯಿ ತನ್ನ ಧೈರ್ಯದಿಂದ ಆ ಎರಡು ಸಿಂಹಗಳ ಎದುರಿಗೆ ಜೋರಾಗಿ ಬೊಗಳುತ್ತ ಅವುಗಳಿಗೆ ಕಡಿಯಲು ಹೋಗುತ್ತದೆ. ಆ ನಾಯಿಯ ಧೈರ್ಯ ನೋಡಿ ಎರಡು ಸಿಂಹಗಳು ಏನನ್ನು ಮಾಡದೆ ಬದಲಾಗಿ ಅದರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತವೆ. ಆದರೂ ಸಹ ನಾಯಿ ಮತ್ತೆ ಮತ್ತೆ ಸಿಂಹಗಳ ಮೇಲೆ ಓಡೋಡಿ ಅಟ್ಯಾಕ್ ಮಾಡಲು ಹೋಗುತ್ತದೆ. ಆಗ ಸಿಂಹಗಳು ಅಲ್ಲಿಂದ ದೂರ ಹೋಗುತ್ತವೆ. ಧೈರ್ಯ ಮತ್ತು ಸಾಹಸದಿಂದ ಯಾವುದೇ ಸಮಸ್ಯೆಯನ್ನು ಎದುರಿಸಬಹುದು ಅನ್ನೋದಕ್ಕೆ ಈ ವೀಡಿಯೋನೆ ಸಾಕ್ಷಿ.

ವೀಡಿಯೋ ನೋಡಿ.

ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಶೇರ್ ಮಾಡುವಾಗ’ ನಿಮ್ಮ ಹತ್ತಿರ ಧೈರ್ಯ ಮತ್ತು ಸತತ ಪ್ರಯತ್ನ ಮಾಡುವ ಸಾಮರ್ಥ್ಯ ಇದ್ದರೆ ಏನನ್ನು ಸಹ ಸಾಧಿಸಬಹುದು’ ಎಂದು ಕ್ಯಾಪ್ಶನ್ ಬರಿದಿದ್ದಾರೆ.