Video; ಚಿರತೆ ಹಠಾತ್ ಕಾಡುಹಂದಿಯ ಮೇಲೆ ಮಾಡಿತು ಅಟ್ಯಾಕ್; ಹಂದಿ ತಿರುಗಿದಾಗ ಚಿರತೆ ಸದ್ದಿಲ್ಲದೆ ಎಸ್ಕೇಪ್..! ಯಾಕೆ?
ಕಾಡಿನಲ್ಲಿ ಪ್ರಾಣಿಗಳ ಮಧ್ಯೆ ನಡೆಯುತ್ತಿರುವ ಸದಾ ವಿಚಿತ್ರವಾದ ದೃಶ್ಯಗಳು ತುಂಬಾ ರೋಚಕವಾಗಿರುತ್ತವೆ. ಇಂಥ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿಯಲು ವೈಲ್ಡ್ ಫೋಟೋಗ್ರಾಫರ್ ಗಳು ಹಗಲು ರಾತ್ರಿ ಶ್ರಮಿಸುತ್ತಿರುತ್ತಾರೆ. ಹಗಲು ರಾತ್ರಿ ಒಂದು ಮಾಡಿ ಕಣ್ಣಲ್ಲಿ ಕಣ್ಣಿಟ್ಟು ಶೂಟ್ ಮಾಡುತ್ತಿರುವಾಗ ಕೆಲವು ಅದ್ಭುತ ಸೀನ್ ಗಳು ನಮಗೆ ನೋಡಲು ಸಿಗುತ್ತವೆ.
ಅತೀ ಕಡಿಮೆ ಸಮಯದಲ್ಲಿ ಬೇಟೆಯಾಡುವದರಲ್ಲಿ ಚಿರತೆಯ ಕೈ ಬೇರೆ ಯಾವ ಪ್ರಾಣಿಯೂ ಹಿಡಿಯಲು ಸಾಧ್ಯವಿಲ್ಲ. ಕೆಲವೊಮ್ಮೆ ಈ ಪ್ರಾಣಿಗಳು ಬೇಟೆಯಾಡುವ ಸಂದರ್ಭದಲ್ಲಿ ಸಮಸ್ಯೆಗಳು ಸಹ ಉದ್ಭವಿಸುವುದು ಸಹಜ. ಇಂಥದ್ದೇ ಒಂದು ಸಮಸ್ಯೆ ಚಿರತೆಗೆ ಈ ವಿಡಿಯೋದಲ್ಲಿ ಉದ್ಭವಿಸಿದೆ. ಪ್ರಸ್ತುತ ವೀಡಿಯೋದಲ್ಲಿ ಚಿರತೆ ಪ್ಲಾನ್ ಮಾಡಿ ಕಾಡುಹಂದಿಯ ಮೇಲೆ ಹಿಂದಿನಿಂದ ಸರಿಯಾಗಿ ಹೊಂಚು ಹಾಕಿ ಅಟ್ಯಾಕ್ ಮಾಡಿದೆ. ಆದರೆ ಈ ಬೇಟೆಯಾಡುವ ಸಂದರ್ಭದಲ್ಲಿ ಒಂದೇ ಒಂದು ಕ್ಷಣ ಲೇಟಾಗಿದ್ದೆ ತಡ ಚಿರತೆ ಅಲ್ಲಿಂದ ಕ್ಷಣದಲ್ಲಿ ಪಲಾಯನ ಮಾಡಿದೆ. ಚಿರತೆಯು ಹಿಂದಿನಿಂದ ಕಾಡುಹಂದಿಯ ಮೇಲೆ ಅಟ್ಯಾಕ್ ಮಾಡಿದಾಗ, ಕಾಡುಹಂದಿಯು ತನ್ನ ಮೇಲಿನ ಅಪಾಯವನ್ನು ಗ್ರಹಿಸಿ ಕ್ಷಣದಲ್ಲಿ ಹೋರಾಟಕ್ಕೆ ಸಿದ್ಧವಾಗಿ ತಿರುಗಿ ನಿಂತಿದೆ. ಇಲ್ಲಿ ಚಿರತೆ ಕಾಡುಹಂದಿಯನ್ನು ತನ್ನ ಬಾಯಿಯಲ್ಲಿ ಮತ್ತು ಉಗುರುಗಳಲ್ಲಿ ಹಿಡಿಯುವ ಮುನ್ನವೇ ಹಂದಿ ತಿರುಗಿ ನಿಂತಿದೆ. ಆಗ ಚಿರತೆ ಒಮ್ಮೆಲೆ ಬೆಚ್ಚಿ ಬಿದ್ದಿದೆ. ಕಾರಣ ಅದರ ಹರಿತವಾದ ಹಲ್ಲುಗಳು ಚಿರತೆಗೆ ಕಂಡಿದ್ದೇ ತಡ ಚಿರತೆ ಸ್ವಲ್ಪವೂ ತಡ ಮಾಡದೇ ಚಿರತೆ ಅಲ್ಲಿಂದ ಎಸ್ಕೇಪ್ ಆಗುವದೇ ಒಳ್ಳೆಯದೆಂದು ತಿಳಿದಿದೆ.
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಈ ವಿಡಿಯೋಗೆ 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.