VIDEO: ಗೋಲ್ಡ್ ಚೈನ್ ಎತ್ತಿಕೊಂಡು ಸಾಗಿದ ಇರುವೆಗಳು: ಚಿಕ್ಕ ಗೋಲ್ಡ್ ಸ್ಮಗ್ಲರ್ ಎಂದ ಐಪಿಎಸ್ ಅಧಿಕಾರಿ!

ಸೋಶಿಯಲ್ ಮೀಡಿಯಾ ಗಳಲ್ಲಿ ಬಹುತೇಕ ಚಿತ್ರ-ವಿಚಿತ್ರ ಎನಿಸುವ ವಿಡಿಯೋಗಳು ಶೇರ್ ಆಗುವುದು ಮಾತ್ರವೇ ಅಲ್ಲದೇ ಬಹಳಷ್ಟು ಬೇಗ ದೊಡ್ಡ ಮಟ್ಟದಲ್ಲಿ ವೈರಲ್ ಕೂಡಾ ಆಗುತ್ತದೆ. ಇದನ್ನು ನೋಡಿದಾಗ ಜನ ಶಾ ಕ್ ಆಗುತ್ತಾರೆ. ಅನೇಕರು ಇದರ ಕುರಿತಂತೆ ತಮ್ಮದೇ ಆದ ಶೈಲಿಯಲ್ಲಿ ವಿವರಣೆಯನ್ನು ಹಾಗೂ ವಿಶ್ಲೇಷಣೆಯನ್ನು ನೀಡಲು ಆರಂಭಿಸುತ್ತಾರೆ. ಇನ್ನು ಕೆಲವರು ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ತಮ್ಮ ಅಭಿಪ್ರಾಯವನ್ನು ಹೊರ ಹಾಕುತ್ತಾರೆ. ಮತ್ತೆ ಕೆಲವರು ಅ ಸ ಮಾ ಧಾನ ವನ್ನು ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ವಿಡಿಯೋ ಎಷ್ಟು ವೈರಲ್ ಆಗುತ್ತದೆಯೋ, ಅದೇ ಮಟ್ಟದಲ್ಲಿ ವೈವಿಧ್ಯಮಯ ಎನಿಸುವಂತಹ ಪರ ಹಾಗೂ ವಿ ರೋ ಧ ಪ್ರತಿಕ್ರಿಯೆಗಳೂ ಹರಿದು ಬರುವುದು ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸೋಶಿಯಲ್ ಮೀಡಿಯಾ ಗಳಲ್ಲಿ ತೀರಾ ಸಾಮಾನ್ಯವಾದ ವಿಷಯ ಎನಿಸಿಬಿಟ್ಟಿದೆ.

ಕೆಲವು ವಿಡಿಯೋಗಳನ್ನು ನೋಡಿದಾಗ ಒಂದು ಕ್ಷಣ ನಮ್ಮ ಕಣ್ಣನ್ನು ನಾವೇ ನಂಬಲು ಸಾಧ್ಯವಾಗುವುದಿಲ್ಲ. ಜಗತ್ತಿನಲ್ಲಿ ಅಂತಹ ಘಟನೆಗಳೂ ನಡೆಯುತ್ತವೆಯೇ? ಎನ್ನುವ ಆಶ್ಚರ್ಯವಾಗುತ್ತದೆ. ಇನ್ನು ಕೆಲವರು ಇಂತಹ ವೀಡಿಯೋಗಳನ್ನು ನೋಡಿದ ನಂತರ ಎಕ್ಸ್ ಫರ್ಟ್ ಗಳ ಹಾಗೆ ಇವೆಲ್ಲಾ ಫೇ ಕ್ ವಿಡಿಯೋಗಳು, ಎಡಿಟಿಂಗ್ ಮಾಡಿರುವ ವಿಡಿಯೋಗಳು ಎಂದು ಹೇಳಿ ಸುಮ್ಮನಾಗಿಬಿಡುತ್ತಾರೆ. ವಿಷಯ ಏನೇ ಆದರೂ ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರಸ್ತುತ ಇಂತಹುದೇ ನಂಬಲು ಅಸಾಧ್ಯವೆನಿಸುವ ಆದರೆ ನೋಡಲು ಅದ್ಭುತವೆನಿಸುವ ವಿಡಿಯೋ ಒಂದು ಭರ್ಜರಿಯಾಗಿ ವೈರಲಾಗುತ್ತಿದ್ದು, ಪ್ರತಿಯೊಬ್ಬರ ಕಣ್ಣಲ್ಲೂ ಆಶ್ಚರ್ಯದ ಬೆಳಕನ್ನು ಮೂಡಿಸುತ್ತಿದೆ.

