Video; ಚಿಪ್ಸ್ ಪಾಕಿಟ್ ನಲ್ಲಿ ನಕಲಿ ಹಾವನ್ನು ಕಂಡು ಮಂಗ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ!!!
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೋಗಳು ವೈರಲ್ ಆಗುತ್ತಿವೆ. ಪ್ರತಿಯೊಂದು ವೈರಲ್ ಆಗುವ ವೀಡಿಯೋಗಳು ಜನರ ಮನಸ್ಸನ್ನು ತುಂಬಾನೇ ಗೆಲ್ಲುತ್ತವೆ. ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಹೆಚ್ಚಾಗಿ ಪ್ರಾಣಿಗಳ ವೀಡಿಯೋನೆ ಕಂಡು ಬರುತ್ತವೆ. ಅದರಲ್ಲಿ ಸಹ ಮಂಗಗಳ ಕುರಿತು ವಿಡಿಯೋ ಇದ್ದರೆ ಸಾಕು ಅದು ತನ್ನಿಂದ ತಾನೇ ವೈರಲ್ ಆಗಲು ಶುರುವಾಗುತ್ತದೆ.
ಪ್ರಸ್ತುತ ಯುಟ್ಯೂಬ್ ನಲ್ಲಿ ಸಹ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ಸಹ ಒಂದು ಮಂಗನ ವೀಡಿಯೋ ಇದಾಗಿದೆ. ಯುಟ್ಯೂಬ್ ನಲ್ಲಿ ಹೆಚ್ಚಾಗಿ ವೈರಲ್ ಆಗುವ ಮತ್ತು ಜನರು ಮೆಚ್ಚುಗೆ ಪಡುವ ವೀಡಿಯೋ ಎಂದರೆ ಫ್ರಾಂಕ್ ವೀಡಿಯೋ. ಈ ವೀಡಿಯೋಗಳಲ್ಲಿ ಜನರನ್ನು ಅಥವಾ ಪ್ರಾಣಿಗಳನ್ನು ಫ್ರಾಂಕ್ ಮಾಡುತ್ತಾರೆ. ಅದೆಷ್ಟೋ ಜನರು ಫ್ರಾಂಕ್ ವಿಡಿಯೊದಲ್ಲಿ ಮಂಕಾಗಿದ್ದಾರೆ ಆದರೆ ಅವರು ಫ್ರಾಂಕ್ ಆಗುತ್ತಾರೆ ಎಂಬುದು ಅರಿವಿಲ್ಲದೆ ಅವರು ಪ್ರತಿಕ್ರಿಯೆ ನೀಡುತ್ತಾರೆ.
ಈ ವಿಡಿಯೋದಲ್ಲಿ ಒಬ್ಬ ವಕ್ತಿ ಮಂಗನನ್ನು ಫ್ರಾಂಕ್ ಮಾಡಲು ಪ್ರಯತ್ನಿಸುತ್ತಾನೆ. ವ್ಯಕ್ತಿ ಒಂದು ಖಾಲಿಯಾದ ಚಿಪ್ಸ್ ಪ್ಯಾಕೆಟ್ ತಗೆದುಕೊಂಡು ಅದರಲ್ಲಿ ನಕಲಿ ಹಾವನ್ನು ಇಟ್ಟು ಅದನ್ನು ಪ್ಯಾಕ್ ಮಾಡುತ್ತಾನೆ. ಪ್ಯಾಕ್ ಮಾಡಿ ಅಲ್ಲಿದ್ದ ಒಂದು ಮಂಗನ ಹತ್ತಿರ ಹಣ್ಣುಗಳ ಜೊತೆಗೆ ಈ ಪ್ಯಾಕೆಟ್ ಸಹ ಇಡುತ್ತಾನೆ. ಮಂಗ ಸಾವಕಾಶವಾಗಿ ಅಲ್ಲಿದ್ದ ಹಣ್ಣುಗಳು ತಿನ್ನುತ್ತಾ ಆ ಚಿಪ್ಸ್ ಪ್ಯಾಕೆಟ್ ಹತ್ತಿರ ಬರುತ್ತೆ. ತದನಂತರ ಆ ಚಿಪ್ಸ್ ಪ್ಯಾಕೆಟ್ ತನ್ನ ಕೈಯಲ್ಲಿ ತಗೆದುಕೊಂಡು ಬಾಯಿಯಿಂದ ಅದನ್ನು ಹರಿಯಲು ಪ್ರಯತ್ನ ಮಾಡುತ್ತದೆ ಎರಡು ಮೂರು ಸಲ ಪ್ರಯತ್ನ ಮಾಡಿದರು ಸಹ ಪ್ಯಾಕೆಟ್ ಸರಿಯಾಗಿ ಹರಿಯುವದಿಲ್ಲ ಕೊನೆಗೆ ಆ ಪ್ಯಾಕೆಟ್ ಹರಿಯುತ್ತದೆ ಹರಿದು ಇನ್ನೇನು ಒಳಗಡೆ ಇದ್ದ ಚಿಪ್ಸ್ ತಿನ್ನಬೇಕು ಅನ್ನೋವಷ್ಟರಲ್ಲಿ ಈ ಮಂಗಗೆ ಅಲ್ಲಿದ್ದ ನಕಲಿ ಹಾವು ಕಾಣುತ್ತದೆ ಇದನ್ನು ಕಂಡು ಮಂಗ ಮಾಡಿದ ಪ್ರತಿಕ್ರಿಯೆ ನೋಡಿದರೆ ತುಂಬಾ ನಗು ಬರುತ್ತದೆ.
ವೀಡಿಯೋ ನೋಡಿ.
ಪ್ರಸ್ತತ ವೀಡಿಯೋ ಯುಟ್ಯೂಬ್ ನಲ್ಲಿ Angel naga ಎಂಬ ಹೆಸರಿನ ಚಾನೆಲ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು 1 ಮಿಲಿಯನ್ ಗಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಲೈಕ್ಸ್ ಸಹ ಬಂದಿವೆ. ಸದ್ಯಕ್ಕೆ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.