Video; ಚೆಂಡಿನ ಜೊತೆಗೆ ಅಳಿಲಿನ ಸುಂದರ ಅಷ್ಟೇ ಕ್ಯೂಟ್ ಆಟ ಆಯಿತು ವೈರಲ್!
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಡಿಯೋಗಳನ್ನು ನೋಡಲು ನೇಟಿಜನ್ಸಗಳು ತುಂಬಾ ಇಷ್ಟ ಪಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಳಿಲಿನ ವಿಡಿಯೋ ಒಂದು ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ. ಈ ವಿಡಿಯೋದಲ್ಲಿ ಅಳಿಲು ಚಂಡಿನ ಜೊತೆಗೆ ಆಡಿದ ಆಟ ಯಾವುದು ನೋಡೋಣ ಬನ್ನಿ.
ಪ್ರಸ್ತುತ ವಿಡಿಯೋದಲ್ಲಿ ಒಂದು ಗ್ರೌಂಡ್ ಕಂಡುಬರುತ್ತಿದೆ. ಆ ಗ್ರೌಂಡ್ ನಲ್ಲಿ ಕೆಲವು ಚಂಡುಗಳು ಬಿದ್ದಿವೆ. ಅಲ್ಲಿ ಬೇರೆ ಯಾರು ಆಟಗಾರರು ಕಾಣುತ್ತಿಲ್ಲ. ಅದೇ ಸಮಯದಲ್ಲಿ ಅಳಿಲು ಒಂದು ಅಲ್ಲಿ ಚಂಡಿನ ಜೊತೆಗೆ ತನ್ನ ಆಟವನ್ನು ಪ್ರಾರಂಭ ಮಾಡಿದೆ. ಅಳಿಲು ಈ ಆಟವನ್ನು ಆಡುವಾಗ ಚೆಂಡಿನ ಜೊತೆಗೆ ತುಂಬಾ ಸಕ್ಕತ್ತಾಗಿ ತನ್ನ ಚಟುವಟಿಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಚಂಡಿನ ಮೇಲೆ ಏರುವುದು, ಅದನ್ನು ಬದಿಗೆ ಸರಿಸುವುದು ಹಾಗೂ ಅದರ ಮೇಲಿಂದ ಜಿಗಿಯುವುದು ಮತ್ತು ಚೆಂಡನ್ನು ತನ್ನ ಮೇಲಿಂದ ಎತ್ತಿ ಒಗೆಯುವುದು, ಅದನ್ನು ಓಡಿಸುವುದು ಹೀಗೆ ತರತರದ ಆಟವನ್ನು ಚಂಡಿನ ಜೊತೆಗೆ ಆಡುತ್ತಿರುವುದು ಕಂಡು ಬರುತ್ತಿದೆ. ಅಳಿಲಿನ ಈ ಆಟ ನೋಡಲು ತುಂಬಾ ತಮಾಷೆ ಅನಿಸುತ್ತದೆ.
ನೋಡಿ ಈ ವಿಡಿಯೋ…
https://twitter.com/Laughs_4_All/status/1561891307773124609?t=eZWbsTybZMYzZfkLdtxlsw&s=19
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ Laughs 4 All ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಸುಮಾರು 7 ಲಕ್ಷಗಳವರೆಗೆ ವೀಕ್ಷಣೆಯನ್ನು ಪಡೆದಿದೆ.