ದೇಶದಲ್ಲಿ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಏರುತ್ತಿದೆ, ಬಹುಶಃ ಭಾರತೀಯರಲ್ಲಿ ಇದ್ದಷ್ಟು ಚಿನ್ನದ ಮೇಲಿನ ವ್ಯಾಮೋಹವೋ ಜಗತ್ತಿನ ಇನ್ಯಾವುದೇ ದೇಶದಲ್ಲಿ ಕೂಡ ಇಲ್ಲ ಎಂದು ನಾವು ಹೇಳಬಹುದು. ಪ್ರತಿಯೊಬ್ಬರೂ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮನೆಯಲ್ಲಿ ಬಂಗಾರ ಇರಬೇಕೆಂದು ಬಯಸುತ್ತಾರೆ. ಆದರೆ ಪ್ರಾಣಿಗಳಿಗೆ ಬಂಗಾರದ ಮೇಲೆ ವ್ಯಾಮೋಹ ಇರುವುದಿಲ್ಲ, ಅವುಗಳು ಬಂಗಾರದಿಂದ ಏನು ಮಾಡಿಕೊಳ್ಳುತ್ತವೇ ಪಾಪ ಎನ್ನುತ್ತೇವೆ. ಆದರೆ ಈಗ ಅದನ್ನು ಸುಳ್ಳು ಮಾಡಿವೆ ಒಂದು ಇರುವೆಗಳ ಗುಂಪು. ಹೌದು ವೈರಲ್ ವಿಡಿಯೋದಲ್ಲಿ ಇರುವೆಗಳ ಗುಂಪೊಂದು ಆಹಾರ ವಸ್ತುಗಳ ಬದಲಾಗಿ, ಒಂದು ಚಿನ್ನದ ಸರವನ್ನು ಎತ್ತಿ ಕೊಂಡು ಹೋಗುತ್ತಿರುವ ವಿಡಿಯೋ ದೊಡ್ಡಮಟ್ಟದಲ್ಲಿ ಸದ್ದನ್ನು ಮಾಡುತ್ತಿದೆ.

ಈ ವಿಸ್ಮಯಕಾರಿ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇರುವೆಗಳು ಚಿನ್ನದ ಸರವನ್ನು ಎತ್ತಿಕೊಂಡು ಹೋಗುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಾ, ಶೀರ್ಷಿಕೆಯಲ್ಲಿ ಅವರು “ಎಲ್ಲದಕ್ಕಿಂತ ಚಿಕ್ಕ ಗೋಲ್ಡ್ ಸ್ಮಗ್ಲರ್” ಎಂದು ಬರೆದುಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ವಿಡಿಯೋವನ್ನು ಗಮನಿಸಿದಾಗ ಇರುವೆಗಳ ಗುಂಪು ಸಾಲಾಗಿ ಆಹಾರವನ್ನು ಸಾಗಿಸುವಂತೆ, ಚಿನ್ನದ ಸರವನ್ನು ಹೊತ್ತುಕೊಂಡು ಒಂದೇ ಸಾಲಿನಲ್ಲಿ ಮುಂದೆ ಮುಂದೆ ಸಾಗುತ್ತಾ ಚಿನ್ನದ ಸರವನ್ನು ಸಾಗಿಸುತ್ತಾ ಇರುವುದನ್ನು ನಾವು ಗಮನಿಸಬಹುದಾಗಿದೆ.

ವೀಡಿಯೋವನ್ನು ನೋಡಿದಾಗ ಒಂದು ಕ್ಷಣ ಇರುವೆಗಳು ಕೂಡಾ ಇಂತಹ ಕೆಲಸವನ್ನು ಮಾಡುತ್ತವೆಯೇ? ಎಂದು ನಿಮಗೆ ಅನಿಸಬಹುದು. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 11 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದರೆ. ಸಾವಿರಾರು ಜನರು ಈ ಅದ್ಭುತ ದೃಶ್ಯವನ್ನು ಹೊಂದಿರುವ ಸಣ್ಣ ವಿಡಿಯೋಗೆ ಲೈಕ್ ಗಳನ್ನು ನೀಡಿದ್ದಾರೆ. ನೂರಾರು ಜನ ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿದ್ದು, ಮತ್ತಷ್ಟು ಜನರು ವೀಡಿಯೋಗೆ ಕಾಮೆಂಟ್ ಗಳನ್ನು ನೀಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ

ವಿಡಿಯೋ ನೋಡಿದ ಟ್ವಿಟರ್ ಬಳಕೆದಾರರೊಬ್ಬರು, ಇರುವೆಗಳು ಒಗ್ಗಟ್ಟಿನ ಸಂದೇಶವನ್ನು ನೀಡುತ್ತಿದ್ದು ಒಗ್ಗಟ್ಟಾಗಿದ್ದಾರೆ ತಾವು ಏನು ಬೇಕಾದರೂ ಮಾಡಬಲ್ಲೆವು ಎನ್ನುವ ಸಂದೇಶವನ್ನು ಸಾರುತ್ತಿವೆ ಎಂದಿದ್ದಾರೆ. ಮತ್ತೆ ಬೇರೆ ಬೇರೆ ಟ್ವಿಟ್ಟರ್ ಬಳಕೆದಾರರು ಯಾವ ಸೆಕ್ಷನ್ ನ ಅಡಿಯಲ್ಲಿ ಇವುಗಳ ಅ ಪ ರಾಧ ಬರಲಿದೆ, ಕಾನೂನಿನ ಪ್ರಕಾರ ಇವುಗಳನ್ನು ಬಂಧಿಸಲು ಅವಕಾಶವಿದೆಯೇ? ಸರ್ ಇವುಗಳ ಮೇಲೆ ದೂರನ್ನು ದಾಖಲಿಸಿ ಆಗಿದೆಯೇನು? ಯಾವ ಸೆಕ್ಷನ್ ಅಡಿಯಲ್ಲಿ ಇವುಗಳನ್ನು ಬಂಧಿಸುವುರಿ ಎಂದೆಲ್ಲಾ ವಿವಿಧ ಪ್ರಶ್ನೆಗಳನ್ನು ಕೇಳಿದ್ದಾರೆ.